ಸೆಲೆಬ್ರಿಟಿಗಳ ಜೊತೆ ಡಾ. ಬ್ರೋ ಫೋಟೋ ವೈರಲ್; ನೀವು ಕೂಡ ಸ್ಟಾರ್ ಎಂದ ನೆಟ್ಟಿಗರು

Published : Feb 08, 2025, 12:36 PM IST

ಕನ್ನಡ ಸಿನಿಮಾ ಸೆಲೆಬ್ರಿಟಿಗಳ ಜೊತೆ ಮಿಂಚುತ್ತಿರುವ ಡಾ. ಬ್ರೋ. ಅಣ್ಣ ನೀನು ಕೂಡ ಸಿನಿಮಾ ಮಾಡ್ಬೋದು ಎಂದ ನೆಟ್ಟಿಗರು..... 

PREV
16
ಸೆಲೆಬ್ರಿಟಿಗಳ ಜೊತೆ ಡಾ. ಬ್ರೋ ಫೋಟೋ ವೈರಲ್; ನೀವು ಕೂಡ ಸ್ಟಾರ್ ಎಂದ ನೆಟ್ಟಿಗರು

ಕನ್ನಡ ಯೂಟ್ಯೂಬರ್‌ಗಳಲ್ಲಿ ಸಖತ್ ಫೇಮಸ್ ಆಗಿರುವ ಕ್ರಿಯೇಟರ್‌ ಅಂದ್ರೆ ಡಾ.ಬ್ರೋ. ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗುವ ವ್ಯಕ್ತಿ ಎಂದರೆ ತಪ್ಪಾಗದು. 

26

ಮಿಲಿಯನ್ ಫಾಲೋವರ್ಸ್ ಹೊಂದಿರುವ ಡಾ.ಬ್ರೋ ಬಳಿ ಸಾವಿರಾದು ಮಂದಿ ಫೋಟೋ ಕ್ಲಿಕ್ ಮಾಡಿಕೊಳ್ಳಲು ಕಾಯುತ್ತಿರುತ್ತಾರೆ ಆದರೆ ಇವರು ಕ್ಲಿಕ್ ಮಾಡಿಕೊಂಡಿರುವವರೇ ಬೇರೆಯವರ ಜೊತೆ.

36

ಹೌದು! ನಟ ದರ್ಶನ್, ನಟಿ ರಚಿತಾ ರಾಮ್, ನಟ ಸಿಹಿಕಹಿ ಚಂದ್ರು, ಕ್ರಿಕೆಡರ್ ಅನಿಲ್ ಕುಂಬ್ಳೆ, ನಟ ಶಿವರಾಜ್‌ಕುಮಾರ್, ಪ್ರದೀಪ್ ಈಶ್ವರ್, ನಟ ಕಿಚ್ಚ ಸುದೀಪ್‌ ಸೇರಿದಂತೆ ಹಲವರ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.

46

ಈ ಫೋಟೋಗಳನ್ನು ನೋಡಿದ ಮತ್ತೊಬ್ಬ ಖ್ಯಾತ ಕ್ರಿಯೇಟರ್ ವಿಕ್ಕಿಪೀಡಿಯಾ ಎಂಬುವವರು 'ನನ್ನ ಹತ್ರ ಡಾ. ಬ್ರೋ ಫೋಟೋ ಇದೆ. ನಾನು ಪೋಸ್ಟ್‌ ಹಾಕುತ್ತೀನಿ ಸೆಲೆಬ್ರಿಟಿ ಜೊತೆ ಅಂತ' ಎಂದು ಕಾಮೆಂಟ್ ಮಾಡಿದ್ದಾರೆ.

56

ಆದರೆ ಕನ್ನಡಿಗರಿಗೆ ಬೇಸರ ಆಗಿರುವುದು ಏನೆಂದರೆ ಇಷ್ಟೋ ಜನರ ನಡುವೆ ಯಶ್‌ ಜೊತೆಗಿರುವ ಫೋಟೋ ಹಾಕಿಲ್ಲ ಎಂದು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದೆ.

66

ಯೂಟ್ಯೂಬ್, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಹಣ ಸಂಪಾದನೆ ಮಾಡುತ್ತಿರುವ ಡಾ.ಬ್ರೋ ಇದೀಗ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ದಿನದಿಂದ ದಿನ ವಿಡಿಯೋ ಕಡಿಮೆ ಆಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

Read more Photos on
click me!

Recommended Stories