ಸುದೀಪ್​ ಸರ್ ಪ್ಲೀಸ್​ ಛಾನ್ಸ್​ ಕೊಡಿ.. ನನ್​ ಅಪ್ಪನ ಮೇಲಾಣೆ, ಮಗು ಥರ ಬರ್ತೀನಿ Huccha Venkat ಕಣ್ಣೀರು

Published : Sep 24, 2025, 05:26 PM IST

ಒಂದು ಕಾಲದಲ್ಲಿ ಬಿಗ್​ಬಾಸ್​ ಟಿಆರ್​ಪಿ ಹೆಚ್ಚಿಸಿದ್ದ ಹುಚ್ಚ ವೆಂಕಟ್​ ಅವರ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ತಮಗೆ ಬಿಗ್ ಬಾಸ್ ಮನೆಗೆ ಬರಲು ಮತ್ತೊಂದು ಅವಕಾಶ ನೀಡುವಂತೆ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಅವರು ದೈನ್ಯವಾಗಿ ಮನವಿ ಮಾಡಿದ್ದಾರೆ.  

PREV
16
ಬಿಗ್​ಬಾಸ್​ ಟಿಆರ್​ಪಿ ಏರಿಸಿದ್ದ ಹುಚ್ಚ ವೆಂಕಟ್​

ಹುಚ್ಚ ವೆಂಕಟ್​ ( Huccha Venkat) ಸದ್ಯ ಎಲ್ಲೋ ಕಣ್ಮರೆಯಾಗಿದ್ದಾರೆ. Bigg Bossನಲ್ಲಿ ಹುಚ್ಚುಚ್ಚಾಗಿ ಆಡಿ ಅದರ ಮೂಲಕವೇ ಷೋಗೆ ಟಿಆರ್​ಪಿ ಹೆಚ್ಚಿಸಿರೋ ಖ್ಯಾತಿ ಇವರದ್ದು. ಅಂದಹಾಗೆ ಇವರು ಬಿಗ್​ಬಾಸ್​-3 ರಲ್ಲಿ ಸ್ಪರ್ಧಿಯಾಗಿದ್ದರು. ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಎಲ್ಲವೂ ಆಗಿರೋ ವೆಂಕಟ್​ ಅವರು, ಬಹಳಷ್ಟು ಕಾಂಟ್ರವರ್ಸಿ ಮಾಡಿಕೊಂಡಿದ್ದರಿಂದಲೇ ಅವರಿಗೆ ಸಹಜವಾಗಿ ಬಿಗ್​ಬಾಸ್​ನಲ್ಲಿ ಆಫರ್​ ಬಂದಿತ್ತು.

26
ಸ್ಪರ್ಧಿ ಮೇಲೆ ಕೈ ಮಾಡಿದ್ದ ವೆಂಕಟ್​

ಆದರೆ, ಅಲ್ಲಿ ಅವರು ಸಹ ಸ್ಪರ್ಧಿ ಮೇಲೆ ಕೈ ಮಾಡಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿಯೂ ಅವರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಜೊತೆಗೆ ಬೌನ್ಸರ್‌ಗಳೂ ಇದ್ದರು. ಆಗಲೂ ಅಲ್ಲಿದ್ದ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದರು ವೆಂಕಟ್. ಅಲ್ಲಿಂದ ಬಂದ ಮೇಲೂ ಕೆಲ ಕಾಲ ಫೇಮಸ್​ ಆಗಿದ್ದ ವೆಂಕಟ್​ ಅವರು ಸದ್ಯ ಮಾಯವಾಗಿದ್ದಾರೆ.

36
ಹುಚ್ಚ ವೆಂಕಟ್​ ವಿಡಿಯೋ ವೈರಲ್​

ಈಗ ದಿಢೀರ್​ ಎಂದು ಅವರ ವಿಡಿಯೋ ವೈರಲ್​ ಆಗಿದೆ. ಬಿಗ್​ಬಾಸ್​ಗೆ ಹೋಗಲು ನನಗೆ ಇನ್ನೊಂದು ಅವಕಾಶ ಕೊಡಿ ಎಂದು ಅವರು ದನನೀಯವಾಗಿ ಕೇಳಿಕೊಂಡಿರುವ ವಿಡಿಯೋ ಇದಾಗಿದೆ. ಅಷ್ಟಕ್ಕೂ ಇದು ಹಳೆಯ ವಿಡಿಯೋ ಎನ್ನಲಾಗಿದ್ದು, ಇದೀಗ ಬಿಗ್​ಬಾಸ್​ 12 ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶೇರ್​ ಮಾಡಲಾಗಿದೆ.

46
ಸುದೀಪ್​ ಅವರಿಗೆ ಮನವಿ

ಇದರಲ್ಲಿ ಹುಚ್ಚ ವೆಂಕಟ್​ ಅವರು, "ಈ ಮೇಸೆಜ್ ಕಲರ್ಸ್ ಕನ್ನಡದವರಿಗೆ ಮತ್ತು ಕಿಚ್ಚ ಸುದೀಪ್ ಅವರಿಗೂ ಕೂಡ. ಮತ್ತೆ ಬಿಗ್ ಬಾಸ್ ಮನೆಗೆ ಬರೋದಕ್ಕೆ ನನಗೆ ಒಂದು ಅವಕಾಶವನ್ನು ನೀಡಿ. ಖಂಡಿತಾ ಯಾವುದೇ ಥರದ ಗಲಾಟೆ ಮಾಡಲ್ಲ. ಎಲ್ಲಾ ಟಾಸ್ಕ್‌ಗಳನ್ನು ಮಾಡುತ್ತೇನೆ. ಪ್ಲೀಸ್ ನನಗೆ ಅವಕಾಶ ಕೊಡಿ. ಒಂದು ದಿನಕ್ಕೆ ಕರೆದರೂ ನಾನು ಬರುತ್ತೇನೆ. ಒಂದು ವಾರ ಅಥವಾ ಇಡೀ ಸೀಸನ್ ಇರಬೇಕು ಎಂದರೂ ನಾನು ರೆಡಿ ಇದ್ದೇನೆ. ಕೊನೆಗೆ ಫಿನಾಲೆಗೆ ಕರೆದರೂ ನಾನು ಬರುತ್ತೇನೆ. ಒಟ್ಟಿನಲ್ಲಿ ನನ್ನನ್ನು ಕರೆಯಿರಿ" ಎಂದಿದ್ದಾರೆ.

56
ಮಗು ಥರ ಬರ್ತೀನಿ

ನನ್ನ ತಂದೆಯ ಮೇಲೆ ಆಣೆ. ಮೊದಲಿನ ರೀತಿಯಲ್ಲಿ ಯಾವ ಥರದ ಗಲಾಟೆಯನ್ನೂ ಮಾಡುವುದಿಲ್ಲ. ಈ ಟೈಮ್​ನಲ್ಲಿ ನನಗೆ ಹೆಲ್ಪ್​ ಮಾಡಿ. ಸುದೀಪ್​ ಅವರು ಮನಸ್ಸು ಮಾಡಿದರೆ ಆಗುತ್ತದೆ. ಬಿಗ್​ಬಾಸ್​ನಲ್ಲಿ ಹೇಗಾದ್ರೂ ಬರಬೇಕು. ಖಂಡಿತವಾಗಿಯೂ ಯಾರಿಗೂ ನೋವು ಕೊಡಲ್ಲ, ಮಗು ರೀತಿ ಬರ್ತೇನೆ, ಮಗು ರೀತಿ ಹೋಗ್ತೇನೆ...

66
ಹಲ್ಲೆ ಮಾಡಿದ್ದರಿಂದ ಹೊರಕ್ಕೆ

ಅಂದಹಾಗೆ, ಬಿಗ್ ಬಾಸ್‌ ಕನ್ನಡ ಸೀಸನ್ 3ರಲ್ಲಿ ಹಲ್ಲೆ ಮಾಡಿದ್ದ ಕಾರಣಕ್ಕೇ ಹುಚ್ಚ ವೆಂಕಟ್ ಶೋನಿಂದ ಆಚೆ ಬಂದಿದ್ದರು. ಇನ್ನು, ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿಯೂ ಅವರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಜೊತೆಗೆ ಬೌನ್ಸರ್‌ಗಳೂ ಇದ್ದರು. ಆಗಲೂ ಅಲ್ಲಿದ್ದ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದರು ವೆಂಕಟ್.

Read more Photos on
click me!

Recommended Stories