ಕರ್ಣನನ್ನು ಮುಗಿಸಲು ಸಂಚು ರೂಪಿಸಿ ಅಪಘಾತ ಮಾಡಿಸಿದ ರಮೇಶ್‌ಗೆ, ಅನಿರೀಕ್ಷಿತ ಕರೆಯೊಂದರಿಂದ ಕರ್ಣನೇ ತನ್ನ ಮಗ ಎಂಬ ಆಘಾತಕಾರಿ ಸತ್ಯ ತಿಳಿಯುತ್ತದೆ. ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಮಗನಿಗಾಗಿ ಹುಡುಕಾಡುವ ರಮೇಶ್, ಮುಂದೇನು ಮಾಡಲಿದ್ದಾನೆ ಎಂಬ ಕುತೂಹಲಕಾರಿ ಘಟ್ಟದಲ್ಲಿ ಕಥೆ ನಿಂತಿದೆ.
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ, ಕರ್ಣ, ರಮೇಶ್ ಮತ್ತು ಸೀತಾ ನಡುವಿನ ಯುದ್ಧ ನಡೆಯುತ್ತಿದೆ. ಮೂವರಿಗೂ ಸತ್ಯ ಗೊತ್ತಿಲ್ಲ. ಕರ್ಣನೇ ತಮ್ಮ ಮಗ ಎಂದು ಇತ್ತ ಸೀತಾಗೂ (ಭುವನೇಶ್ವರಿ) ಗೊತ್ತಿಲ್ಲ, ಅತ್ತ ಅಪ್ಪ-ಅಮ್ಮನ ಸತ್ಯ ಕರ್ಣನಿಗೂ ತಿಳಿದಿಲ್ಲ!
26
ಕಿಡಿ ಕಾರುತ್ತಿರುವ ರಮೇಶ್
ಕರ್ಣನನ್ನು ಕಂಡರೆ ಕಿಡಿ ಕಾರುತ್ತಿರುವ ರಮೇಶ್, ಅವನನ್ನು ಮುಗಿಸಲು ಸಂಚು ರೂಪಿಸಿದ. ಸೀತಾಳ ಜಾಡು ಹಿಡಿದು ಹೊರಟ ಕರ್ಣನ ಅಪಘಾತ ಮಾಡಿಸಿ, ಅವನಿಗೆ ಗುಡ್ಬೈ ಹೇಳಿಹೋದ.
36
ಸೀತಾಳ ರಹಸ್ಯ ಹೇಳಿದ ಅಣ್ಣಯ್ಯ
ಅಷ್ಟರಲ್ಲಿಯೇ ಸೀತಾಳ ರಹಸ್ಯ ಅರಿತ ಅಣ್ಣಯ್ಯ ಸೀರಿಯಲ್ ಶಿವು, ಕರ್ಣನಿಗೆ ಕಾಲ್ ಮಾಡುತ್ತಿದ್ದ. ಆ ಕಾಲ್ ಅನ್ನು ಅವನ ಅಪಘಾತದ ಬಳಿಕ ರಮೇಶ್ ತೆಗೆದುಕೊಂಡ. ಅಲ್ಲಿ ಶಿವು, ಸೀತಾಳ ಸತ್ಯ ಹೇಳುತ್ತಿದ್ದಂತೆಯೇ, ರಮೇಶ್ ಅಲ್ಲಿಗೆ ಹೋದ.
ಬಳಿಕ, ಶಿವು ರಮೇಶ್‌ಗೆ ಕರ್ಣನೇ ಸೀತಾಳ ಹೆತ್ತ ಅಮ್ಮ ಎಂದು ಸತ್ಯ ತಿಳಿಸಿದ. ಆಗ ರಮೇಶ್‌ಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಯ್ತು. ಸೀತಾ ಕರ್ಣನ ಅಮ್ಮ ಆದ್ರೆ,, ತಾನೇ ಅವನ ಅಪ್ಪ ಎನ್ನುವ ಸತ್ಯ ತಿಳಿಯಿತು.
56
ಬಿಕ್ಕಿ ಬಿಕ್ಕಿ ಅತ್ತ ರಮೇಶ್
ಕೂಡಲೇ ತನ್ನ ಹೆತ್ತ ಮಗನನ್ನು ಕೈಯಾರೆ ಕೊಲೆ ಮಾಡಿಬಿಟ್ಟೆನಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ರಮೇಶ್, ಅಪಘಾತ ಆದ ಸ್ಥಳಕ್ಕೆ ಧಾವಿಸಿದ. ಅಲ್ಲಿ ಕರ್ಣ ಇರಲಿಲ್ಲ. ರಸ್ತೆ ಮಧ್ಯೆ ನಿಂತು ಗೋಳಾಡಿದ ರಮೇಶ್, ನನ್ನ ಮಗನನ್ನು ಯಾರಾದರೂ ಹುಡುಕಿ ಕೊಡಿ, ಬದುಕಿಸಿ ಕೊಡಿ ಎಂದು ಒಂದೇ ಸಮನೆ ರೋಧಿಸಿದ.
66
ಮುಂದೇನಾಗತ್ತೆ?
ಮುಂದೇನಾಗತ್ತೆ ಎನ್ನುವ ಕುತೂಹಲ ಸದ್ಯದ್ದು. ಕರ್ಣ ಅಂತೂ ಸಾಯಲ್ಲ ಎನ್ನುವುದು ನಿಜ. ಆದರೆ ಆತ ಎಲ್ಲಿದ್ದಾನೆ, ರಮೇಶ್‌ಗೆ ಸತ್ಯ ತಿಳಿದರೆ ಏನು ಮಾಡ್ತಾನೆ? ಸೀತಾ ಮತ್ತು ಭುವನೇಶ್ವರಿ ಒಬ್ಬರೇ ಎನ್ನೋದು ತಿಳಿಯತ್ತಾ? ಸದ್ಯ ವಿಪರೀತ ಕುತೂಹಲವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.