Bigg Boss: ತಿಂದ ಮನೆಗೆ ಕನ್ನ ಹಾಕೋರು ಇವ್ರು- ವರ್ತೂರು ಸಂತೋಷ್​ ಗರಂ; ಷೋ ಬಗ್ಗೆ ಹೇಳಿದ್ದೇನು?

Published : Dec 14, 2025, 06:14 PM IST

ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್, ಶೋ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಇತರ ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಊಟಕ್ಕೆ ಕೊರತೆ ಇರಲಿಲ್ಲ ಮತ್ತು ಶೋ ಸ್ಕ್ರಿಪ್ಟೆಡ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

PREV
17
ಹುಲಿ ಉಗುರು

ಬಿಗ್​ಬಾಸ್​ 10ರಲ್ಲಿ ಹವಾ ಸೃಷ್ಟಿಸಿದವರ ಪೈಕಿ ವರ್ತೂರು ಸಂತೋಷ್​ ಒಬ್ಬರು. ನಾಲ್ಕನೆಯ ರನ್ನರ್​ ಅಪ್​ ಆಗಿ ಹೊರಬಂದವರು ಇವರು. ಆದರೆ ವರ್ತೂರು ಧರಿಸಿದ್ದ ಹುಲಿಯ ಉರುಗಿನ ಪೆಂಡೆಂಟ್​ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಬಿಗ್​ಬಾಸ್​ 10ರ ಟಿಆರ್​ಪಿ ಕೂಡ ಹೆಚ್ಚಿಸಿದ್ದವರಲ್ಲಿ ಇವರೂ ಒಬ್ಬರಾಗಿದ್ದರು! ಕಾನೂನು ಮೀರಿ ಹುಲಿಯ ಉಗುರು ಧರಿಸಿದ್ದು ಗಲಾಟೆಗೆ ಕಾರಣವಾಗಿ ಕೊನೆಗೆ ಏನೇನೋ ತಿರುವುಗಳನ್ನೂ ಪಡೆದುಕೊಂಡು ಜೈಲಿಗೂ ಹೋಗಿ ಬಂದರು ವರ್ತೂರು.

27
10 ಲಕ್ಷ ಘೋಷಣೆ

ಇದಾಗಲೇ ಬಿಗ್​ಬಾಸ್​​ ಸೀಸನ್​ 12ರಲ್ಲಿ ಎರಡನೆಯ ರನ್ನರ್​ ಅಪ್​ ಗೆ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಸುದೀಪ್​ ಅವರು ಇರುವವರೆಗೂ ಈ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.

37
ಸ್ಪರ್ಧಿ ಬಗ್ಗೆ ಕಿಡಿ

ಇದೀಗ ವರ್ತೂರು ಸಂತೋಷ್​ ಅವರು, ಬಿಗ್​ಬಾಸ್​ ಷೋ ಬಗ್ಗೆ ಮಾತನಾಡುತ್ತಲೇ ಸ್ಪರ್ಧಿಯ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಕೆಲವರು ಆ ಷೋ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಊಟ ಸರಿಯಾಗಿ ಕೊಡ್ತಾ ಇರಲಿಲ್ಲ, ಅಲ್ಲಿ ಸ್ವಲ್ಪ ದಿನ ಇದ್ದರೆ ಸತ್ತೇ ಹೋಗುತ್ತಿದ್ದೆ ಇತ್ಯಾದಿ ಇತ್ಯಾದಿಯಾಗಿ ಮೀಡಿಯಾಗಳಲ್ಲಿ ಹೇಳುತ್ತಿದ್ದಾರೆ.

47
ಅನ್ನ ತಿಂದು...

ಇವರ ವಿರುದ್ಧ ಕಿಡಿ ಕಾರಿರುವ ವರ್ತೂರು ಸಂತೋಷ್​ (Bigg Boss Varthur Santosh) ಬಿಗ್​ಬಾಸ್​ ಮನೆಯ ಅನ್ನ ತಿಂದು ಕನ್ನ ಹಾಕುವ ಜಾತಿ ಇವರದ್ದು ಎಂದು ಬೈದಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಯಾವತ್ತೂ ಊಟಕ್ಕೆ ಕೊರತೆ ಮಾಡುತ್ತಿರಲಿಲ್ಲ. ಒಂದು ವೇಳೆ ಏನೋ ಕಾರಣಕ್ಕೆ ಊಟ ಕಡಿಮೆ ಆದರೂ ಟಾಸ್ಕ್​ ಹೆಸರಿನಲ್ಲಿ ಊಟ ಕೊಡುತ್ತಾರೆ. ಸುಮ್ಮನೇ ಹೊರಕ್ಕೆ ಬಂದು ಸುಳ್ಳು ಸುದ್ದಿ ಹರಡುತ್ತಾರೆ ಎಂದು ಉಗಿದಿದ್ದಾರೆ.

57
ಸ್ಕ್ರಿಪ್ಟೆಡ್​ ವಿಷ್ಯ...

ಅದೇ ರೀತಿ ಅಲ್ಲಿ ಸ್ಕ್ರಿಪ್ಟೆಡ್​ ಅದೂ ಇದೂ ಏನೂ ಇಲ್ಲ. ಎಲ್ಲವೂ ತಂತಾನೇ ಆಗುತ್ತದೆ. ಸುಖಾ ಸುಮ್ಮನೆ ಇಲ್ಲಸಲ್ಲದನ್ನು ಹರಡುತ್ತಿರುವುದಾಗಿ ಸಂತೋಷ್​ ಅವರು ನ್ಯೂಸ್​ಬೀಟ್​ಕನ್ನಡ ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

67
ವೈಯಕ್ತಿಯ ಚರ್ಚೆ

ಇನ್ನು ವರ್ತೂರು ಸಂತೋಷ್​ ಅವರ ವಿಷ್ಯ ಹೇಳುವುದಾದರೆ, ಇವರು ಫೇಮಸ್​ ಆಗ್ತಿದ್ದಂತೆಯೇ ಅವರ ವೈಯಕ್ತಿಯ ಜೀವನದ ಬಗ್ಗೆಯೂ ಸಾಕಷ್ಟು ಚರ್ಚೆ, ಸುದ್ದಿ, ಗುಲ್ಲುಗಳು ಹರಡಿದ್ದವು. ಯುವತಿಯೊಬ್ಬರ ಜೊತೆ ವರ್ತೂರು ಸಂತೋಷ್​ ಇರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ವರ್ತೂರು ಅವರಿಗೆ ಮದುವೆಯಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದೇ ಸದ್ದು ಮಾಡಿತು.

77
ವಿವಾದ

ಅಲ್ಲಿಯವರೆಗೆ, ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿ ಹೀರೋ ಆಗಿದ್ದ ವರ್ತೂರು ಅವರ ಸುತ್ತ ಮದುವೆಯ ವಿವಾದ ಹುಟ್ಟಿಕೊಂಡಿತ್ತು. ಹೀಗೆ ವಿವಾದಗಳಿಂದಲೇ ವರ್ತೂರು ಸಂತೋಷ್​ ಅವರು ಸುತ್ತುವರೆದಿದ್ದರೂ, ಅವರ ಖ್ಯಾತಿಗೆ ಏನೂ ಕುಂದು ಬರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories