ಏಕಾಏಕಿ ನಟಿ ಅಪೂರ್ವ ನಾಗರಾಜ್ Puttakkana Makkalu Serial ಬಿಟ್ಟಿದ್ಯಾಕೆ? ಅಂಥದ್ದೇನಾಯ್ತು?

Published : Jun 20, 2025, 12:22 PM IST

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರಧಾರಿ ಅಪೂರ್ವ ನಾಗರಾಜ್‌ ಅವರು ಸೀರಿಯಲ್‌ನಿಂದ ಹೊರಗಡೆ ಬಂದಿದ್ದೇಕೆ? ನಟಿ ಏನು ಹೇಳ್ತಾರೆ? 

PREV
16

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಸ್ನೇಹಾ ಪಾತ್ರದಲ್ಲಿ ನಟಿ ಅಪೂರ್ವ ನಾಗರಾಜ್‌ ಅವರು ಕಾಣಿಸಿಕೊಂಡರು.

26

ಏಕಾಏಕಿ ಈ ಸೀರಿಯಲ್‌ ತಂಡ ಸೇರಿಕೊಂಡ ಅಪೂರ್ವ ನಾಗರಾಜ್‌ ಅವರು, ಕೆಲವು ತಿಂಗಳುಗಳ ಬಳಿಕ ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನು ಎಂದು ಅವರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.

36

ಅನಾರೋಗ್ಯದಿಂದ ನಾನು ಅನಿವಾರ್ಯವಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಡಬೇಕಾಯ್ತು. ಧಾರಾವಾಹಿ ಅಂತ ಬಂದಾಗ ಕಂಟಿನ್ಯೂಸ್ ಕಮಿಟ್ಮೆಂಟ್‌ಗಳು ಇರುತ್ತೆ. ಆದರೆ ಆ ಟೈಮ್‌ನಲ್ಲಿ ನನಗೆ ಆ ಕಮಿಟ್ಮೆಂಟ್ ಪಾಲಿಸೋಕ ಆಗಲಿಲ್ಲ. ನನಗೆ ಅವಕಾಶ ಕೊಟ್ಟಿದ್ದಕ್ಕೆ ಆರೂರು ಜಗದೀಶ್‌ ಅವರಿಗೆ ಧನ್ಯವಾದಗಳು.

46

1000 ಎಪಿಸೋಡ್‌ ಪೂರ್ಣವಾದರೂ ಕೂಡ ವೀಕ್ಷಕರು ಇನ್ನೂ ಸೀರಿಯಲ್‌ಗೆ ತುಂಬ ಬೆಂಬಲ ಕೊಡುತ್ತಿದ್ದಾರೆ. ಇದು ಖುಷಿಯಾದ ವಿಷಯ.

56

ಸೀರಿಯಲ್ ಬಿಟ್ಟಿರೋದಿಕ್ಕೆ ನನಗೆ ಪಶ್ಚಾತ್ತಾಪ ಇಲ್ಲ, ಆದರೆ ಆರೋಗ್ಯ ಚೆನ್ನಾಗಿದ್ದಿದ್ರೆ ನಾನು ಧಾರಾವಾಹಿಯಲ್ಲಿ ನಟಿಸ್ತಿದ್ದೆ.

66

ಧಾರಾವಾಹಿ ಸೆಟ್‌ನಲ್ಲಿ ಉಮಾಶ್ರೀ ಅಮ್ಮನವರನ್ನು ಅಮ್ಮ ಅಂತಲೇ ಕರೆಯುತ್ತಿದ್ದೆ. ಸಾಕಷ್ಟು ಸಲ ಅವರು ನನ್ನ ನಟನೆಯನ್ನು ತಿದ್ದಿ ತೀಡಿದ್ದರು. ಅವರು ಸೂಕ್ಷ್ಮವಾಗಿ ಹೇಳಿಕೊಟ್ಟಿದ್ದನ್ನು ನಾನು ಜೀವನಪೂರ್ತಿ ನೆನಪಿಟ್ಟುಕೊಳ್ತೀನಿ.

Read more Photos on
click me!

Recommended Stories