ಮಧ್ಯಾರಾತ್ರಿ ಕಳ್ಳರಿಂದ ತಪ್ಪಿಸಿಕೊಳ್ಳಲು ಬ್ಯಾಗ್ ತುಂಬಾ ಕಲ್ಲು ತುಂಬಿಕೊಂಡ ಧನರಾಜ್; ರೋಚಕ ಘಟನೆ
ಕಳ್ಳರ ಹಾವಳಿಗೆ ಸಿಲುಕಿಕೊಂಡರೆ ಏನು ಮಾಡಬೇಕು? ಹಲವು ವರ್ಷಗಳ ಹಿಂದೆ ಹಾಸ್ಯನಟ ಧನರಾಜ್ ಆಚಾರ್ ಹೀಗೆ ಮಾಡ್ತಿದ್ದರಂತೆ.
ಕಳ್ಳರ ಹಾವಳಿಗೆ ಸಿಲುಕಿಕೊಂಡರೆ ಏನು ಮಾಡಬೇಕು? ಹಲವು ವರ್ಷಗಳ ಹಿಂದೆ ಹಾಸ್ಯನಟ ಧನರಾಜ್ ಆಚಾರ್ ಹೀಗೆ ಮಾಡ್ತಿದ್ದರಂತೆ.
ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಹಾಗೂ ಬಿಗ್ ಬಾಸ್ ಸೀಸನ್ 11ರಿಂದ ಜನಪ್ರಿಯತೆ ಪಡೆದ ಹಾಸ್ಯ ನಟ ಧನರಾಜ್ ಆಚಾರ್. ಆರಂಭದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದರು. ಅಂದು ನಡೆದ ಘಟನೆ ಒಂದನ್ನು ಹಂಚಿಕೊಂಡಿದ್ದಾರೆ.
ಹೌದು! ಧನರಾಜ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದ ಸಮಯದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ವಾಸಿಸುತ್ತಿದ್ದರಂತೆ. ಆದರೆ ಕೆಲಸ ಮುಗಿಸಿಕೊಂಡು ಗಂಟೆಗಟ್ಟಲೆ ಓಡಾಡುವ ಪರಿಸ್ಥಿತಿ ಇತ್ತು.
ಶೂಟಿಂಗ್ ಮುಗಿಸಿಕೊಂಡು ಮಠಕ್ಕೆ ತೆರಳುವಾಗ ರಾತ್ರಿ 1 ಗಂಟೆ ಅಥವಾ 2 ಗಂಟೆ ಆಗುತ್ತಿತ್ತು. ಆಗ ಹುಳಿಮಾವು ಅಷ್ಟು ಡೆವಲಪ್ ಆಗಿರಲಿಲ್ಲ ಹೀಗಾಗಿ ಕಳ್ಳರ ಕಾಟ ಜಾಸ್ತಿ ಇದೆ ಎನ್ನುತ್ತಿದ್ದರು.
ಹೀಗಾಗಿ ಧನರಾಜ್ ಸದಾ ಬಳಸುತ್ತಿದ್ದ ಬ್ಯಾಗ್ ತುಂಬಾ ಕಲ್ಲು ತುಂಬಿಕೊಳ್ಳುತ್ತಿದ್ದರಂತೆ. ಒಮ್ಮೆ ಯಾರೋ ದಾಳಿ ಮಾಡಿದಾಗ ಅದೇ ಕಲ್ಲುಗಳನ್ನು ಎಸೆದು ಮಠ ಸೇರಿಕೊಂಡರಂತೆ.
ಕೆಲಸ ಶುರು ಮಾಡಿದಾಗ 5 ಸಾವಿರ ಸಂಬಳ ಪಡೆಯುತ್ತಿದ್ದರಂತೆ. ಅದಕ್ಕೂ ಮುನ್ನ ಹಣವಿಲ್ಲದ ಕಾರಣ ಮಠದಲ್ಲಿ ಸಿಗುತ್ತಿದ್ದ ಉಚಿತ ನಿವಾಸ ಮತ್ತು ಆಹಾರ ಬಳಸುತ್ತಿದ್ದರಂತೆ.
ಈಗ ಧನರಾಜ್ ಬೆಂಗಳೂರಿನಲ್ಲಿ ಮನೆ ಮಾಡಿದ್ದಾರೆ, ಊರಿನಲ್ಲಿ ಮನೆ ಕಟ್ಟಿಸಿದ್ದಾರೆ, ಓಡಾಡಲು ಕಾರು ಖರೀದಿಸಿದ್ದಾರೆ ಹಾಗೂ ಬೇಜಾನ್ ಸಂಪಾದನೆ ಮಾಡುತ್ತಿದ್ದಾರೆ. ತಮ್ಮ ಜರ್ನಿತಗೆ ಸ್ಪೂರ್ತಿಯಾಗಿರುವುದು ನಟ ಯಶ್ ಎಂದು ಹೇಳಿಕೊಂಡಿದ್ದರು.