ಬರ್ತ್ ಡೇ ಕೇಕ್ ಮೂಲಕ ರಾಮಚಾರಿ -ಚಾರು ಮದುವೆ ಗುಟ್ಟು ರಟ್ಟಾಗುತ್ತಾ?

First Published | May 4, 2023, 3:44 PM IST

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಾ ಸಾಗುತ್ತಿರುವ ರಾಮಾಚಾರಿ ಕಥೆಯಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ಬಂದಿದ್ದು, ಚಾರು - ರಾಮಾಚಾರಿ ಪತಿ ಪತ್ನಿ ಅನ್ನೋದು ಗೊತ್ತಾಗುತ್ತಾ? 

ಕಲರ್ಸ್ ಕನ್ನಡ (Colors Kannada) ಚಾನೆಲ್ ತಮ್ಮ ವಿನೂತನ ಸೀರಿಯಲ್‌ಗಳ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರೋದು ನಿಜ. ಅದರಲ್ಲೂ ರಾಮಾಚಾರಿ ಸೀರಿಯಲ್ ತನ್ನ ವಿಭಿನ್ನ ಸ್ಟೋರಿ ಲೈನ್‌ನಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. 

ರಾಮಾಚಾರಿ - ಚಾರು ಅದ್ಭುತ ಕೆಮಿಸ್ಟ್ರಿ ಮೂಲಕ ಸಖತ್ತಾಗಿಯೇ ಮೂಡಿಬರುತ್ತಿರುವ ಧಾರಾವಾಹಿ ರಾಮಾಚಾರಿ (Ramachari). ಇದೀಗ ಹೊಸ ಟ್ವಿಸ್ಟ್ ಒಂದು ಸಿಕ್ಕಿದ್ದು, ಇಷ್ಟು ದಿನ ಮುಚ್ಚಿಟ್ಟಿದ್ದ ಗಂಡ ಹೆಂಡತಿ ಸಂಬಂಧ ಎಲ್ಲರಿಗೂ ತಿಳಿಯುವ ಸೂಚನೆ ದೊರೆತಿದೆ. 

Tap to resize

ರಾಮಾಚಾರಿ ಹುಟ್ಟು ಹಬ್ಬಕ್ಕೆ ಸರ್ಫೈಸ್ ಕೊಡಲು ಚಾರು ಕೇಕ್ ತೆಗೆದುಕೊಂಡು ಮಧ್ಯರಾತ್ರಿ ರಾಮಾಚಾರಿ ಮನೆಯ ಬಾಗಿಲನ್ನು ಕಳ್ಳರಂತೆ ತೆರೆದು ರಾಮಾಚಾರಿಗೆ ಸರ್ಪ್ರೈಸ್ ಕೊಡುತ್ತಾಳೆ. ಆದರೆ ಇದನ್ನೆಲ್ಲಾ ರಾಮಾಚಾರಿ ಅತ್ತಿಗೆ ವೈಶಾಖ ಗಮನಿಸುತ್ತಿರುತ್ತಾಳೆ. 

ಚಾರು ಹುಚ್ಚಾಟದಿಂದ ಕೋಪಗೊಂಡ ರಾಮಾಚಾರಿ ಇನ್ನೇನು ಚಾರುವನ್ನು ಹೊರಕ್ಕೆ ಕಳುಹಿಸಬೇಕು ಎನ್ನುವಷ್ಟರಲ್ಲೇ ವೈಶಾಖ ಸೇರಿ, ಮನೆಯವರೆಲ್ಲಾ ಅಲ್ಲಿ ಹಾಜರಾಗ್ತಾರೆ. ನಿನ್ಯಾಕೆ ನಮ್ಮ ಮನೆ ಹುಡುಗನಿಗೆ ಕೇಕ್ ತಂದಿದ್ದು, ಎಂದು ಅತ್ತಿಗೆ ಕೇಳಿದಾಗ ಚಾರು ಇದನ್ನ ಕೇಳೋಕೆ ನೀನ್ಯಾರು ಎನ್ನುತ್ತಾಳೆ. 

ಇದರಿಂದ ಕೋಪಗೊಂಡ ಅಣ್ಣ, ವೈಶಾಖ ಈ ಮನೆ ಸೊಸೆ, ನಿನ್ನ ಮತ್ತು ರಾಮಾಚಾರಿ ಮಧ್ಯೆ ಸಂಬಂಧ ಈಗಾಗ್ಲೇ ಮುರಿದು ಹೋಗಿದ್ದು, ಈ ಸಮಯದಲ್ಲಿ ನೀನು ಅವನಿಗಾಗಿ ಕೇಕ್ ತೆಗೆದುಕೊಂಡು ಬರುವ ಅವಶ್ಯಕತೆ ಏನಿತ್ತು ಎಂದು ಕೇಳುತ್ತಾರೆ. 

ಇದಕ್ಕೆ ಉಪಾಯದಿಂದ ಉತ್ತರಿಸೋ ಚಾರು ಈಗ ಹೊಸದಾಗಿ ಶುರುವಾಗಿದೆ ಅಲ್ವಾ? ನನ್ನ ಮದುವೆ. ನನ್ನ ಎಲ್ಲಾ ಜಾತಕನ , ಮದುವೆ ಮೂಹೂರ್ತನ ನೋಡಿದವನು ರಾಮಚಾರಿನೇ ಅಲ್ವಾ? ಜೊತೆಗೆ ನಂಗೆ ಕಣ್ಣು ಕಾಣದೇ ಇದ್ದಾಗ ಆಶ್ರಮಕ್ಕೆ ಕರೆದುಕೊಂಡು ಹೋಗಿ ಸೇವೆ ಮಾಡಿದ್ದು ಅವನೇ. ಅದಕ್ಕೆ ಬರ್ತ್ ಡೇ ಸರ್ಪ್ರೈಸ್ ಕೊಡೋಕೆ ಬಂದೆ ಎನ್ನುತ್ತಾಳೆ. 

ಇನ್ನೇನು ನೆಪಕೊಟ್ಟ ಜಾರಬೇಕು ಅನ್ನೋವಷ್ಟರಲ್ಲಿ ವೈಶಾಖ ಕಣ್ಣಿಗೆ ಚಾರು ತಂದಿದ್ದ ಕೇಕ್ ಬೀಳುತ್ತೆ, ಅದರಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ನನ್ನ ಗಂಡ ಎಂದು ಬರೆದಿರುತ್ತೆ. ಚಾರು ಜುಟ್ಟು ಹಿಡೀಯೋಕೆ ವೈಶಾಖಗೆ ಇನ್ನೇನು ಬೇಕು? ಕೇಕ್ ಹಿಡ್ಕೊಂಡು ಎಲ್ಲರ ಮುಂದೆ ಬರ್ತಾಳೆ ವಿಶಾಖ. ಇಷ್ಟು ದಿನ ಮುಚ್ಚಿಟ್ಟದ ಗುಟ್ಟು ಕೇಕ್ ಮೂಲಕ ರಟ್ಟಾಗುತ್ತಾ ಕಾದು ನೋಡಬೇಕು. 
 

Latest Videos

click me!