BBK 12: ಅಪ್ಪಿತಪ್ಪಿ ಗಿಲ್ಲಿ ಹೇಳಿದ್ದು ನಿಜ ಆದ್ರೆ ಏನ್ ಕಥೆ? ಇದು ಸ್ಪರ್ಧಿಯ ಕನಸಿನ ಕಥೆ

Published : Nov 16, 2025, 12:49 PM IST

ಬಿಗ್‌ಬಾಸ್ ಸ್ಪರ್ಧಿ ಗಿಲ್ಲಿ ನಟ ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಕಾವ್ಯಾ ಜೊತೆ ಫಿನಾಲೆಯಲ್ಲಿ ತಾವೇ ವಿನ್ನರ್ ಆಗುವ ಕನಸು ಕಂಡಿದ್ದು, ನಿರೂಪಕ ಸುದೀಪ್ ಅವರನ್ನೂ ನಕಲು ಮಾಡಿ ಗಮನ ಸೆಳೆದಿದ್ದಾರೆ. ಅವರ ಆತ್ಮವಿಶ್ವಾಸವು ಮನೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

PREV
15
ಕಲ್ಪನೆಯಲ್ಲಿ ಗಿಲ್ಲಿ ನಟ

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ಗಿಲ್ಲಿ ನಟ ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾರೆ. ಗಿಲ್ಲಿ ನಟ ಅವರ ಮಾತುಗಳು ಕೆಲವೊಮ್ಮೆ ನಿಜವಾದ್ರೆ ಹೇಗೆ ಎಂದು ಬಿಗ್‌ಬಾಸ್ ಚಿಂತೆಗೀಡಾಗಿದ್ದಾರೆ. ಕಾವ್ಯಾ ಜೊತೆ ಮಾತನಾಡುವ ಸಂದರ್ಭದಲ್ಲಿ ಕೊನೆಗೆ ನಾವಿಬ್ಬರೇ ಉಳಿದುಕೊಂಡ್ರೆ ಹೇಗಿರುತ್ತೆ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ.

25
ನಾವಿಬ್ಬರೇ ಫಿನಾಲೆಗೆ

ಫಿನಾಲೆಗೆ ನಾವಿಬ್ಬರೇ ನಿಂತಾಗ ಅಲ್ಲಿ ಮಾತ್ರ ನಾನು ಕಾಂಪ್ರಮೈಸ್ ಆಗಲ್ಲ. ವಿನ್ನರ್ ಅಂತೂ ನಾನು ಆಗಿರುತ್ತೀನಿ. ಅಲ್ಲಿ ಕಾವ್ಯಾ ಮೊದಲ ರನ್ನರ್ ಅಪ್ ಆಗಬೇಕಾ ಅಥವಾ ಬೇಡವಾ ಎಂಬ ಆಯ್ಕೆ ನನಗೆ ಬರಬೇಕು. ಸೀಸಸ್ 12ನ್ನು Expect Unexpected ಅಂತಾರೆ. ಹಾಗಾಗಿ ಆಯ್ಕೆ ನನಗೆ ಬರಬೇಕು ಎಂದು ಗಿಲ್ಲಿ ನಟ ಕನಸು ಕಂಡಿದ್ದಾರೆ.

35
ಕಾವ್ಯಾ ಪ್ರತಿಕ್ರಿಯೆ ಏನು?

ಗಿಲ್ಲಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಕಾವ್ಯಾ, ಸರಿ ನೀವು ಕಾಂಪ್ರಮೈಸ್ ಆಗಬೇಡ. ಅದು ಹೇಗೆ ನಿಮಗೆ ರನ್ನರ್ ಆಪ್ ಆಯ್ಕೆ ಮಾಡುವ ಪವರ್ ಕೊಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಗಿಲ್ಲಿ ನಟ ಮತ್ತು ಕಾವ್ಯಾ ಸಂಭಾಷಣೆಯ ಈ ವಿಡಿಯೋ ತುಣಕನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಪಿತಪ್ಪಿ ಗಿಲ್ಲಿ ಹೇಳಿದ್ದು ನಿಜ ಆದ್ರೆ ಏನ್ ಕಥೆ? ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

45
ಸುದೀಪ್ ನಕಲು

ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸುದೀಪ್ ಅವರಂತೆ ಗಿಲ್ಲಿ ನಟ ನಕಲು ಮಾಡಿದ್ದಾರೆ. ಸುದೀಪ್ ಅವರಂತೆಯೇ ಬ್ರೆಸ್ಲೈಟ್ ಹಿಡಿದುಕೊಂಡು ತಮಾಷೆಯಾಗಿ ರಾಶಿಕಾ ಮತ್ತು ರಿಷಾ ಅವರನ್ನು ಕಿಚಾಯಿಸಿದ್ದಾರೆ. ನಂತರ ತನ್ನ ಆಪ್ತ ಸ್ನೇಹಿತೆ ಕಾವ್ಯಾ ಅವರನ್ನು ಹಾಡಿನ ಮೂಲಕ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸುದೀಪ್ ಮುಂದೆ ಮಾಡಿದ್ದ ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ

55
ಅತಿಯಾದ ಆತ್ಮವಿಶ್ವಾಸ

ಶನಿವಾರ ಬಿಗ್‌ಬಾಸ್ ಮುಖ್ಯದ್ವಾರದ ಬಳಿ ನಿಂತುಕೊಂಡು ವಿದಾಯದ ಭಾಷಣ ಹೇಳಿರುವ ವಿಡಿಯೋ ತುಣುಕು ವೈರಲ್ ಅಗಿತ್ತು. ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವಾಗ ತನ್ನ ಮಾತು ಹೇಗಿರಬಹುದು ಎಂಬುದನ್ನು ಗಿಲ್ಲಿ ನಟ ತೋರಿಸಿದ್ದರು. ಶೋ ಆರಂಭದ ಮೊದಲ ದಿನದಿಂದಲೂ ಗಿಲ್ಲಿ ನಟ ನಾನೇ ವಿನ್ನರ್ ಎಂದು ಅತಿಯಾದ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪುರುಷ ಸ್ಪರ್ಧಿ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ ಮಹಿಳಾ ಸ್ಪರ್ಧಿಗಳ ವಿರುದ್ಧ ಸುದೀಪ್ ಕೆಂಡಾಮಂಡಲ

Read more Photos on
click me!

Recommended Stories