ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಹಾಸ್ಯ ಪ್ರವೃತ್ತಿಯಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ನಿರೂಪಕ ಸುದೀಪ್ ಅವರ ಕೋರಿಕೆಯ ಮೇರೆಗೆ, ಅವರ ಮುಂದೆಯೇ ಅವರನ್ನು ನಕಲು ಮಾಡಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.
ಬಿಗ್ಬಾಸ್ನಲ್ಲಿ ಗಿಲ್ಲಿ ನಟ ಅವರ (Bigg Boss Gilli Nata) ಹವಾ ಜೋರಾಗಿಯೇ ನಡೆಯುತ್ತಿದೆ. ಹೊರಗಡೆ ಕೂಡ ಅವರ ಫ್ಯಾನ್ಸ್ ಹೆಚ್ಚಾಗಿಯೇ ಇದ್ದಾರೆ. ಕೆಲವು ದಿನಗಳಿಂದ ಗಿಲ್ಲಿ ವಿರುದ್ಧ ದನಿಗಳು ಬರುತ್ತಿದ್ದರೂ ಇಂದಿಗೂ ಅವರು ಹಲವರ ಫೆವರೆಟ್ ಆಗಿಯೇ ಉಳಿದಿದ್ದಾರೆ.
27
ಹಾಸ್ಯದ ನಟ
ಗಿಲ್ಲಿ ನಟ ಎಂದರೆ ಹಾಸ್ಯದ ಮೂಲಕವೇ ಎಲ್ಲರನ್ನೂ ರಂಜಿಸುವವರು ಎನ್ನುವುದು ತಿಳಿದೇ ಇದೆ. ಇದೀಗ ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಸುದೀಪ್ ಅವರ ನಕಲು ಮಾಡಿದ್ದಾರೆ! ಅದೂ ಖುದ್ದು ಸುದೀಪ್ ಅವರ ಮುಂದೆಯೇ.
37
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಹೌದು. ಇದೀಗ ವಿದಾಯ ಭಾಷಣ ಮಾಡುವ ಮೂಲಕ ಗಿಲ್ಲಿ ನಟ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದ್ದಾರೆ. ಅಷ್ಟಕ್ಕೂ ಅವರೇನೂ ಬಿಗ್‌ಬಾಸ್ ಮನೆ ಬಿಟ್ಟು ಹೋಗುತ್ತಿಲ್ಲ. ಬದಲಿಗೆ ಬಿಗ್‌ಬಾಸ್ ಮನೆಗೆ ವಿದಾಯ ಹೇಳುವಾಗ ಯಾವ ರೀತಿ ಮಾತನಾಡುತ್ತೀಯಾ ಎಂದು ರಘು ಮತ್ತು ಕಾವ್ಯಾ ಕೇಳಿದಾಗ ಗಿಲ್ಲಿ, ಕೊನೆಯ ಮಾತುಗಳನ್ನು ತಮಾಷೆಯಾಗಿ ಈ ಮಾತು ಆಡಿದ್ದರು.
ತಾವು ಮನೆಬಿಟ್ಟು ಹೋದರೆ ಹೇಗೆ ಮಾತನಾಡುತ್ತೇವೆ ಎಂದು ಹೇಳಿದ್ದರು. ಹಿನ್ನೆಲೆ ತಿಳಿಯದವರು ಇದನ್ನು ಕೇಳಿ ಶಾಕ್ ಆಗಿದ್ದಂತೂ ನಿಜ. ಇದರ ಬೆನ್ನಲ್ಲೇ ಸುದೀಪ್ ಅವರ ನಕಲು ಮಾಡಿದ್ದಾರೆ ಗಿಲ್ಲಿ!
57
ಸುದೀಪ್ ಮನವಿ
ಅಷ್ಟಕ್ಕೂ ಆಗಿದ್ದೇನೆಂದರೆ, ಹೀಗೆ ಮಾಡುವಂತೆ ಖುದ್ದು ಸುದೀಪ್ ಅವರೇ ಕೇಳಿಕೊಂಡಿದ್ದರು. ಈಗ ಗಿಲ್ಲಿ ಅವರು ನನ್ನನ್ನು ಇಮಿಟೇಟ್ ಮಾಡಬೇಕು ಎಂದಿದ್ದರು.
67
ಒಮಿಟ್ ಮಾಡೋದು!
ಅದಕ್ಕೆ ಗಿಲ್ಲಿ ಸುದೀಪ್ ಅವರ ಸ್ಟೈಲ್ನಲ್ಲಿಯೇ ಮಾತನಾಡಿದ್ದಾರೆ. ಈ ಮನೆಯಲ್ಲಿ ಕೂಗಾಡುವುದರಿಂದ ಮಾತ್ರ ಪ್ರಾಬ್ಲಂ ಸಾಲವ್ ಆಗಲ್ಲ. ಒಮಿಟ್ ಮಾಡೋದ್ರಿಂದ, ಚಪ್ಪಾಳೆ ತಟ್ಟೋದ್ರಿಂದಲೂ ಸಮಸ್ಯೆ ಆಗತ್ತೆ ಎಂದು ಸುದೀಪ್ ಸ್ಟೈಲ್ನಲ್ಲಿ ಹೇಳಿದಾಗ ಸುದೀಪ್ ಬಿದ್ದೂ ಬಿದ್ದೂ ನಕ್ಕಿದ್ದಾರೆ.
77
ಅಪ್ಸರಾ...
ಕಾವ್ಯಾ ಅವರ ಬಗ್ಗೆ ಹೇಳಿ ಎಂದಾಗ, ಬಿಗ್‌ಬಾಸ್ ಮನೆಯಲ್ಲಿ ಕಾಣುವಂಥ ಅಪ್ಸರಾ, ಅವಳ ಕಣ್ಣುಗಳೇ ನೋಡೋದ್ದಕ್ಕೆ ಸುಂದರ ಎಂದಿದ್ದಾರೆ. ಇದನ್ನು ಕೇಳಿದ ಸುದೀಪ್ ಇದನ್ನು ನಾನೇ ಹೇಳಿದಂತೆ ಅನ್ನಿಸ್ತಿದೆಯಲ್ಲ ಎಂದು ತಮಾಷೆ ಮಾಡಿದ್ದಾರೆ.