ಅನ್ನನಾ ಪಾತಿಯಾ ಅಪ್ಪಡ್ ತೀ ತೀ ತೆನಾ ವೈರಲ್ ಹಾಡಿನ ಸುಂದರಿ ಯಾರು ಗೊತ್ತಾ?

Published : Apr 05, 2025, 08:56 PM ISTUpdated : Apr 05, 2025, 09:41 PM IST

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ  ಅನ್ನನಾ ಪಾತಿಯಾ ಅಪ್ಪಡ್ ತೀ ತೀ ತೆನಾ ಹಾಡು ಭಾರಿ ವೈರಲ್ ಆಗಿದೆ. ಹಾಡಿನ ಸಾಲು, ಪದಗಳು ಅರ್ಥವೇ ಆಗಿಲ್ಲದಿದ್ದರೂ ಹಾಡು ಮಾತ್ರ ವೈರಲ್ ಆಗಿದೆ. ಈ ಹಾಡು ಹಾಡಿದ ಸುಂದರಿ ಯಾರು?

PREV
16
ಅನ್ನನಾ ಪಾತಿಯಾ ಅಪ್ಪಡ್ ತೀ ತೀ ತೆನಾ ವೈರಲ್ ಹಾಡಿನ ಸುಂದರಿ ಯಾರು ಗೊತ್ತಾ?

2025ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಯಾವೂದೋ ಮೂಲೆಯಲ್ಲಿನ ಅದೆಷ್ಟೋ ವರ್ಷಗಳ ಹಳೇ ಹಾಡುಗಳು ದಿಢೀರ್ ವೈರಲ್ ಆಗಿದೆ. ಚಿ ಚೀ ಚೀರೋ ನಾನಿ ಚೀ ಹಾಡು ಒಂದಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಅನ್ನನಾ ಪಾತಿಯಾ ಅಪ್ಪಾತ್ ಕೇತಿಯಾ ಹಾಡು ಎಲ್ಲೆಡೆ ವೈರಲ್ ಆಗುತ್ತಿದೆ. ಮಕ್ಕಳಿಂದ ಹಿಡಿದು ಎಲ್ಲರ ಬಾಯಲ್ಲೂ ಇದೇ ಹಾಡು ಕೇಳುತ್ತಿದೆ.

26

ಈ ಹಾಡು ಹಾಡಿದ ಸುಂದರಿ ಇಂಡೋನೇಷಿಯಾದ ಬೆಡಗಿ ನಿಕೇನ್ ಸಾಲಿಂದ್ರಿ. ಇಂಡೋನೇಷಿಯಾ ಮಾತ್ರವಲ್ಲ, ಹಲವು ದೇಶಗಳಲ್ಲಿ ಈಕೆಯ ಹಾಡುಗಳು ಭಾರಿ ವೈರಲ್ ಆಗಿದೆ. ಇಂಡೋನೇಷಿಯಾದ ಕೆದಿರಿ ಪ್ರಾಂತ್ಯದ ಈಕೆ ಇಂಡೋನೇಷಿಯನ್ ಭಾಷೆಯಲ್ಲಿ ಹಲವು ಆಲ್ಬಮ್ ಹಾಡುಗಳನ್ನು ಹಾಡಿದ್ದಾರೆ. ಟಿಕ್ ಟಾಕ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳ್ಲೂ ಈಕೆ ಫೇಮಸ್.

36

ನಿಕೇನ್ ಸಾಲಿಂದ್ರಿ ಹೈಸ್ಕೂಲ್ ಹುಡುಗಿ. ವಯಸ್ಸು ಕೇವಲ 17. ಈಕೆ ತನ್ನ 2ನೇ ವಯಸ್ಸಿನಿಂದ ಯೂಟ್ಯೂಬ್ ಮೂಲಕ ಜನಪ್ರಿಯಳಾಗಿದ್ದಾಳೆ. ತೊದಲು ನುಡಿ ಮೂಲಕ ಹಾಡಿದ ಹಾಡುಗಳಿಂದ ವೈರಲ್ ಆಗಿದ್ದಳು. ನಾಲ್ಕನೇ ವಯಸ್ಸಿಗೆ ಈಕೆಗೆ ಹಾಡಿನ ಕಾರ್ಯಕ್ರಮಗಳಿಗೆ ಅಹ್ವಾನ ಸಿಕ್ಕಿತ್ತು. 

46

ಚಿಕ್ಕ ವಯಸ್ಸಿನಲ್ಲಿ ಈಕೆ ಹಾಡಿದ ಮಂಗ್ಕು ಪುರೆಲ್ ಹಾಡು ಭಾರಿ ವೈರಲ್ ಆಗಿತ್ತು. ಯೂಟ್ಯೂಬ್ ಮ್ಯೂಸಿಕ್ ಟ್ರೆಂಡ್‌ನಲ್ಲಿ 7ನೇ ರ್ಯಾಂಕ್ ಪಡೆದುಕೊಂಡಿತ್ತು. ಸಣ್ಣ ವಯಸ್ಸಿಗೆ ಸಿಂಗರ್ ಪಟ್ಟ ಗಿಟ್ಟಿಸಿಕೊಂಡ ನಿಕೇನ್ ಸಾಲಿಂದ್ರಿ ಇದೀಗ ವಿಶ್ವದಲ್ಲೇ ಜನಪ್ರಿಯಳಾಗಿದ್ದಳೆ. ಯ್ಯೂಟ್ಯೂಬ್, ಟಿಕ್‌ಟಾಕ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಈಕೆಯ ಹಾಡು ಭಾರಿ ವೈರಲ್ ಹಾಗೂ ಜನಪ್ರಿಯತೆ ಪಡೆದುಕೊಂಡಿದೆ.

56

ನಿಕೇನ್ ಸಾಲಿಂದ್ರಿ ಇಂಡೋನೇಷಿಯಾದ ಅತ್ಯಂತ ಜನಪ್ರಿಯ ಹಾಡುಗಾರ್ತಿ ಮಾತ್ರವಲ್ಲ, ಇದೀಗ ಉದ್ಯಮ ಕ್ಷೇತ್ರದಲ್ಲೂ ಮಿಂಚಿದ್ದಾಳೆ. ಈಕೆಯ ಬ್ರ್ಯಾಂಡ್ ಟಿ ಶರ್ಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಭಾರತದಲ್ಲೂ ನಿಕೇನ್ ಸಾಲಿಂದ್ರಿ ಜನಪ್ರಿಯಳಾಗಿದ್ದಾಳೆ. ನಿಕೇನ್ ಸಾಲಿಂದ್ರಿಯ ರೋಲ್ ಮಾಡೆಲ್ ಇಂಡೋನೇಷಿಯಾದ ಮತ್ತೊಬ್ಬ ಜನಪ್ರಿಯ ಸಿಂಗ್ರ ಸೊಯಿಮಾ. 

66

ಆಲ್ಬಮ್ ಸಾಂಗ್‌ಗಳು ಯ್ಯೂಟ್ಯೂಬ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ಆದಾಯ ತಂದುಕೊಟ್ಟಿದೆ. ಇನ್ನು ಬಹುತೇಕ ದಿನ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಶ್ರೀಮೀತರು, ಸೆಲೆಬ್ರೆಟಿಗಳ ಕಾರ್ಯಕ್ರಮಗಳಲ್ಲಿ ಈಕೆಯ ಮ್ಯೂಸಿಕ್ ಕಾನ್ಸರ್ಟ್ ಇರಲೇಬೇಕು ಅನ್ನೋ ವಾತಾವರಣ ಇಂಡೋನೇಷಿಯಾದಲ್ಲಿ ನಿರ್ಮಾಣವಾಗಿದೆ.

Read more Photos on
click me!

Recommended Stories