ಮಗಳು ಭಾವನಾ ಕಾಣೆಯಾದ್ರೂ, ಸೊಸೆ ಕೆನ್ನೆಗೆ ಮಗ ಹೊಡೆದ್ರೂ ಬಾರದ ಲಕ್ಷ್ಮೀ…. ಎಲ್ಲಿ ಕಾಣೆಯಾದ್ರೂ ?

Published : Sep 17, 2024, 02:11 PM ISTUpdated : Sep 17, 2024, 02:42 PM IST

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಹಲವು ಗೊಂದಲಗಳು, ಸಮಸ್ಯೆಗಳು ಉಂಟಾಗಿದೆ, ಇದೆಲ್ಲದರ ನಡುವೆ ಲಕ್ಷ್ಮೀ ನಿವಾಸ ಒಡತಿ ಲಕ್ಷ್ಮೀಯೇ ಕಾಣೆಯಾಗಿರೋದು ವೀಕ್ಷಕರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.   

PREV
17
ಮಗಳು ಭಾವನಾ ಕಾಣೆಯಾದ್ರೂ, ಸೊಸೆ ಕೆನ್ನೆಗೆ ಮಗ ಹೊಡೆದ್ರೂ ಬಾರದ ಲಕ್ಷ್ಮೀ…. ಎಲ್ಲಿ ಕಾಣೆಯಾದ್ರೂ ?

ಲಕ್ಷ್ಮೀ ನಿವಾಸ (Lakshmi Nivasa) ಧಾರವಾಹಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಮನೆಯಲ್ಲಿ ಎಲ್ಲರ ಬಗ್ಗೆ ಕಾಳಜಿ ವಹಿಸುವ ಮನೆಮಗಳಾಗಿರುವ ವೀಣಾ ಮೇಲೆ ಆಕೆಯ ಗಂಡ ಕೈ ಮಾಡಿದ್ದಾನೆ, ಅಷ್ಟೇ ಅಲ್ಲ ಅಣ್ಣನ ಮಾತಿನಿಂದ ನೊಂದಿರುವ ಭಾವನಾ ಮನೆಯಿಂದ ಕಾಣೆಯಾಗಿದ್ದಾಳೆ, ಮನೆಯಲ್ಲೆಲ್ಲಾ ತಳಮಳ ಶುರುವಾಗಿದೆ. ಇದೆಲ್ಲದರ ನಡುವೆ ಸಮಸ್ಯೆಯನ್ನು ಪರಿಹರಿಸಬೇಕಾಗಿದ್ದ ಲಕ್ಷ್ಮೀಯೇ ಮನೆಯಲ್ಲಿ ಕಾಣಿಸ್ತಿಲ್ಲ. 
 

27

ಕಳೆದ ಕೆಲ ದಿನಗಳಿಂದ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯನ್ನು (serial) ನೋಡಿದ್ರೆ, ಅಲ್ಲಿ ಲಕ್ಷ್ಮೀ ಮಿಸ್ ಆಗಿರೋದನ್ನು ಕಾಣಬಹುದು. ಮನೆಯಲ್ಲಿ ಇಷ್ಟು ದೊಡ್ಡ ವಿಷ್ಯದ ಪಂಚಾಯಿತಿ ನಡೆಯುತ್ತಿದ್ದರೂ, ಸಂತೋಷ್ ಹೆಂಡ್ತಿ ವೀಣಾ ಕೆನ್ನೆಗೆ ಭಾರಿಸಿದ್ದಾನೆ. ಕ್ಷಮೆ ಕೇಳುವಂತೆ ಅಪ್ಪ ಶ್ರೀನಿವಾಸ ಹೇಳಿದ್ದು, ವಿಧಿ ಇಲ್ಲದೇ ಸಂತೋಷ್ ಹೆಂಡ್ತಿ ಬಳಿ ಕ್ಷಮೆ ಕೂಡ ಕೇಳಿದ್ದಾನೆ. 
 

37

ಇನ್ನೊಂದೆಡೆ ಭಾವನಾ ಮನೆಯಲ್ಲಿ ಕಾಣಿಸುತ್ತಿಲ್ಲ, ಅಣ್ಣ ಸಂತೋಷ್ ಮಾತಿನಿಂದ ನೊಂದು ತಾಳಿ ತೆಗೆಯೋದಕ್ಕೆ ಭಾವನಾ ಯಾರಿಗೂ ಹೇಳದೆ ನೆಮ್ಮದಿ ಅರಸಿ ದೇವಸ್ಥಾನಕ್ಕೆ ಹೋಗಿರ್ತಾಳೆ. ಭಾವನಾ ಸೇಫ್ ಆಗಿ ಮನೆಗೆ ಬಂದಿರೋದು ನೋಡಿ ಎಲ್ಲರೂ ಖುಷಿಯಾಗಿದ್ದಾರೆ, ಆದರೆ ಇಲ್ಲೂ ಸಂತೋಷ್ ಕೊಂಕು ನುಡಿಯುತ್ತಾನೆ. 
 

