ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಹೊಸ ಸೀರಿಯಲ್ ‘ಗಂಡ ಹೆಂಡ್ತಿ’

Published : May 01, 2023, 05:20 PM ISTUpdated : May 01, 2023, 05:30 PM IST

ಕಳೆದ ವಾರವಷ್ಟೇ ‘ಅಂತರಪಟ’ ಎಂಬ ಹೊಸ ಸೀರಿಯಲ್ ಆರಂಭಿಸಿದ ಕಲರ್ಸ್ ಕನ್ನಡದಲ್ಲಿ ಇದೀಗ ಮತ್ತೊಂದು ಹೊಸ ಧಾರಾವಾಹಿ ಶುರುವಾಗಲಿದ್ದು, ಸೀರಿಯಲ್ ತಮ್ಮ ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ.   

PREV
18
ಕಲರ್ಸ್ ಕನ್ನಡದಲ್ಲಿ ಶುರುವಾಗಲಿದೆ ಹೊಸ ಸೀರಿಯಲ್ ‘ಗಂಡ ಹೆಂಡ್ತಿ’

ಕಲರ್ಸ್ ಕನ್ನಡದಲ್ಲಿ (Colors Kannada) ಈಗಾಗಲೇ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಅಂತರಪಟ ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿಯಂತಹ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ. ಕಳೆದವಾರದಿಂದ ಅಂತರಪಟ ಸೀರಿಯಲ್ ಕೂಡ ಪ್ರಸಾರವಾಗುತ್ತಿದೆ.

28

ಕುತೂಹಲ ಮೂಡಿಸುವ ಕಥೆಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿರುವ ಕಲರ್ಸ್ ಕನ್ನಡದಲ್ಲಿ ಇದೀಗ ಮತ್ತೊಂದು ಹೊಸ ಸೀರಿಯಲ್ ಆರಂಭವಾಗಲಿದೆ. ಗಂಡ ಹೆಂಡ್ತಿ (Ganda Hendti) ಹೆಸರಿನ ಈ ಸೀರಿಯಲ್ ತನ್ನ ಟೈಟಲ್ ಮೂಲಕವೇ ಇದೀಗ ಹೆಚ್ಚು ಕುತೂಹಲ ಮೂಡಿಸಿದೆ. 

38

ಗಂಡನ ಹುಡುಕಾಟದಲ್ಲಿ ಹೆಂಡತಿ ಎಂಬ ಟ್ಯಾಗ್ ಲೈನ್‌ನೊಂದಿಗೆ ಈ ಹೊಸ ಸೀರಿಯಲ್ ಗ್ರ್ಗ್ಯಾಂಡ್ ಆಗಿ ತೆರೆಗೆ ಬರಲು  ಸಜ್ಜಾಗಿದೆ. ಇದು ಕೂಡ ಸ್ವಮೇಕ್ ಕತೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದ್ದು, ಹೇಗೆ ಮೂಡಿ ಬರಲಿದೆ ಕಾದು ನೋಡಬೇಕು. 

48

ಈಗಾಗಲೇ ಅಂತರಪಟ ಸೀರಿಯಲ್ ಪ್ರಸಾರವಾಗುತ್ತಿದ್ದು, ಜನರು ಸೀರಿಯಲ್ ಇಷ್ಟಪಡುತ್ತಿದ್ದಾರೆ. ಪ್ರತಿಯೊಂದು ಪಾತ್ರಗಳನ್ನು ಸಹ ಪ್ರೇಕ್ಷಕರು ಮೆಚ್ಚಿದ್ದಾರೆ. ಇದೀಗ ಗಂಡ ಹೆಂಡ್ತಿ ಸೀರಿಯಲ್ ಪ್ರೋಮೋ ರಿಲೀಸ್ (serial promo) ಆಗಿದ್ದು, ನಾಯಕಿ ಪಾತ್ರ ಮಾತ್ರ ಪರಿಚಯ ಆಗಿದೆ. 

58

ಒಡಲಲ್ಲಿ ಕಂದ, ಕಣ್ಣಲ್ಲಿ ನಿರೀಕ್ಷೆ, ಮದುವೆಯ ಸರದಿಗಾಗಿ ಕಾದು ನಿಂತಿದ್ದಾಳೆ ಅಪ್ಪಟ ಅಪರಂಜಿ. ಬರ್ತಿದೆ ಹೊಸ ಕತೆ, ಗಂಡ ಹೆಂಡ್ತಿ. ಎಂದು ಕಲರ್ಸ್ ಕನ್ನಡ ಹೊಸ ಪ್ರೋಂಮೋ ಒಂದನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿ ಅದಕ್ಕೆ, ಟ್ಯಾಗ್ ಲೈನ್ ಕೊಟ್ಟಿದ್ದಾರೆ. 
 

68

ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗರ್ಭಿಣಿಯಾಗಿರುವ ಮಹಿಳೆಯೊಬ್ಬಳು, ಕೈಯಲ್ಲಿ ಫೈಲ್, ಮತ್ತು ಎರಡು ಹೂವಿನ ಹಾರಗಳನ್ನು ಹಿಡಿದುಕೊಂಡು ರಿಜಿಸ್ಟ್ರಾರ್ ಆಫೀಸ್ ಬಾಗಿಲ ಎದುರಿನಲ್ಲಿ ಯಾರದೋ ಬರುವಿಕೆಗೆ ಕಾಯುತ್ತಾ ನಿಂತಿರುತ್ತಾರೆ. 

78

ಬೆಳಗ್ಗೆಯೇ ಬಂದು ನೋಂದಾವಣೆ ಕಚೇರಿಯಲ್ಲಿ ನಾಯಕಿ ಕಾಯ್ತಾ ಇರುತ್ತಾಳೆ. ಅಲ್ಲಿ ಎಷ್ಟೊಂದು ಜೋಡಿ ಮದುವೆಯಾಗಿ ಹೋಗ್ತಾರೆ. ರಾತ್ರಿ ಆಗಿ ಬಿಡುತ್ತೆ. ಆದ್ರೆ ಈ ನಾಯಕಿ ಕಾಯುತ್ತಿರುವ ಹುಡುಗ ಮಾತ್ರ ಬಂದೇ ಬರೋದೇ ಇಲ್ಲ. ಮಳೆ ಬರುವಾಗ ನಾಯಕಿ ಕಣ್ಣಿರು ಹಾಕಿಕೊಂಡು ನಿಲ್ಲುತ್ತಾಳೆ. 

88

ಸೀರಿಯಲ್ ಪ್ರೋಮೋ ಚೆನ್ನಾಗಿ ಮೂಡಿ ಬಂದಿದ್ದು, ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಆದರೆ ಸೀರಿಯಲ್ ಯಾವಾಗ ಆರಂಭವಾಗಲಿದೆ? ಯಾವ ಸೀರಿಯಲ್ ಮುಗಿಯಲಿದೆ ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ. .

Read more Photos on
click me!

Recommended Stories