ಮದುವೆ ಸೆಟ್‌ ಆಗುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ಸೋನು ಶ್ರೀನಿವಾಸ್ ಗೌಡ; ಫೋಟೋ ವೈರಲ್

Published : Feb 08, 2025, 11:27 AM IST

ಮದುವೆ ಸುದ್ದಿ ಹರಡುತ್ತಿದ್ದಂತೆ ಹೇರ್‌ ಕಲರ್ ಮತ್ತು ಹೇರ್ ಸ್ಟೈಲ್ ಬದಲಾಯಿಸಿದ ಸೋನು ಶ್ರೀನಿವಾಸ್ ಗೌಡ......

PREV
16
ಮದುವೆ ಸೆಟ್‌ ಆಗುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ಸೋನು ಶ್ರೀನಿವಾಸ್ ಗೌಡ; ಫೋಟೋ ವೈರಲ್

ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಈ ವರ್ಷ ಮದುವೆ ಆಗುತ್ತಿದ್ದಾಳೆ ಅನ್ನೋದೆ ದೊಡ್ಡ ಸುದ್ದಿಯಾಗಿದೆ. ಏಕೆಂದರೆ ಹುಡುಗ ಬಗ್ಗೆ ಎಲ್ಲಿಯೂ ರಿವೀಲ್ ಆಗಿಲ್ಲ.

26

ಸೋನು ಶ್ರೀನಿವಾಸ್ ಗೌಡ ಇದ್ದಕ್ಕಿದ್ದಂತೆ ಹೇರ್‌ ಕಲರ್ ಮತ್ತು ಹೇರ್‌ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ ಸೋನು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುತ್ತಿರುವ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ. 

36

ಹೊಸ ವರ್ಷದಂದು ಸೋನು ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ಮದುವೆ ಆಗುವ ಅಸೆ ವ್ಯಕ್ತ ಪಡಿಸಿದ್ದರು. ಅಲ್ಲದೆ ದಿನ ಕಳೆಯುತ್ತಿದ್ದಂತೆ ಹುಡುಗ ಫಿಕ್ಸ್ ಆಗಿದ್ದಾನೆ ಎಂಬ ಸುಳಿವು ಕೂಡ ನೀಡಿದ್ದರು. 

46

ಈಗ ಸೋನು ಇದ್ದಕ್ಕಿದ್ದಂತೆ ಹೇರ್ ಸ್ಟೈಲ್ ಬದಲಾಯಿಸಿಕೊಂಡಿರುವುದು ಜನರ ಗಮನ ಸೆಳೆಯುತ್ತಿದೆ. ಸುಮ್ಮನೆ ಲುಕ್ ಬದಲಾಯಿಸಿಕೊಂಡಿರಬಹುದು ಆದರೆ ಜನರೇ ಮದುವೆಗೆ ಲಿಂಕ್ ಮಾಡಿದ್ದಾರೆ. 

56

ಯೂಟ್ಯೂಬ್ ಮೂಲಕ ದುಡಿಮೆ ಮಾಡುತ್ತಿರುವ ಸೋನು ಗೌಡ ಈಗಾಗಲೆ ಬೆಂಗಳೂರಿನಲ್ಲಿ ಎರಡು ಸೈಟ್‌ಗಳನ್ನು ಖರೀದಿಸಿದ್ದಾರೆ. ಈ ವರ್ಷ ಮನೆ ಕಟ್ಟುವ ಆಸೆ ವ್ಯಕ್ತ ಪಡಿಸಿದ್ದಾರೆ.

66

ಸೋನು ಮದುವೆ ಆಗುತ್ತಿರುವ ಹುಡುಗ ಯಾರು? ಇದು ಅರೇಂಜ್ಡ್‌ ಆರ್ ಲವ್ ಮ್ಯಾರೇಜ್‌? ಹುಡುಗ ಕೂಡ ರೀಲ್ಸ್ ಮಾಡ್ತಾರಾ? ಸಿಕ್ಕಾಪಟ್ಟೆ ಪ್ರಶ್ನೆಗಳು ಫಾಲೋವರ್ಸ್‌ಗಳಲ್ಲಿ ಹುಟ್ಟುಕೊಂಡಿದೆ. 

Read more Photos on
click me!

Recommended Stories