ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆ್ಯಂಕರ್ ಸುಮಾ ಕನಕಲಾ

Published : Feb 02, 2023, 06:00 PM IST

ಟಾಲಿವುಡ್ ಇಂಡಸ್ಟ್ರಿಯಲ್ಲಿ ಸುಮಾ ಕನಕಲಾ (Suma Kanakala) ಅವರ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ದೊಡ್ಡ ಸ್ಟಾರ್ ಸಿನಿಮಾಗಳ ಕಾರ್ಯಕ್ರಮಗಳಿಗೆ ಆ್ಯಂಕರ್ ಮಾಡುವ ಮೂಲಕ ತನ್ನದೇ ಆದ ಇಮೇಜ್ ಸಂಪಾದಿಸಿರುವ ಇವರು ಸ್ಟಾರ್ ಆಂಕರ್ ಆಗಿ ಹೊರಹೊಮ್ಮುತ್ತಿದ್ದಾರೆ. ಸುಮ ಅವರು ಆ್ಯಂಕರಿಂಗ್ ನಲ್ಲಿ ನಂಬರ್ ಒನ್ ಎನ್ನುವುದರಲ್ಲಿ ಎರಡು ಮಾತಿಲ್ಲ ಅದರ ಜೊತೆಗೆ ಇವರ ಫೀಸ್‌ ಕೂಡ ಕಡಿಮೆ ಇಲ್ಲ. ಒಂದು ಇವೆಂಟ್‌ಗೆ ಸುಮಾ ಎಷ್ಟು ಚಾರ್ಜ್‌ ಮಾಡುತ್ತಾರೆ ಗೊತ್ತಾ?

PREV
17
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ  ಆ್ಯಂಕರ್ ಸುಮಾ ಕನಕಲಾ

ತೆಲುಗು ಜನರಿಗೆ ಸುಮಾ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ಮೂಲತಃ ಸುಮಾ ಮಲಯಾಳಂ ಹುಡುಗಿಯಾದರೂ. ತೆಲುಗಿನವರಿಗಿಂತ ಸುಮಾ ಕನಕಲಾ ಸ್ಪಷ್ಟವಾಗಿ ತೆಲುಗು ಮಾತನಾಡುತ್ತಾರೆ.

27

ಕಿರುತೆರೆಯಲ್ಲಿ ಕಾರ್ಯಕ್ರಮಗಳ ಮೂಲಕ ಎಲ್ಲ ಮನೆ ಮನ ಗೆದ್ದರುವ ಸುಮಾ ಆ್ಯಂಕರ್ ಆಗಿ ಸ್ಟಾರ್ ಪಟ್ಟದ ಜೊತೆಗೆ ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. 

37

ಸುಮಾ ಕನಕಲಾ ಅವರು ಹೋಸ್ಟ್ ಮಾಡುವ ಒಂದು ಕಾರ್ಯಕ್ರಮಕ್ಕೆ ಸುಮಾರು 2.5 -3 ಲಕ್ಷ ರೂಪಾಯಿಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ, ಇದರಿಂದಾಗಿ ಅವರು  ಸೌತ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಆಂಕರ್ ಆಗಿದ್ದಾರೆ.

47

ಪಾಲಕ್ಕಾಡ್‌ನಲ್ಲಿ  ಹುಟ್ಟಿದ  ಸುಮಾ ಅವರು 15 ವರ್ಷ ವಯಸ್ಸಿನಲ್ಲಿಯೇ ಆ್ಯಂಕರಿಂಗ್ ಆರಂಭಿಸಿದ್ದಾರೆ. ಅವರ ಅಮ್ಮ ತೆಲುಗು ಕಲಿತು ನಮಗೆ ತೆಲುಗು ಕಲಿಸಿ ಇಲ್ಲಿಗೆ ಕಳುಹಿಸಿದರು ಎಂದು ಸುಮಾ ಹೇಳಿಕೊಂಡಿದ್ದಾರೆ.

57

ಬಿಕಾಂ ಮತ್ತು ನಂತರ M.Com ಶಿಕ್ಷಣ ಪೂರೈಸಿರುವ ಸುಮಾ ಅವರು  ಮೊದಲು ಅಕೌಂಟ್ಸ್ ಸೆಕ್ಷನ್‌ಗೆ ಹೋಗಬೇಕು ಅಂತ ಅಂದುಕೊಂಡಿದ್ದರು. ಆಮೇಲೆ ಟೀಚರ್ ಆಗಬೇಕು ಎಂದು ಬಯಸಿದ್ದರು. ಆದರೆ ಕಿರುತೆರಯ ನಟಿಯಾಗಿ ನಂತರ ಈಗ ನಿರೂಪಕಿಯಾಗಿ ಫೇಮಸ್‌ ಆಗಿದ್ದಾರೆ.

67

ಈ ನಡುವೆ  ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಸುಮಾ ವಾರು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.

 

77

ಈಕೆ ನಿರಂತರವಾಗಿ ಮಾತನಾಡಿದ ಕಾರಣದಿಂದಾಗಿ  ಈ ಹಿಂದೆ ಗಂಟಲು ಆಪರೇಷನ್‌ಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅಲ್ಪ ವಿರಾಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories