ಕನ್ನಡ ಕಿರುತೆರೆಯಲ್ಲಿ ಮನೆ ಮಂದಿ ಎಲ್ಲಾ ನೋಡಬಹುದಾದ ಬೆಸ್ಟ್ ಧಾರಾವಾಹಿ ಇದೊಂದೇ ಅಂತೆ?

Published : Aug 15, 2026, 05:02 PM IST

Kannada Serial: ಕನ್ನಡ ಕಿರುತೆರೆಯ ಸೀರಿಯಲ್ ಗಳಲ್ಲಿ ವಾರಗಿತ್ತಿಯರ ಜಗಳವೇ ಕಾಣೋದು ಹೆಚ್ಚಾಗಿದೆ. ಅಂತದ್ದರಲ್ಲಿ, ಈ ಒಂದು ಧಾರಾವಾಹಿಯಲ್ಲಿ ಮಾತ್ರ, ತುಂಬು ಕುಟುಂಬದ ಸುಂದರ ಕಥೆ ಇದ್ದು, ಮನೆ ಮಂದಿ ಜೊತೆಗೆ ಕುಳಿತು ನೋಡಬಹುದಾದ ಸೀರಿಯಲ್ ಇದು ಎಂದಿದ್ದಾರೆ.

PREV
16
ಕನ್ನಡ ಕಿರುತೆರೆಯ ಬೆಸ್ಟ್ ಧಾರಾವಾಹಿ ಇದಂತೆ

ಕನ್ನಡ ಕಿರುತೆರೆಯ ಹೆಚ್ಚಿನ ಧಾರಾವಾಹಿಗಳಲ್ಲಿ ವಿಲನ್ ಗಳ ಕಾರು ಬಾರು ಜಾಸ್ತಿಯಾಗಿರುತ್ತದೆ. ಒಂದೇ ಮನೆಯಲ್ಲಿ ಒಳ್ಳೆ ಜನರಿಗಿಂತ ಜಾಸ್ತಿ ವಿಲನ್ ಗಳೇ ಜಾಸ್ತಿ. ಆದರೆ ಈ ಒಂದು ಧಾರಾವಾಹಿಯಲ್ಲಿ ಮಾತ್ರ ಮನೆಮಂದಿ ಎಲ್ಲಾ ಕೂತು ನೋಡಬಹುದು ಎಂದು ಹೇಳುತ್ತಿದ್ದಾರೆ. ಯಾವ ಧಾರಾವಾಹಿ ಇದು ಅನ್ನೋದು ನಿಮಗೆ ಗೊತ್ತಿದ್ಯಾ?

26
ನಂದಗೋಕುಲ

ಆ ಧಾರಾವಾಹಿ ಮತ್ಯಾವುದೂ ಅಲ್ಲ, ‘ನಂದಗೋಕುಲ’. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಕಥೆ ‘ನಂದಗೋಕುಲ’ದಲ್ಲಿ ಪ್ರತಿ ಎಪಿಸೋಡ್ ನಲ್ಲೂ ಕುಟುಂಬ ಅಂದರೆ ಹೇಗಿರಬೇಕು? ಎನ್ನುವುದನ್ನು ತಿಳಿಸುತ್ತದೆ. ಹಾಗಾಗಿ ವೀಕ್ಷಕರು ಕೂಡ ಬಹಳ ಇಷ್ಟಪಟ್ಟು ಧಾರಾವಾಹಿ ನೋಡುತ್ತಿದ್ದಾರೆ. ಈ ಧಾರಾವಾಹಿ ಬಗ್ಗೆ, ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ.

36
ತುಂಬು ಕುಟುಂಬದ ಕಥೆಗೆ ವೀಕ್ಷಕರು ಫಿದಾ

ನಂದಗೋಕುಲ ಧಾರಾವಾಹಿಗೆ ಮಾವನ ಒಪ್ಪಿಗೆ ಇಲ್ಲದೆ ಮದುವೆಯಾಗಿ ಮನೆಗೆ ಎಂಟ್ರಿ ಕೊಟ್ಟ ಮೀನಾ ಮತ್ತು ಅಮೂಲ್ಯ, ಇಬ್ಬರು ಮನೆಯನ್ನು ಒಂದು ಮಾಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿರುತ್ತಾರೆ. ಹಿರಿಯ ಸೊಸೆ ಪ್ರಿಯಾ, ತಪ್ಪು ಮೇಲೆ ತಪ್ಪು ಮಾಡುತ್ತಿದ್ರೂ, ಆಕೆಯನ್ನು ಕ್ಷಮಿಸಿ, ಆಕೆಯ ಪರವಾಗಿ ನಿಂತು, ಮಾವನ ಕೈಯಲ್ಲೂ ಭೇಷ್ ಅನಿಸುವಂತೆ ಮಾಡಿದವರು ಅಮ್ಮು ಮತ್ತು ಮೀನಾ. ಈ ರೀತಿಯ ಸಂಬಂಧ ಯಾವ ಧಾರಾವಾಹಿಯಲ್ಲೂ ನೋಡಲು ಸಿಗೋದಿಲ್ಲ ಎನ್ನುತ್ತಿದ್ದಾರೆ ಜನ.

