ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ (Bhagyalakshmi Serial) ಭಾಗ್ಯ ಗಂಡ- ಕುಸುಮಾಳ ಮುದ್ದಿನ ಮಗ ತಾಂಡವ್ ಪಾತ್ರಕ್ಕೆ ಜೀವ ತುಂಬಿ, ನೋಡುಗರಿಗೇ ಕೋಪ ಬರುವಂತೆ ನಟಿಸುವ ನಟ ಸುದರ್ಶನ್ ರಂಗಪ್ರಸಾದ್. ಮಾಡೋದು ಹೆಂಡ್ತಿಯನ್ನು ಕೆಟ್ಟದಾಗಿ ನಡೆಸುವಂತಹ ನೆಗೆಟಿವ್ ಶೇಡ್ ಆದ್ರೂ ಸಹ, ವೀಕ್ಷಕರಿಗೆ ತಾಂಡವ್ ಫೇವರಿಟ್ ನಟ ಅನ್ನೋದು ಸುಳ್ಳಲ್ಲ. ತಾಂಡವ್ ಪಾತ್ರಕ್ಕೆ ವೀಕ್ಷಕರು 100 ಮಾರ್ಕ್ಸ್ ಕೊಟ್ಟಿದ್ದಾರೆ.
ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಪಾತ್ರ ಹೇಗಿದೆಯೋ ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾದ ಕ್ಯಾರೆಕ್ಟರ್ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಅವರದ್ದು. ಸೀರಿಯಲ್ ನಲ್ಲಿ ಹೆಂಡತಿ ಮಕ್ಕಳು ಇದ್ರೂ ಇನ್ನೊಬ್ಬ ಹೆಣ್ಣಿನ ಹಿಂದೆ ಅಲೆಯುವ, ಆಕೆಗಾಗಿ ಹೆಂಡ್ತಿ ಮೇಲೆ ಕಿಡಿ ಕಾರಿ, ಆಕೆಯನ್ನು ದೂರ ಮಾಡುವ ಪಾತ್ರ ತಾಂಡವ್ ನದ್ದು, ಆದ್ರೆ ರಿಯಲ್ ಲೈಫಲ್ಲಿ ಇವರು ಹೆಂಡ್ತಿಗಾಗಿ ಜೀವವನ್ನೆ ಕೊಡುವಂತ ಪ್ರೇಮಿ. ಇವರಿಬ್ಬರ ಜೋಡಿ ತಮ್ಮ ಲವ್ ಸ್ಟೋರಿ, ಜೀವನದಿಂದಾಗಿಯೇ ಜನಪ್ರಿಯತೆ ಪಡೆದಿದ್ದಾರೆ.
ಇದೀಗ ಇತ್ತೀಚೆಗೆ ಸುದರ್ಶನ್ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ತಮ್ಮ ಪತಿಯ ಹುಟ್ಟು ಹಬ್ಬಕ್ಕೆ ಸ್ಯಾಂಡಲ್ ವುಡ್ ನಟಿ ಹಾಗೂ ಹೆಂಡ್ತಿ ಸಂಗೀತಾ ಭಟ್ (Sangeetha Bhat), ರೊಮ್ಯಾಂಟಿಕ್ ಫೋಟೊಗಳ ಜೊತೆಗೆ ರೊಮ್ಯಾಂಟಿಕ್ ಸಾಲುಗಳನ್ನು ಬರೆಯುವ ಮೂಲಕ ವಿಶ್ ಮಾಡಿದ್ದಾರೆ. ಈ ಗಂಡ ಹೆಂಡ್ತಿ ರಿಯಲ್ ಜೋಡಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪತಿ ಸುದರ್ಶನ್ ಬರ್ತ್ ಡೇಗೆ (Sudarshan Birthday) ಸಂಗೀತಾ, ಹ್ಯಾಪಿಯೆಸ್ಟ್ ಬರ್ತ್ ಡೇ ಮೈ ಕ್ರೇಜಿ ಹಾಫ್, ನನ್ನಿಂದ ನೀವು ಎಲ್ಲಾ ಕ್ರೇಜಿನೆಸ್ ಪಡೆದುಕೊಂಡೆ. ಯಾವಾಗ್ಲೂ ಪ್ರೀತಿ ಮಾಡುವ, ಎಲ್ಲರಿಗೂ ಖುಷಿಯನ್ನು ಹಂಚುವ ಮತ್ತು ಚಿಯರ್ ಮಾಡುವ ನೀನು ನನ್ನ ಶಕ್ತಿಯೂ ಹೌದು, ಇಕಿಗಾಯ್ (Ikigai) ಕೂಡ ಹೌದು. ನನ್ನ ಖುಷಿಯೂ ಹೌದು, ನಾನು ಜೀವಿಸಿರೋದಕ್ಕೆ ಕಾರಣವೂ ಹೌದು ಎಂದು ಬರೆದುಕೊಂಡಿದ್ದಾರೆ ಸಂಗೀತಾ. (ಇಲ್ಲಿ ಇಕಿಗಾಯ್ ಅಂದ್ರೆ ಜೀವನ ಮುಂದಿನ ಉದ್ದೇಶ ಎಂದರ್ಥ, ಅಂದ್ರೆ ಸಂಗೀತಾ ತಮ್ಮ ಪತಿ ಸುದರ್ಶನ್ ಅವರೇ ಜೀವನದ ಮುಖ್ಯ ಗುರಿ ಎನ್ನುವಂತೆ ಬರೆದಿದ್ದಾರೆ)
ಲವ್ ಯೂ ಮೈ ಲವ್, ನೀನು ನನ್ನ ಜೀವನ ಸಂಗಾತಿಯಾಗಿರೋದಕ್ಕೆ, ನನ್ನ ಗಾರ್ಡಿಯನ್ ಆಗಿರೋದಕ್ಕೆ, ನನ್ನ ಜೀವದ ಗೆಳೆಯ ಆಗಿರೋದಕ್ಕೆ ಥ್ಯಾಂಕ್ಯೂ. ಲವ್ ಯು ಟು ದ ಮೂನ್ ಆಂಡ್ ಬ್ಯಾಕ್. ಎಂದು ತುಂಬಾನೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇದಕ್ಕೆ ಸುದರ್ಶನ್ ಥ್ಯಾಂಕ್ಯೂ ಮೈ ಲವ್ ಅಂತಾನೂ ಕಾಮೆಂಟ್ ಮಾಡಿದ್ದಾರೆ. ಸುದರ್ಶನ್ ಸಂಗೀತ ಮುದ್ದಾದ ಜೋಡಿ ನೋಡಿ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದು, ಬೆಸ್ಟ್ ಕಪಲ್, ಫೇವರಿಟ್ ಕಪಲ್ ಎಂದಿದ್ದಾರೆ, ಜೊತೆಗೆ ಸುದರ್ಶನ್ ಗೆ ಬರ್ತ್ ಡೇ ವಿಶ್ ಕೂಡ ಮಾಡಿದ್ದಾರೆ.
ಸಂಗೀತಾ ಶೇರ್ ಮಾಡಿರುವ ಬ್ಲ್ಯಾಕ್ ಆಂಡ್ ವೈಟ್ ಮತ್ತು ಕಲರ್ ಫುಲ್ ಫೋಟೊಗಳು ಸಖತ್ ಹಾಟ್ ಮತ್ತು ಬೋಲ್ಡ್ ಆಗಿದೆ. ಸಂಗೀತಾ ಕಪ್ಪು ಬಣ್ಣದ ವಿ ಡೀಪ್ ನೆಕ್ ಟಾಪ್ ಧರಿಸಿ, ಅದಕ್ಕೆ ಜೀನ್ಸ್ ಹಾಕಿಕೊಂಡಿದ್ದರೆ, ಸುದರ್ಶನ್ ಸಿಂಪಲ್ ಆಗಿ ಗ್ರೇ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಡೆನಿಮ್ ಪ್ಯಾಂಟ್ ಧರಿಸಿದ್ದಾರೆ. ಈ ಫೋಟೊ ಬೋಲ್ಡ್ ಆಗಿದ್ದು, ಇಂಟರ್ನೆಟಲ್ಲಿ ಕಿಚ್ಚು ಹಚ್ಚುವಷ್ಟು ಹಾಟ್ ಆಗಿದೆ.