ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ಆನಂತರ ಐಶ್ವರ್ಯ ಶಿಂಧೋಗಿ ಕಿರುತೆರೆಗೆ ಕಾಲಿಟ್ಟಿದ್ದು. ಮಂಗಳಗೌರಿ, ನಾಗಿಣಿ-2, ಲಚ್ಚಿ ಮತ್ತು ಶಾಂಭವಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.
27
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿ ಸುಮಾರು 90 ದಿನಗಳ ಕಾಲ ಉಳಿದುಕೊಂಡು ಎಲಿಮಿನೇಟ್ ಅಗಿ ಹೊರ ಬಂದಿರುವ ಐಶ್ವರ್ಯ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ.
37
ಹೀಗಾಗಿ ಪ್ರತಿಯೊಬ್ಬರು ಮದುವೆ ಯಾವಾಗ? ಬಾಯ್‌ಫ್ರೆಂಡ್ ಇದ್ದಾನಾ? ಶಿಶಿರ್‌ನ ಲವ್ ಮಾಡ್ತಿದ್ದೀರಾ? ಎಂದು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಈಗ ಉತ್ತರ ನೀಡಿದ್ದಾರೆ.
47
ಸದ್ಯಕ್ಕೆ ನಾನು ಮದುವೆ ಆಗುವ ಯೋಚನೆ ಮಾಡಿಲ್ಲ ಆದರೆ ಒಳ್ಳೆಯ ಗುಣಗಳು ಇರುವ ಹುಡುಗ ಹಾಗೂ ನನಗೆ ಕಾಳಜಿ ಮಾಡುವ ಹುಡುಗ ಸಿಗಬೇಕು ಎಂದು ಐಶ್ವರ್ಯ ಹೇಳಿದ್ದಾರೆ.
57
ಅಷ್ಟೇ ಅಲ್ಲ ನನಗೆ ಗೌರವ ಕೊಡುವವನಾಗಿರಬೇಕು. ಅಂತಹ ಹುಡುಗ ಸಿಕ್ಕರೆ ಮದುವೆಯಾಗುವೆ ಎಂದು ಐಶ್ವರ್ಯ ಹೇಳಿ ಬಿಟ್ಟಿದ್ದಾರೆ ಆದರೆ ಹುಡುಗ ಯಾರೆಂದು ರಿವೀಲ್ ಮಾಡಿಲ್ಲ.
67
ತಂದೆ ತಾಯಿ ಇಲ್ಲದ ಐಶ್ವರ್ಯ ಶಿಂಧೋಗಿ ಅವರಿಗೆ ತವರು ಮನೆ ಆಗಿದ್ದು ಬಿಗ್ ಬಾಸ್ ಸೀಸನ್ 11. ಇದುವರೆಗೂ ಯಾರಿಗೂ ಮಗಳೆ ಎಂದು ಬಿಗ್ ಬಾಸ್ ಕರೆದಿರಲಿಲ್ಲ. ಇದೊಂದು ಹಿಸ್ಟರಿ ಎನ್ನಬಹುದು.
77
ಫ್ಯಾಮಿಲಿಯಿಂದ ಪತ್ರ ಬರದೆ ಇದ್ದಾಗ, ಮನೆ ನೆನಪು ಆದಾಗ ಹಾಗೂ ಎಲಿಮಿನೇಟ್ ಆಗಿ ಹೊರ ಬರುವ ದಿನ ಬಿಗ್ ಬಾಸ್ ನಿಜಕ್ಕೂ ತಂದೆಯ ಸ್ಥಾನದಲ್ಲಿ ನಿಂತು ಮಾತನಾಡಿದ್ದು ವೀಕ್ಷಕರ ಮನಸ್ಸು ಮುಟ್ಟಿದೆ.