ಕೆಲವೇ ದಿನಗಳಲ್ಲಿ ಆರಂಭವಾಗುವ Bigg Boss Kannada 13 ಶೋಗಾಗಿ, ಅಂತ್ಯ ಆಗುವ 3 ಧಾರಾವಾಹಿಗಳು ಯಾವುವು?

Published : Jun 07, 2026, 04:15 PM IST

BB Kannada 13 Starting Date: ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಶೋ ಆದಷ್ಟು ಬೇಗ ಶುರು ಆಗಲಿದೆ. ಕಲರ್ಸ್‌ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಬಿಗ್‌ ಬಾಸ್‌ ಶೋಗೆ ಸಂಬಂಧಪಟ್ಟಂತೆ ಪೂರ್ವ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೂರು ಧಾರಾವಾಹಿಗಳು ಅಂತ್ಯ ಆಗಬೇಕು. 

PREV
14
3 ಧಾರಾವಾಹಿ ಅಂತ್ಯ

ಪ್ರತಿ ವರ್ಷ ಬಿಗ್‌ ಬಾಸ್‌ ಶೋ ಶುರು ಆಗುವಾಗ ಮೂರು ಧಾರಾವಾಹಿಗಳು ಸಹಜವಾಗಿ ಅಂತ್ಯ ಆಗುತ್ತದೆ. ಬಿಗ್‌ ಬಾಸ್‌ ಶೋ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುವುದು. ಹೀಗಾಗಿ ಮೂರು ಸೀರಿಯಲ್‌ಗಳನ್ನು ಅಂತ್ಯ ಮಾಡಲಾಗುವುದು. ಈ ಬಾರಿ ಯಾವ ಸೀರಿಯಲ್‌ ಅಂತ್ಯ ಮಾಡ್ತಾರೆ?

24
ಪ್ರೇಮಕಾವ್ಯ ಧಾರಾವಾಹಿ

ಇತ್ತೀಚೆಗಷ್ಟೇ ಪ್ರೇಮಕಾವ್ಯ ಧಾರಾವಾಹಿ ಆರಂಭ ಆಗಿದ್ದರೂ ಕೂಡ ಟಿಆರ್‌ಪಿ ಅಷ್ಟೇನೂ ವಾವ್‌ ಎನ್ನುವಂತೆ ಇಲ್ಲ, ಸಾಧಾರಣ ಇದೆ ಎನ್ನಬಹುದು. ಹೀಗಾಗಿ ಈ ಸೀರಿಯಲ್‌ ಅಂತ್ಯ ಆದರೂ ಆಶ್ಚರ್ಯವಿಲ್ಲ. ಈ ಬಗ್ಗೆ ಸೀರಿಯಲ್‌ ಟೀಂ, ವಾಹಿನಿ ಉತ್ತರ ಕೊಟ್ಟಿಲ್ಲ.

34
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಕೂಡ ಟಿಆರ್ಪಿಯಲ್ಲಿ ಕುಸಿತ ಕಂಡಿದೆ. ಕೋರ್ಟ್‌ ಕಥೆ, ಅನ್ಯಾಯಕ್ಕೊಳಗಾದ ಹೆಣ್ಣಿನ ಕಥೆ, ಲವ್‌ಸ್ಟೋರಿ ಕೂಡ ಇಲ್ಲಿದೆ. ಈ ಧಾರಾವಾಹಿ ಅಂತ್ಯ ಆದರೂ ಆಶ್ಚರ್ಯವಿಲ್ಲ.

44
ರಾಣಿ ಧಾರಾವಾಹಿ

ಶಿಕ್ಷಣ ಕಲಿಯುವ ಹಂಬಲದಲ್ಲಿರುವ ರಾಣಿ, ಜೈಲಿನಲ್ಲಿರುವ ತಾಯಿ, ಮಗಳು ಯಾರೆಂದು ಗೊತ್ತಿಲ್ಲದ ತಂದೆ, ಇದರ ಸುತ್ತವೇ ಈ ಧಾರಾವಾಹಿ ಕಥೆ ಸಾಗುವುದು. ಈ ಸೀರಿಯಲ್‌ಗೆ ಆರಂಭದಿಂದಲೂ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಈ ಸೀರಿಯಲ್‌ ಮುಗಿದರೂ ಅಚ್ಚರಿ ಇಲ್ಲ. ಈ ಬಗ್ಗೆ ವಾಹಿನಿ ಉತ್ತರ ಕೊಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories