ಶ್ರೀರಸ್ತು ಶುಭಮಸ್ತು ನೋಡಿದ್ರೆ ಅಹಸ್ಯ ಆಗ್ತಿದೆ ಅಂತಿದ್ದಾರೆ ಜನ... ವಯಸ್ಸಾದ ಮಾತ್ರಕ್ಕೆ ದೈಹಿಕವಾಗಿ ಅನ್ಯೋನ್ಯವಾಗಿರೋದು ತಪ್ಪಾ?

First Published | Sep 17, 2024, 3:06 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ಸದ್ಯ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ತುಳಸಿ ಗರ್ಭಿಣಿಯಾಗಿರೋದು. ಈ ಎಪಿಸೋಡ್ ಗಳನ್ನು ನೋಡ್ತಿರೋ ಜನ ಅಹಸ್ಯ ಪಟ್ಟುಕೊಳ್ತಿದ್ದಾರೆ. ನಿಜವಾಗ್ಲೂ ಇದು ಅಹಸ್ಯ ಪಟ್ಟುಕೊಳ್ಳೋ ವಿಷ್ಯಾನ? ಇದ್ರಲ್ಲಿ ತಪ್ಪೇನಿದೆ? 
 

ತುಳಸಿ ಮತ್ತು ಮಾಧವರ ಪ್ರೇಮ ಕಥೆಯಾಗಿದ್ದ ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರವಾಹಿ ಇಲ್ಲಿವರೆಗೆ ಅದ್ಭುತವಾಗಿ ಮೂಡಿ ಬರುತ್ತಿತ್ತು, ಮಾಧವನ ಮಕ್ಕಳು ಒಬ್ಬೊಬ್ಬರಾಗಿ ತುಳಸಿಯನ್ನು ಇಷ್ಟಪಡೋಕ್ಕೆ ಆರಂಭಿಸಿದ್ದರೆ, ಇನ್ನೊಂದೆಡೆ, ಅಮ್ಮನ ಪ್ರೀತಿ ಇನ್ನೊಬ್ಬರ ಪಾಲಾಗೋದನ್ನು ಸಹಿಸದ ಸಮರ್ಥ್, ಮಾಧವನ ಮನೆಯವರ ಮೇಲೆ ಕಂಪ್ಲೈಂಟ್ ಕೂಡ ಕೊಟ್ಟು ಪೊಲೀಸರನ್ನು ಬರ ಹೇಳಿದ್ದು ಆಗಿದೆ. ಅಷ್ಟರಲ್ಲೇ ಮತ್ತೊಂದು ಅನಾಹುತ ನಡೆದಿತ್ತು. 
 

ಇದೆಲ್ಲಾ ನಡೆಯುವ ಹೊತ್ತಿಗೆ ತಲೆತಿರುಗಿ ಬಿದ್ದ ತುಳಸಿಯನ್ನು ಸಮರ್ಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ, ಅಲ್ಲಿ ತುಳಸಿ ಗರ್ಭಿಣಿಯಾಗಿರುವ ವಿಷಯ ತಿಳಿದು ಬಂದಿದೆ. ಇದರಿಂದ ತುಳಸಿ ಮುಜುಗರಕ್ಕೆ ಒಳಗಾಗುತ್ತಾಳೆ. ಇನ್ನೊಂದು ಕಡೆ ಸಮರ್ಥ್ ಗೆ ನರ್ಸ್ ಬಂದು ಇನ್ಯಾರದ್ದೋ ರಿಪೋರ್ಟ್ ನೀಡಿ ತುಳಸಿಗೆ ಕ್ಯಾನ್ಸರ್ ಎಂದಿದ್ದು, ಸಮರ್ಥ್ ಗೆ ಆತಂಕ ಮತ್ತಷ್ಟು ಹೆಚ್ಚಾಗಿದೆ. 
 