46
ಕುಟುಂಬ ಮೌಲ್ಯ ಎತ್ತಿ ಹಿಡಿದ ಒಂದೇ ಧಾರಾವಾಹಿ ನಂದಗೋಕುಲ

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಮತ್ತೆ ಸಾಕ್ಷಿಯಾಯ್ತು , ಬಹುಶಃ ಕುಟುಂಬ ಮತ್ತು ಅದರ ನೈಜ ಮೌಲ್ಯವನ್ನು ಎತ್ತಿಹಿಡಿದ ಕನ್ನಡಕ್ಕೆ ಒಂದೇ ಧಾರಾವಾಹಿ ನಂದಗೋಕುಲ. ಈ ಧಾರವಾಹಿ ನೋಡುವವರ ಮೊಗದಲ್ಲಿ ಮಂದಹಾಸ ಅವರದ್ದೇ ಮನೆಯ ಸನ್ನಿವೇಶ ಎನ್ನುವಷ್ಟರ ಮಟ್ಟಿಗೆ ಧ್ರುವತಾರೆಯಾಗಿ ಮಿನುಗುತ್ತಿರುವ ಹೆಮ್ಮೆಯ ಕಥೆ ನಂದ ಗೋಕುಲ ಎಂದು ಜನ ಹಾಡಿ ಹೊಗಳಿದ್ದಾರೆ.

56
ಭಾಂದವ್ಯ ಹೇಗಿರಬೇಕು ಎಂದು ತೋರಿಸಿಕೊಟ್ಟ ಸೀರಿಯಲ್

ಪ್ರತಿಯೊಂದು ಸಂಬಂಧಗಳ ನಡುವಿನ ಬಾಂಧವ್ಯ ಹೇಗಿರಬೇಕು ಎಂದು ತೋರಿಸಲು ಅತ್ಯುತ್ತಮ ಧಾರವಾಹಿ. ಅದಕ್ಕಾಗಿಯೇ ಎಲ್ಲರಿಗೂ ನಂದಗೋಕುಲ ಅಂದ್ರೆ ಇಷ್ಟ ಆಗೋದು. ಈ ಧಾರಾವಾಹಿಯಲ್ಲಿ ಮಾತ್ರ ಆರೋಗ್ಯಯುತ ಸಂಬಂಧವನ್ನು ತೋರಿಸುವುದು. ಬೇರೆ ಎಲ್ಲಾ ಧಾರಾವಾಹಿಯಲ್ಲಿ ಒಂದು ಮನೆಯಲ್ಲಿ ಹುಳಿ ಹಿಂಡುವವರೇ ಜಾಸ್ತಿ. ಆದರೆ ಈ ಧಾರಾವಾಹಿಯಲ್ಲಿ ಮಾತ್ರ ಸಂಬಂಧವನ್ನು ಕೂಡಿಸುವ ಕೆಲಸ ನಡೆಯುತ್ತದೆ.

66
ಸುಸಂಸ್ಕೃತ ಕುಟುಂಬ ನಂದಗೋಕುಲ

ಸಧ್ಯ ಒಂದೇ ಒಂದು ಸೀರಿಯಲ್ ನಲ್ಲಾದ್ರೂ ಹೇಗೆ ಬದುಕಬೇಕು ಅಂತ ತೋರಿಸ್ತೀಲ್ಲ, ಸುಪಾರಿ ಕೊಡೋ ವಾರಗಿತ್ತೀರ ಮಧ್ಯೆ ಒಂದು ಸುಸಂಸ್ಕೃತ ಕುಟುಂಬ ನಂದಗೋಕುಲ. ನಂದಗೋಕುಲ ಅನ್ನೋ ಹೆಸರಿಗೆ ತಕ್ಕ ಹಾಗೆ ಇರೋದು ಇದು ಒಂದೇ ಸೀರಿಯಲ್ ಅನ್ಸುತ್ತೆ, ಗಟ್ಟಿಮೇಳ ಧಾರಾವಾಹಿ ಬಳಿಕ, ಕೂಡು ಕುಟುಂಬದ ಸುಂದರ ಕಥೆ ಹೊಂದಿರುವ ಧಾರಾವಾಹಿ ಇದೊಂದೆ. ತುಂಬಾ ಖುಷಿಯಾಗುತ್ತೆ ಈ ಸೀರಿಯಲ್ ನೋಡಕ್ಕೆ. ತುಂಬಾ ಚೆನ್ನಾಗಿದೆ ಫ್ಯಾಮಿಲಿ ಸಮೇತ ಕೂತು ನೋಡುವಂತಹ ಸೀರಿಯಲ್ ಇದಾಗಿದೆ. ಎಂದು ಜನ ಹಾಡಿ ಹೊಗಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories