ಬಿಗ್ಬಾಸ್ ಸೀಸನ್ 11ರ ನಂತರ ನಿರೂಪಣೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿ ಶಾಕ್ ನೀಡಿದ್ದ ಕಿಚ್ಚ ಸುದೀಪ್, ಇದೀಗ ಮತ್ತೆ ನಿರೂಪಣೆಗೆ ಮರಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದ ಅವರು, ವಾಹಿನಿಯವರ ಮನವಿಗೆ ಸ್ಪಂದಿಸಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.
ಬಿಗ್ಬಾಸ್ 11 ಮುಕ್ತಾಯ ಆದಾಗ, 12ನೇ ಸೀಸನ್ಗಾಗಿ ಬಿಗ್ಬಾಸ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸೋ ಸಂಗತಿಯೊಂದು ಹೊರ ಬಂತು. ಅದು ರಾತ್ರೋರಾತ್ರಿ ಕಿಚ್ಚ ಸುದೀಪ್ ಮಾಡಿದ ಟ್ವೀಟ್. ತಮ್ಮದು ಇದೇ ಕೊನೆಯ ಬಿಗ್ಬಾಸ್ ನಿರೂಪಣೆ ಎಂದು ಹೇಳಿದರು. ಮುಂದಿನ ಷೋನಲ್ಲಿ ಸುದೀಪ್ ಅವರು ತಾವು ಹೋಸ್ಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
28
ಸುದೀಪ್ ಪೋಸ್ಟ್
'ಬಿಗ್ ಬಾಸ್ ಕಾರ್ಯಕ್ರಮವನ್ನು ಸುಮಾರು 11 ವರ್ಷಗಳಿಂದ ಎಂಜಾಯ್ ಮಾಡಿದ್ದೀನಿ. ನೀವು ತೋರಿಸಿರುವ ಪ್ರೀತಿಗೆ ಧನ್ಯವಾದಗಳು. ಸೀಸನ್ 11ರ ಫಿನಾಲೆ ನನ್ನ ಕೊನೆ ಹೋಸ್ಟ್ ಆಗಿರಲಿದೆ. ನಿಮ್ಮನ್ನು ಆದಷ್ಟು ಮನೋರಂಜಿಸುವ ಪ್ರಯತ್ನ ಮಾಡುತ್ತೀನಿ. ಖಂಡಿತಾ ಮರೆಯಲಾಗದ ಜರ್ನಿ ಇದು. ಅದ್ಭುತವಾಗಿ ಹ್ಯಾಂಡಲ್ ಮಾಡಿದ್ದೀನಿ. ಧನ್ಯವಾದಗಳು ಕಲರ್ಸ್ ಕನ್ನಡ ಈ ಅವಕಾಶವನ್ನು ಕೊಟ್ಟಿದ್ದಕ್ಕೆ' ಎಂದು ಸುದೀಪ್ ಬರೆದುಕೊಂಡಿದ್ದರು.
38
ಪ್ರಚಾರದ ಗಿಮಿಕ್!
ಇದನ್ನು ಹಲವರು ನಂಬಿರಲಿಲ್ಲ. ಇವೆಲ್ಲಾ ಪ್ರಚಾರದ ಗಿಮಿಕ್ ಎಂದುಕೊಂಡವರೇ ಹೆಚ್ಚು. ಇಷ್ಟು ಸಂಭಾವನೆ ಸಿಗುವ ಷೋ ಅನ್ನು ಎಂಥವರೂ ಬಿಡುವುದಿಲ್ಲ. ಸುಖಾಸುಮ್ಮನೆ ಅಭಿಮಾನಿಗಳಿಗೆ ಶಾಕ್ ಕೊಡಲು ಸುದೀಪ್ ಹೀಗೆ ಬರೆದುಕೊಂಡಿರುತ್ತಾರೆ ಅಷ್ಟೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು.
ಆದರೆ, ತಾವು ಹೇಳುತ್ತಿರುವುದು ನಿಜ, ಇದು ಜೋಕ್ ಅಲ್ಲ ಎಂದು ಮಾಧ್ಯಮಗಳ ಮುಂದೆ ಬಂದು ಸುದೀಪ್ ಹೇಳಿದಾಗ ಎಲ್ಲರೂ ಶಾಕ್ ಆದರು. ತಾವು ಷೋ ಬಿಡುತ್ತಿರುವುದಕ್ಕೆ ಕೆಲ ಕಾರಣ ಕೊಟ್ಟರು. ಹೆಕ್ಟಿಕ್ ಆಗುತ್ತದೆ, ನನಗೆ ಬೇರೆ ಸಿನಿಮಾ ಮಾಡಲು ಟೈಮ್ ಸಾಕಾಗುವುದಿಲ್ಲ, ಮನೆ ಕಡೆ ನೋಡಲು ಆಗುವುದಿಲ್ಲ... ಹೀಗೆ ಕೆಲವು ಕಾರಣಗಳನ್ನು ಕೊಟ್ಟರು. ನಾನು ಮುಂದೆ ಬಿಗ್ಬಾಸ್ ಮಾಡುವುದೇ ಇಲ್ಲ ಎಂದು ಪ್ರಮಾಣ ಮಾಡುವ ರೂಪದಲ್ಲಿ ಹೇಳಿದಾಗ ಅಭಿಮಾನಿಗಳು ಶಾಕ್ ಆಗಿದ್ದು ದಿಟ.
58
ನಿರೂಪಣೆಗೆ ಜೈ
ಆದರೆ ಅದಾದ ಕೆಲವೇ ದಿನಗಳಲ್ಲಿ ಸುದೀಪ್ ಅವರು ನಿರೂಪಣೆಗೆ ಒಪ್ಪಿಕೊಂಡಿದ್ದಾರೆ ಎನ್ನುವ ವಿಷಯ ತಿಳಿಸಿದರು. ಅಭಿಮಾನಿಗಳು ಫುಲ್ ಖುಷ್ ಆದರು. ಕೆಲವರು ಇದು ತಮಗೆ ಮೊದಲೇ ಗೊತ್ತಿತ್ತು, ಆಗಲೇ ನಾನು ಹೇಳಿದ್ದೆ ಎಂದು ಟ್ರೋಲ್ ಮಾಡುವ ರೀತಿಯಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡರು.
68
ಕ್ಲಾರಿಟಿ ಇದ್ದೇ ಮಾಡಿದ್ದು
ಇದೀಗ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಸುದೀಪ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಾನು ಬೇಡ ಎಂದಾಗಲೂ ಕ್ಲಾರಿಟಿ ಇತ್ತು, ಬೇಕು ಎಂದಾಗಲೂ ಇತ್ತು. ಅದರ ಬಗ್ಗೆ ಮಾತನಾಡುವವರಿಗೆ ನಾನು ಏನೂ ಹೇಳಲು ಆಗುವುದಿಲ್ಲ ಎಂದಿದ್ದಾರೆ.
78
ಬೇಡ ಅನ್ನಲು ಆಗಲಿಲ್ಲ
ನಾನು ಬೇಡ ಎಂದು ಹೇಳಿದ ವಿಷಯಗಳನ್ನೆಲ್ಲಾ ವಾಹಿನಿಯವರು ಒಪ್ಪಿಕೊಂಡರು. ಅಷ್ಟು ದೊಡ್ಡ ಸಂಸ್ಥೆಯವರು ಬಂದು ಪ್ರೀತಿಯಿಂದ ಕೇಳಿಕೊಂಡಾಗ ಬೇಡ ಎನ್ನಲು ಆಗಲಿಲ್ಲ, ಅದಕ್ಕಾಗಿ ಒಪ್ಪಿಕೊಂಡೆ. ಅಷ್ಟಕ್ಕೂ ನಾನೇನು ದುರಹಂಕಾರದಿಂದ ಅದನ್ನು ಬೇಡ ಅಂದಿರಲಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
88
ನಾಲ್ಕು ವರ್ಷ ಕಾಂಟ್ರಾಕ್ಟ್
ಅಂದಹಾಗೆ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದ ಸುದೀಪ್ ಅವರು ಮುಂದಿನ ನಾಲ್ಕು ವರ್ಷಗಳವರೆಗೆ ಬಿಗ್ಬಾಸ್ಗೆ ಕಾಂಟ್ರಾಕ್ಟ್ಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಮೂಲಕ ಫ್ಯಾನ್ಸ್ ಫುಲ್ ಖುಷ್ ಆಗುವ ಹಾಗೆ ಮಾಡಿದ್ದಾರೆ.