ಯೂಟ್ಯೂಬರ್ ಮಧು ಗೌಡ ಬಿಗ್ ಬಾಸ್'ಗೆ...!? ದುಡ್ಡು ಇರೋರು ದೊಡ್ಮನೆಗೆ ಬೇಡ ಎಂದ‌‌ ಜನ

Published : Sep 24, 2025, 06:40 PM IST

ಕನ್ನಡ ಬಿಗ್ ಬಾಸ್ ಗೆ ಕ್ಷಣಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಕನ್ನಡದ ಜನಪ್ರಿಯ ಯೂಟ್ಯೂಬರ್ ಆಗಿರುವ ಮಧು ಗೌಡ ಅವರು ಈ ಬಾರಿ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಓಡುತ್ತಿದೆ. ಇದಕ್ಕೆ ಜನ ಯಾವ ರೀತಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಗೊತ್ತಾ?

PREV
18
ಯೂಟ್ಯೂಬರ್ ಮಧು ಗೌಡ

ಯೂಟ್ಯೂಬಲ್ಲಿ ಸಣ್ಣ ಪುಟ್ಟ ಪರ್ಸನಲ್ ವ್ಲೋಗ್ ಮಾಡಿ, ಇದೀಗ ಲಕ್ಷಾಂತರ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿರುವ ಯೂಟ್ಯೂಬರ್ ಅಂದ್ರೆ ಅದು ಮಧು ಗೌಡ (Madhu Gowda). ಈಕೆ ಕನ್ನಡದ ಜನಪ್ರಿಯ ಯೂಟ್ಯೂಬರ್ ಅಂತಾನೂ ಹೇಳಬಹುದು.

28
ಬಿಗ್ ಬಾಸ್ ಗೆ ಎಂಟ್ರಿ

ಇದೀಗ ಹೊಸದಾಗಿ ಬಂದಿರುವ ಸುದ್ದಿ ಏನಂದ್ರೆ, ಮಧು ಗೌಡ ಬಿಗ್ ಬಾಸ್ ಸೀಸನ್ 12ರ (Bigg Boss season 12) ಕಂಟೆಸ್ಟಂಟ್ ಆಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿ ವೈರಲ್ ಆಗುತ್ತಿದೆ.

38
ಜನ ಏನು ಹೇಳ್ತಿದ್ದಾರೆ

ಮಧು ಗೌಡ ದೊಡ್ಮನೆಗೆ ಎಂಟ್ರಿ ಕೊಡುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ, ವೈರಲ್ ಆಗಿರುವ ಸುದ್ದಿ ನೋಡಿ ಜನ ಈಕೆ ಬಿಗ್ ಬಾಸ್ ಬರೋದು ಬೇಡ ಅಂತಿದ್ದಾರೆ. ಏನು ಸಾಧನೆ ಮಾಡದವರು ಬಿಗ್ ಬಾಸ್ ಗೆ ಯಾಕೆ ಬರೋದು ಎಂದು ಕೇಳಿದ್ದಾರೆ.

48
ದುಡ್ಡು ಇದ್ದವರಿಗೆ ಬಿಗ್ ಬಾಸ್ ಯಾಕೆ?

ಅಷ್ಟೇ ಅಲ್ಲ ಮಧು ಗೌಡ, ಸಿಕ್ಕಾಪಟ್ಟೆ ಶ್ರೀಮಂತೆಯಾಗಿದ್ದು, ಹಾಗಾಗಿ ದುಡ್ಡು ಇರುವವರು ಮತ್ತೆ ಯಾಕೆ ದೊಡ್ಮನೆಗೆ ಎಂಟ್ರಿ ಕೊಡೋದು? ತಿನ್ನೋದು, ಮಲಗೋದು, ವಿಡೀಯೋ ಮಾಡಿ ಹಾಕಿ ಫೇಮಸ್ ಆಗಿದ್ದಾರೆ ಅಷ್ಟೇ. ಇಂತವರು ಬಿಗ್ ಬಾಸ್ ಗೆ ಬರೋದು ಬೇಡ ಎಂದಿದ್ದಾರೆ.