Tap to resize

ಯಾವಾಗ ಸೋಶಿಯಲ್ ಮೀಡಿಯಾಗಳಲ್ಲಿ (Social media)ತುಳಸಿ ಗರ್ಭಿಣಿಯಾಗಿರುವ ಪ್ರೊಮೊ ರಿಲೀಸ್ ಆಗಿದ್ಯೋ, ಆವಾಗಿನಿಂದ ಜನರು ತುಂಬಾನೆ ಕೆಟ್ಟದಾಗಿ ಕಾಮೆಂಟ್ ಮಾಡೋಕೆ ಆರಂಭಿಸಿದ್ದಾರೆ. ನೋಡೋರಿಗೆ ಇಷ್ಟು ಮುಜುಗರ ಆಗ್ತಾ ಇದೆ. ಸೀರಿಯಲ್ ನಲ್ಲಿ ಇದೆಲ್ಲ ಬೇಕಾ ಸಮಾಜಕ್ಕೆ ಒಳ್ಳೆ ರೀತಿಯಾದ ಸಂದೇಶ ಕೊಡಿ, ಇದೇನಿದು ನೋಡೋಕೆ ಹಿಂಸೆ ಆಗೋ ಹಾಗೆ ತೋರಿಸ್ತೀರಾ. ಏನೋ ಸೀರಿಯಲ್ ಚೆನ್ನಾಗಿದೆ ಅಂತ ನೋಡಿದ್ರೆ ಇದೆಲ್ಲ ಇದ್ರೆ ನೋಡೋದಕ್ಕೆ ಆಗ್ತಿಲ್ಲ ಎಂದಿದ್ದಾರೆ ಜನ. 
 

ಚೆನ್ನಾಗಿರೋ ದಾರಾವಾಹಿ ಹಾಳ್ ಮಾಡ್ತೀರಾ, ಯಾಕೆ ತುಳಸಿ ಎರಡು ಮಕ್ಕಳಾದರು ಅಪರೇಷನ್ ಮಾಡಿಸಿಕೊಂಡಿಲ್ವ? ಯಪ್ಪಾ ಈ ಅಸಹ್ಯ ಧಾರಾವಾಹಿ ನೋಡಿದ್ರೆ ಅಸಹ್ಯ ಆಗುತ್ತೆ. ಏನು ಕರ್ಮ ಇದು ನೋಡೋದಕ್ಕೆ ನಾಚಿಕೆಯಾಗ್ತಿದೆ. ಸಮರ್ಥ್, ಸಿರಿ, ಪೂರ್ಣಿ, ದೀಪಿಕಾ, ಸಂಧ್ಯಾ ಇವರ್ಯಾರಿಗೂ ಮದುವೆಯಾಗಿ ಇಷ್ಟು ವರ್ಷ ಆದ್ರೂ ಮಕ್ಕಳಾಗಲೇ ಇಲ್ಲ, ಅವರೆಲ್ಲಾ ಇರುವಾಗ ಇವರನ್ನ ಗರ್ಭಿಣಿ ಮಾಡೋದು ಸರಿಯಲ್ಲ ಎಂದಿದ್ದಾರೆ ಜನ. 
 

ಜನರ ಕಾಮೆಂಟ್ ಗಳನ್ನು ನೋಡಿದ್ರೆ, ಏನೋ ಆಗಬಾರದು ಆಗಿದೆ ಅಂತ ಅನಿಸುತ್ತೆ. ಆದ್ರೆ ಇಳಿ ವಯಸ್ಸಿನಲ್ಲಿ ಲೈಂಗಿಕವಾಗಿ ಅನ್ಯೋನ್ಯವಾಗಿರೋದು (physical intimacy in oldage) ತಪ್ಪಾ? ಲೈಂಗಿಕ ಸಂಬಂಧ ಅನ್ನೋದು ಸಣ್ಣ ವಯಸ್ಸಿಗೆ ಮಾತ್ರ ಸೀಮೀತ. ವಯಸ್ಸಾದ ಮೇಲೆ ಲೈಂಗಿಕತೆಯಲ್ಲಿ ತೊಡಗುವುದು ಅಸಹ್ಯ ಅಂತ ಜನ ಯೋಚನೆ ಮಾಡ್ತಿರೋದಾದ್ರೂ ಯಾಕೆ? ಉತ್ತಮ ವೈವಾಹಿಕ ಜೀವನದ ಫೌಂಡೇಶನ್ ಅಂದ್ರೆ ಅದು ಸೆಕ್ಸ್ ಕೂಡ ಹೌದು, ಅಂತಾದ್ರಲ್ಲಿ ಅದನ್ನೇ ತಪ್ಪು ಅಂತ ಹೇಳೋದು ತಪ್ಪು. 

ಹಾಗೇ ನೋಡಿದ್ರೆ ನಮ್ಮ ಸಮಾಜದಲ್ಲಿ ಈ ರೀತಿಯ ಅದೇಷ್ಟೋ ಘಟನೆಗಳು ನಡೆದಿಲ್ಲ ಹೇಳಿ, 40 ಅಥವಾ 50 ರ ಆಸುಪಾಸಿನಲ್ಲಿ ಮದುವೆ, ಆಮೇಲೆ ಗರ್ಭಿಣಿಯಾಗಿ ಮಕ್ಕಳಾದ ಅದೆಷ್ಟೋ ಉದಾಹರಣೆಗಳಿವೆ. ಎದೆ ಎತ್ತರಕ್ಕೆ ಬಂದ, ಮದುವೆ ವಯಸ್ಸಿಗೆ ಬಂದ ಮಕ್ಕಳಿರುವಾಗ ಗರ್ಭಿಣಿಯಾದ (pregnant) ಉದಾಹರಣೆಯೂ ಇದೆ. 70ನೇ ವಯಸ್ಸಲ್ಲಿ ಮಹಿಳೆಯೊಬ್ಬರು ತಾಯಿಯಾಗಿರೋದು ಇದೆ. ಅದನ್ನ ತಪ್ಪು ಅಂತ ಯಾಕ್ ಹೇಳೋದು. 
 

ತುಳಸಿ ಬಗ್ಗೆ ಇಷ್ಟೊಂದು ಕೆಟ್ಟದಾಗಿ ಮಾತನಾಡುವ , ಸೀರಿಯಲ್ ನೋಡಿದ್ರೆ ಅಹಸ್ಯ ಆಗುತ್ತೆ ಎನ್ನುವವರು ಸ್ವಲ್ಪ ಯೋಚನೆ ಮಾಡಬೇಕು. ಲೈಂಗಿಕ ಸಂಬಂಧ ಅನ್ನೋದು ಕೆಟ್ಟದ್ದು ಅಲ್ವೇ ಅಲ್ಲ, ಇದು ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುವ ಬಂಧನ ಅನ್ನೋದನ್ನ ನೆನಪಿಡಬೇಕು. ಇನ್ನು ಸುಧಾರಾಣಿ ಮೇಲೆ ಗೌರವ ಕಡಿಮೆ ಆಯ್ತು ಅಂತಾನೂ ಹೇಳ್ತಿದ್ದಾರೆ ಜನ. ಇದು ಕೇವಲ ನಟನೆ, ಸೀರಿಯಲ್ ಮಾತ್ರ ನಿಜ ಜೀವನ ಅಲ್ಲ ಅನ್ನೋದು ಮರೆತು ಹೋಯ್ತ ನೋಡುಗರಿಗೆ. 
 

ಇಂಥದ್ದೇ ಕಥೆಯನ್ನಿಟ್ಟುಕೊಟ್ಟು ಕನ್ನಡ, ಹಿಂದಿ ಮಲಯಾಲಂನಲ್ಲಿ ಸಿನಿಮಾಗಳು ಬಂದಿವೆ, ಈ ಸಿನಿಮಾಗಳು ಸೂಪರ್ ಹಿಟ್ ಕೂಡ ಆಗಿವೆ. ಬಾಲಿವುಡ್ ಸಿನಿಮಾ ಬದಾಯಿ ಹೋ (Badhai Ho) ಸೂಪರ್ ಹಿಟ್ ಆಗಿತ್ತು, ಇನ್ನು ಮಲಯಾಲಂನಲ್ಲಿ ಮೋಹನ್ ಲಾಲ್, ಮೀನಾ ಮತ್ತು ಪೃಥ್ವಿರಾಜ್ ನಟಿಸಿರುವಂತಹ ಬ್ರೋ ಡ್ಯಾಡಿ (Bro Daddy) ಸಿನಿಮಾ ಕೂಡ ಭರ್ಜರಿ ಮನರಂಜನೆ ನೀಡುವುದರ ಜೊತೆಗೆ ಈ ವಯಸ್ಸಲ್ಲಿ ಮಕ್ಕಳಾಗೋದು ಕೂಡ ಓಕೆ ಎನ್ನುವ ಸಂದೇಶ ನೀಡಿತ್ತು. 
 

Latest Videos

click me!