47

ಯಾವಾಗಲೂ ಮನೆಯವರ ಬಗ್ಗೆ ಚಿಂತಿಸುತ್ತಾ, ಅದರಲ್ಲೂ ಭಾವನಾ ಜೀವನದ ಬಗ್ಗೆ ಕೊರಗುತ್ತಿರುವ ಅಮ್ಮ ಲಕ್ಷ್ಮೀ (Lakshmi) ಮಾತ್ರ ಭಾವನಾ ಮಿಸ್ ಆಗಿದ್ರೂ ಕಾಣಿಸ್ತಿಲ್ಲಾ ಅನ್ನೋದು ಗಮನ ಸೆಳೆದಿದೆ. ಇಷ್ಟು ಎಪಿಸೋಡ್ ಗಳಲ್ಲಿ ಲಕ್ಷ್ಮೀ ಕಾಣಿಸದೇ ಇರೋದನ್ನು ನೋಡಿ ಲಕ್ಷ್ಮೀ ಸೀರಿಯಲ್ ಬಿಟ್ಟಿದ್ದಾರೆಯೇ ಎನ್ನುವ ಗುಮಾನಿಯೂ ಶುರುವಾಗಿದೆ. 
 

57

ವೀಕ್ಷಕರು ಕೂಡ ಅನುಮಾನ ವ್ಯಕ್ತಪಡಿಸುತ್ತಿದ್ದು, ಇಷ್ಟೇಲ್ಲಾ ಆದ್ರೂ ಲಕ್ಷ್ಮೀ ಅಮ್ಮ ಎಲ್ಲಿದ್ದಾರೆ? ಅವರು ಕಾಣಿಸ್ತಾನೆ ಇಲ್ವಲ್ಲ ಎಂದಿದ್ದಾರೆ. ಯಾಕೆ ಲಕ್ಮಿ ನ ಜಾಸ್ತಿ ತೋರಿಸ್ತಾ ಇಲ್ಲ. ಲಕ್ಷ್ಮೀಯವರನ್ನೂ ಸಹ ತೋರಿಸಿ, ಲಕ್ಷ್ಮತ್ತೆ ಎಲ್ಲಿದ್ದಾರೆ  ಎಂದು ಜನ ಕೇಳ್ತಿದ್ದಾರೆ. 
 

67

ಹೆಚ್ಚಿನ ಧಾರವಾಹಿಗಳಲ್ಲಿ ಪಾತ್ರ ಮಾಡುವವರು ದಿಢೀರ್ ಆಗಿ ಬಿಟ್ಟು ಹೋದಾಗ, ಅವರ ಜಾಗಕ್ಕೆ ಹೊಸಬರನ್ನು ಕರೆತರುವ ಉದ್ದೇಶದಿಂದ ಕೆಲವು ದಿನಗಳ ಮಟ್ಟಿಗೆ ಪಾತ್ರದ ಕಣ್ಮರೆಯಾಗೋದು ಸಾಮಾನ್ಯ ಆಗಿದೆ. ಇಲ್ಲೂ ಕೂಡ ಅದೇ ರೀತಿ ನಡಿತಿದ್ಯಾ ಅನ್ನೋದು ಗೊತ್ತಿಲ್ಲ. ಎಲ್ಲರೂ ಇಷ್ಟ ಪಟ್ಟ ಲಕ್ಷ್ಮೀ ಪಾತ್ರವೇ ಇರದಿದ್ದರೆ ಸೀರಿಯಲ್ ನೋಡೋದಕ್ಕೂ ಬೇಜಾರು. 
 

77

ಇನ್ನು ನಟಿ ಶ್ವೇತಾ (Shwetha) ಬೇರೆ ರಾಜ್ಯದವರು ಆಗಿರೋದ್ರಿಂದ ಅವರು ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯೋದಕ್ಕೆ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೋ? ಅಥವಾ ಅನಾರೋಗ್ಯ ಕಾರಣದಿಂದ ಸೀರಿಯಲ್ ನಲ್ಲಿ ಕಾಣಿಸುತ್ತಿಲ್ಲವೋ ತಿಳಿದು ಬಂದಿಲ್ಲ. ಯಾವುದಕ್ಕೂ ಮುಂದಿನ ಎಪಿಸೋಡ್ ಗಳಿಗಾಗಿ ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories