‘ನಂದಗೋಕುಲ’ ಧಾರಾವಾಹಿ ಕೇಶವ ಪಾತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ ‘ಕನ್ನಡತಿ’ ನಟ

Published : Sep 02, 2026, 03:28 PM IST

‘ನಂದಗೋಕುಲ’ ಧಾರಾವಾಹಿಯಲ್ಲಿ ಇಲ್ಲಿವರೆಗೆ ಕೇಶವ ಪಾತ್ರದಲ್ಲಿ ನಟ ಯಶ್ವಂತ್ ನಟಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರು ಧಾರಾವಾಹಿಯಿಂದ ಹೊರ ಬಂದಿದ್ದು, ಅವರ ಪಾತ್ರಕ್ಕೆ ಕನ್ನಡ ಮತ್ತು ತೆಲುಗು ಕಿರುತೆರೆಯಲಿ ಮಿಂಚುತ್ತಿರುವ ಜನಪ್ರಿಯ ನಟ ಅಭಿನಯಿಸುತ್ತಿದ್ದಾರೆ.

PREV
16
ನಂದಗೋಕುಲ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ನಂದಗೋಕುಲ’. ತುಂಬು ಕುಟುಂಬದ ಕಥೆಯನ್ನು ಹೇಳುವ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಕೇಶವ ಪಾತ್ರ ಬದಲಾವಣೆಯ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು, ಇದೀಗ ಆ ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ಅದು ಯಾರು ಗೊತ್ತ?

26
ನಂದಗೋಕುಲದಿಂದ ಹೊರ ಬಂದ ಯಶ್ವಂತ್

ಇತ್ತೀಚೆಗೆ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಆತ್ಮೀಯ ನಂದಗೋಕುಲ ಕುಟುಂಬ, ಇಂದು ನಾನು ನನ್ನ ಪ್ರಯಾಣದ ಒಂದು ವಿಶೇಷ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿ ಉಳಿಯುವ ಪಾತ್ರ 'ಕೇಶವ'ನಿಗೆ ನಾನು ವಿದಾಯ ಹೇಳುತ್ತಿದ್ದೇನೆ, ಅದರೊಂದಿಗೆ 'ನಂದಗೋಕುಲ'ದೊಂದಿಗಿನ ನನ್ನ ಪಯಣ ಕೊನೆಗೊಂಡಿದೆ ಎಂದು ಹೇಳಿದ್ದರು. ಇದೀಗ ಆ ಪಾತ್ರಕ್ಕೆ ಹೊಸ ನಟನ ಎಂಟ್ರಿಯಾಗಿದೆ.

36
ಯಾರು ನಟಿಸುತ್ತಿದ್ದಾರೆ?

ಹಿಂದೆ ಕನ್ನಡ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಜನಪ್ರಿಯ ನಟರೊಬ್ಬರು, ಇನ್ನು ಮುಂದೆ ಕೇಶವ ಪಾತ್ರದ ಮೂಲಕ ಜನಮನ ಗೆಲ್ಲೋದಕ್ಕೆ ರೆಡಿಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಟ ವಿಜಯ್ ರಾಜ್.

46
ಕನ್ನಡತಿಯಲ್ಲಿ ಗುರುತಿಸಿಕೊಂಡಿದ್ದ ನಟ

ನಟ ವಿಜಯ್ ರಾಜ್ ಅವರು ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ಸಹ ನಟನಾಗಿ ಗುರುತಿಸಿಕೊಂಡಿದ್ದರು. ಮುಖ್ಯವಾಗಿ, ಕನ್ನಡತಿ, ವಧು, ನೀನಾದೆನಾ ಧಾರಾವಾಹಿಯಲ್ಲಿ ನಟಿಸಿದ್ದರು. ಜೊತೆಗೆ ತೆಲುಗು ಕಿರುತೆರೆಯಲ್ಲೂ ಸಹ ಗುರುತಿಸಿಕೊಂಡಿದ್ದರು.

56
ಮೈಕ್ರೋ ಸೀರೀಸ್ ಗಳಲ್ಲೂ ಮಿಂಚಿಂಗ್

ವಿಜಯ್ ರಾಜ್ ಅವರು ‘ರಾಜಕುಮಾರರು’ ಎನ್ನುವ ಮೈಕ್ರೋ ಸೀರೀಸ್ ನಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ‘ಕಿರುನಗೆ’ ಎನ್ನುವ ಸಿನಿಮಾದಲ್ಲೂ ಇವರು ನಟಿಸಿದ್ದರು. ಈ ಸಿನಿಮಾ ಇನ್ನಷ್ಟೇ ಬಿಗ್ ಸ್ಕ್ರೀನ್ ನಲ್ಲಿ ಬಿಡುಗಡೆಯಾಗಲಿದೆ. ಇದೀಗ ‘ನಂದಗೋಕುಲ’ದಲ್ಲಿ ನಟಿಸಲಿದ್ದಾರೆ.

66
ನಂದನ ಎರಡನೆ ಮಗ ಕೇಶವ

ನಂದಗೋಕುಲ ಧಾರಾವಾಹಿಯಲ್ಲಿ ನಂದನ ಎರಡನೆ ಮಗ ಕೇಶವ. ಅಪ್ಪನ ಮಾತಿನ ವಿರುದ್ಧ ಪ್ರೀತಿಸಿ ಮದುವೆಯಾಗಿ, ಮೊದಲಿಗೆ ಅಪ್ಪನ ಸಿಟ್ಟಿಗೆ ಗುರಿಯಾಗಿ, ಈಗ ಅಪ್ಪನ ಪ್ರೀತಿಯನ್ನು ಪಡೆದಿರುವ, ಹಾಗೂ ನಂಬಿಕೊಂಡು ಬಂದ ಪತ್ನಿ ಮೀನಾಗೂ ಆಕೆಯ ತವರು ಮನೆಯ ಪ್ರೀತಿಯನ್ನು ಮತ್ತೆ ನೀಡುವ ಹಂಬಲದಲ್ಲಿರುವ ಪಾತ್ರ ಕೇಶವನದ್ದು, ಆ ಪಾತ್ರವನ್ನು ವಿಜಯ್ ಹೇಗೆ ನಟಿಸಲಿದ್ದಾರೆ ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories