Aparna Metro Voice Recording: ಮೈಕ್ ಹಿಡಿದರೆ ಸಾಕು ತಮ್ಮೆಲ್ಲಾ ನೋವನ್ನು ಮರೆಯುತ್ತಿದ್ದ ಅಪರ್ಣಾ ಅವರ ಅಂತಿಮ ದಿನಗಳ ಸ್ಫೂರ್ತಿದಾಯಕ ಹೋರಾಟದ ಬಗ್ಗೆ ಅವರ ಪತಿ ನಾಗರಾಜ್ ವಸ್ತಾರೆ ಹಂಚಿಕೊಂಡ ಕಣ್ಣೀರಿನ ಕಥೆ ಇಲ್ಲಿದೆ.
ಮೋದಿಯವರ ಅನೇಕ ಕಾರ್ಯಕ್ರಮಗಳು ಯಶಸ್ವಿ ನಟಿ, ನಿರೂಪಕಿ ಅಪರ್ಣಾ ಅವರ ವೃತ್ತಿ ನಿಷ್ಠೆ ಎಂಥವರನ್ನೂ ಬೆರಗುಗೊಳಿಸುವಂತದ್ದು. ಕ್ಯಾನ್ಸರ್‌ನಂತಹ ಭೀಕರ ಕಾಯಿಲೆ ತನ್ನನ್ನು ಬಾಧಿಸುತ್ತಿದ್ದರೂ, ಅಪರ್ಣಾ ಅವರು ಅದನ್ನು ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿಯವರ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಎಂಬ ರೋಚಕ ಸತ್ಯವನ್ನು ಅವರ ಪತಿ ನಾಗರಾಜ್ ವಸ್ತಾರೆ ಬಹಿರಂಗಪಡಿಸಿದ್ದಾರೆ. ಅಪರ್ಣಾ ಅವರ ವೃತ್ತಿ ಬದುಕಿನ ಅಂತಿಮ ದಿನಗಳ ಹೋರಾಟದ ಕುರಿತಾದ ವರದಿ ಇಲ್ಲಿದೆ.
25
ಮೋದಿಯವರ 12 ಕಾರ್ಯಕ್ರಮಗಳ ನಿರೂಪಣೆ
ಮೋದಿಯವರ 12 ಕಾರ್ಯಕ್ರಮಗಳ ನಿರೂಪಣೆ ಆಗ ಚುನಾವಣಾ ಸಂದರ್ಭ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ 10 ರಿಂದ 12 ಬಾರಿ ಭೇಟಿ ನೀಡಿದ್ದರು. ಈ ಎಲ್ಲಾ ಸಂದರ್ಭಗಳಲ್ಲೂ ಪ್ರಧಾನಿಯವರ ಕಾರ್ಯಕ್ರಮದ ನಿರೂಪಣೆಗೆ ಅಪರ್ಣಾ ಅವರೇ ಮೊದಲ ಆಯ್ಕೆಯಾಗಿದ್ದರು. ವಿಶೇಷವೆಂದರೆ, ಆ ಸಮಯದಲ್ಲಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮಂಡ್ಯದ ಸಮೀಪ ನಡೆದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಂತಹ ಬೃಹತ್ ಕಾರ್ಯಕ್ರಮಗಳನ್ನು ಅವರು ಅತ್ಯಂತ ಗಾಂಭೀರ್ಯದಿಂದ ನಿಭಾಯಿಸಿದ್ದರು.
35
ಬಿಗಿ ಭದ್ರತೆ, ಸುಡುವ ಬಿಸಿಲು
ಬಿಗಿ ಭದ್ರತೆ, ಸುಡುವ ಬಿಸಿಲು ಪ್ರಧಾನಿಯವರ ಕಾರ್ಯಕ್ರಮವೆಂದರೆ ಅಲ್ಲಿ ಭದ್ರತೆ ಅತ್ಯಂತ ಕಟ್ಟುನಿಟ್ಟಾಗಿರುತ್ತದೆ. ಒಂದು ಬ್ಯಾಗ್, ನೀರಿನ ಬಾಟಲಿ ಅಥವಾ ಮೊಬೈಲ್ ಕೂಡ ಒಳಗೆ ತರುವಂತಿಲ್ಲ. ಜಾಮರ್ಸ್ ಅಳವಡಿಸಿರುವುದರಿಂದ ಮೊಬೈಲ್ ಸಂಪರ್ಕವೂ ಇರುವುದಿಲ್ಲ. ಬೆಳಗ್ಗೆ 11 ಗಂಟೆಗೆ ಮೈದಾನಕ್ಕೆ ಹೋದರೆ, ಪ್ರಧಾನಿ ಬರುವವರೆಗೂ ಅಂದರೆ ಸಂಜೆ 4-5 ಗಂಟೆಯವರೆಗೂ ಅಲ್ಲಿಯೇ ಕಾಯಬೇಕು. ಕ್ಯಾನ್ಸರ್ ನೋವಿನ ನಡುವೆಯೂ, ಅಷ್ಟೊಂದು ಗಂಟೆಗಳ ಕಾಲ ಅನಿಶ್ಚಿತತೆಯ ನಡುವೆ ನಿಂತು ಅಪರ್ಣಾ ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಿದ್ದರು. "ಅಪರ್ಣಾ ಅಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಿದಳು ಎಂದು ನೆನೆದರೆ ಈಗಲೂ ನನಗೆ ಆಶ್ಚರ್ಯವಾಗುತ್ತದೆ" ಎಂದು ನಾಗರಾಜ್ ವಸ್ತಾರೆ ಭಾವುಕರಾಗಿದ್ದಾರೆ.
ಕ್ಯಾಮರಾ ಕಂಡರೆ ನೋವೆಲ್ಲ ಮಾಯ ನಾಗರಾಜ್ ವಸ್ತಾರೆ ಅವರ ಪ್ರಕಾರ, ಅಪರ್ಣಾ ಅವರಿಗೆ ಮೈಕ್ ಮತ್ತು ಕ್ಯಾಮರಾವೇ ದೊಡ್ಡ ಮದ್ದಾಗಿತ್ತು. "ಕ್ಯಾಮರಾ ನೋಡುತ್ತಿದ್ದಂತೆಯೇ ತಾನೊಬ್ಬ ಕ್ಯಾನ್ಸರ್ ರೋಗಿ ಎನ್ನುವುದನ್ನೇ ಅಪರ್ಣಾ ಮರೆತುಬಿಡುತ್ತಿದ್ದರು. ಮೈಮೇಲೆ ಯಾರೋ ಆವಾಹನೆಯಾದಂತೆ ಅವರು ನಿರೂಪಣೆಯಲ್ಲಿ ಪರವಶರಾಗಿಬಿಡುತ್ತಿದ್ದರು. ನಮ್ಮ ಮೆಟ್ರೋದಲ್ಲಿ ಕೇಳಿಬರುವ ಅವರ ಧ್ವನಿಯ ಧ್ವನಿಮುದ್ರಣ ಕೂಡ ಇದೇ ಅನಾರೋಗ್ಯದ ಸಂದರ್ಭದಲ್ಲೇ ನಡೆದಿತ್ತು. ಕೆಲಸವೆಂದರೆ ಅವರಿಗೆ ಅಷ್ಟು ಪ್ರಾಣ" ಎಂದು ನಾಗರಾಜ್ ಸ್ಮರಿಸಿದ್ದಾರೆ.
55
ಡಾಕ್ಟರ್‌ಗೆ ಪತಿಯ ಮನವಿ
ಡಾಕ್ಟರ್‌ಗೆ ಪತಿಯ ಮನವಿ ಅಪರ್ಣಾ ಅವರಿಗೆ ಕೆಲಸದ ಮೇಲಿದ್ದ ಪ್ರೀತಿಯನ್ನು ಕಂಡು ನಾಗರಾಜ್ ಅವರು ವೈದ್ಯರಲ್ಲಿ ಒಂದು ವಿಚಿತ್ರ ಮನವಿ ಮಾಡಿದ್ದರಂತೆ. "ಡಾಕ್ಟರ್, ಅವಳಿಗೆ ಮಾತ್ರೆ-ಔಷಧಕ್ಕಿಂತ ಹೆಚ್ಚಾಗಿ ಒಂದು ಮೈಕ್ ಮತ್ತು ಕ್ಯಾಮರಾ ಕೊಟ್ಟುಬಿಡಿ, ಅದು ಅವಳಿಗೆ ಬದುಕಲು ಬೇಕಾದ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ಹೇಳುತ್ತಿದ್ದರಂತೆ.
ಬದುಕಿನ ಕೊನೆಯ ಕ್ಷಣದವರೆಗೂ ನಿರೂಪಣೆಯನ್ನು ದೈವವೆಂದು ನಂಬಿದ್ದ ಅಪರ್ಣಾ ಅವರ ಈ ವೃತ್ತಿ ಬದ್ಧತೆ ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.