58
ಸೋಶಿಯಲ್ ಮೀಡಿಯಾ ಸ್ಟಾರ್

ನಟಿ ಭವ್ಯಾ ಗೌಡ (Bhavya Gowda) ಸ್ನೇಹಿತೆಯಾಗಿರುವ ಮಧು ಗೌಡ, ಒಂದು ಕಾಲದಲ್ಲಿ ಜೊತೆಯಾಗಿ ಟಿಕ್ ಟಾಕ್ ವಿಡಿಯೋ ಮಾಡಿ ವೈರಲ್ ಆಗಿದ್ದವರು. ಇನ್ನು ಮಧು ಗೌಡಾಗೆ ಇನ್‌ಸ್ಟಾಗ್ರಾಮ್‌, ಯುಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಫಾಲೋವರ್ಸ್‌ ಇದ್ದಾರೆ. ಆದರೆ ಈಕೆ ಮೊದಲೇ ಶ್ರೀಮಂತರೇ. ಇವರ ತವರು ಮನೆಯಲ್ಲಿ ಹದಿನಾಲ್ಕು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

68
ಯೂಟ್ಯೂಬರ್ ಜೊತೆ ಮದುವೆ

ಇನ್ನು ಮಧು ಗೌಡ ಯುಟ್ಯೂಬರ್‌ ನಿಖಿಲ್‌ ರವೀಂದ್ರ ಅವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.. ಲವ್‌, ಮದುವೆ ಎಂದು ತಮ್ಮ ನಿತ್ಯ ಜೀವನವನ್ನೆ ಕಂಟೆಂಟ್ ಮಾಡಿ ಅಪ್ ಲೋಡ್ ಮಾಡುತ್ತಿದ್ದ ಈ ಜೋಡಿ, ಒಂದು ವಾರಗಳ ಕಾಲ ಸಕಲ ಸಂಪ್ರದಾಯ ಶಾಸ್ತ್ರಗಳೊಂದಿಗೆ ಸೆಲೆಬ್ರಿಟಿಗಳೇ ಹುಬ್ಬೇರಿಸುವಂತೆ ಮದುವೆಯಾಗಿದ್ದರು.

78
ಲಕ್ಸುರಿ ಲೈಫ್ ಲೀಡ್ ಮಾಡುವ ಬೆಡಗಿ

ಕೇವಲ 25 ವರ್ಷದ ಮಧು ಗೌಡ, ಲಕ್ಸುರಿ ಲೈಫ್ ಲೀಡ್ ಮಾಡುತ್ತಿದ್ದು, ಗೋಲ್ಡ್‌, ವಾಹನಗಳು ಹೀಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ದೊಡ್ಡ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿಯೂ ಕಾಣಿಸುತ್ತಿರುತ್ತಾರೆ.

88
ನಾದಿನಿ ಜೊತೆ ಸೇರಿ ಬ್ಯುಸಿನೆಸ್

ಕೆಲವು ತಿಂಗಳ ಹಿಂದೆ ಮಧು ಗೌಡ ಹಾಗೂ ನಾದಿನಿ ನಿಶಾ ರವೀಂದ್ರ ಇಬ್ಬರು ಜೊತೆಯಾಗಿ ಸೇರಿ ಧುವಸ್ತ್ರ ಎನ್ನುವ ಬಟ್ಟೆ ಉದ್ಯಮ ಆರಂಭಿಸಿದ್ದಾರೆ. ಅಲ್ಲಿ ಮಧು ಗೌಡ, ನಿಶಾ ಹಾಕುವ ಸೀರೆಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆಯಂತೆ. ಈ ಬ್ಯುಸಿನೆಸ್ ಕೂಡ ಇದೀಗ ಯಶಸ್ವಿಯಾಗಿ ನಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories