Amruthadhaare Serial : ಅನ್ವಿತಾ ಒಳ್ಳೆಯ ನಟಿ... ಆದ್ರೆ ಈ ಪಾತ್ರಕ್ಕೆ ಹಳೆ‌‌ ಮಲ್ಲಿನೇ ಚೆನ್ನಾಗಿತ್ತು ಅಂತಿದ್ದಾರೆ ವೀಕ್ಷಕರು

Published : Mar 21, 2025, 09:21 AM ISTUpdated : Mar 21, 2025, 10:02 AM IST

ಅಮೃತಧಾರೆ ಧಾರಾವಾಹಿಯಲ್ಲಿ ರಾಧಾ ಭಗವತಿ ನಟಿಸುತ್ತಿದ್ದ, ಮಲ್ಲಿ ಪಾತ್ರದಲ್ಲಿ ಅನ್ವಿತಾ ಸಾಗರ್ ನಟಿಸುತ್ತಿದ್ದು, ಜನರು ಮಾತ್ರ ಹಳೆ ಮಲ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.   

PREV
18
Amruthadhaare Serial : ಅನ್ವಿತಾ ಒಳ್ಳೆಯ ನಟಿ... ಆದ್ರೆ ಈ ಪಾತ್ರಕ್ಕೆ ಹಳೆ‌‌ ಮಲ್ಲಿನೇ ಚೆನ್ನಾಗಿತ್ತು ಅಂತಿದ್ದಾರೆ ವೀಕ್ಷಕರು

ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಮಲ್ಲಿ ಪಾತ್ರಧಾರಿ ಬದಲಾಗಿದ್ದಾರೆ. ಇಷ್ಟು ದಿನ ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ ನಟಿಸುತ್ತಿದ್ದರು. ರಾಧಾ ಅವರು ಬೇರೆ ಸೀರಿಯಲ್ ನಲ್ಲಿ ನಟಿಸೋದರಿಂದ ಆ ಪಾತ್ರವನ್ನು ಇನ್ನು ಮುಂದೆ ಅನ್ವಿತಾ ಸಾಗರ್ ನಿರ್ವಹಿಸಲಿದ್ದಾರೆ. 
 

28

ರಾಧಾ ಭಗವತಿ (Radha Bhagavathi) ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾ LLB ಧಾರಾವಾಹಿಯಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ರಾಧಾ ಅಮೃತಧಾರೆ ಧಾರಾವಾಹಿಯಿಂದ ಹೊರ ಬಂದಿದ್ದಾರೆ. 
 

38

ಈಗಾಗಲೇ ಹೊಸ ಪಾತ್ರಧಾರಿ ಅನ್ವಿತಾ ಸಾಗರ್  (Anvitha Sagar) ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೊಮೋ ಕೂಡ ರಿಲೀಸ್ ಆಗಿದೆ. ಅನ್ವಿತಾ ಸಾಗರ್ ಈ ಹಿಂದೆ ಝೀ ಕನ್ನಡದ ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಆ ಪಾತ್ರದ ಮೂಲಕ ಅನ್ವಿತಾ ಕನ್ನಡಿಗರ ಮನ ಗೆದ್ದಿದ್ದರು. ಇವರ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. 
 

48

ಗಟ್ಟಿಮೇಳ ಸೀರಿಯಲ್  (Gattimela Serial) ಬಳಿಕ, ಹಲವು ಸೀರಿಯಲ್ ಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನ್ವಿತಾ ಸದ್ಯ ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಈಗ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ. 
 

58

ಅಮೃತಧಾರೆ ಪ್ರೊಮೋ ನೋಡಿರುವ ವೀಕ್ಷಕರು ಹಳೆಯ ಮಲ್ಲಿಯನ್ನು ಮಿಸ್ ಮಾಡುತ್ತಿದ್ದಾರೆ. ಮಲ್ಲಿ ಎನ್ನುವ ಗ್ರಾಮದ ಹುಡುಗಿಯಾಗಿ ರಾಧಾ ಭಗವತಿ ಅದ್ಭುತವಾಗಿ ನಟಿಸುತ್ತಿದ್ದರು. ಅವರ ಸ್ಲಾಂಗ್ ಕೂಡ ಚೆನ್ನಾಗಿತ್ತು. ಅದನ್ನ ಜನರು ಮಿಸ್ ಮಾಡ್ತಿದ್ದಾರೆ.
 

68

ಈ ಕುರಿತು ವೀಕ್ಷಕರು ಏನು ಹೇಳ್ತಿದ್ದಾರೆ ಅಂದ್ರೆ, ಈ ಪಾತ್ರಕ್ಕೆ ಹಳೆಯ ಮಲ್ಲಿನೆ ಚೆನ್ನಾಗಿತ್ತು.  ಮಲ್ಲಿ ಅವ್ರೇ ಚೆನ್ನಾಗಿ ಇದ್ರು ನಟನೆಗೆ. ಮೊದ್ಲಿನ್ ಮಲ್ಲಿನೆ ಚೆನ್ನಾಗಿತ್ತು,  ಮಲ್ಲಿ ಭಾರ್ಗವಿ ಧಾರಾವಾಹಿ ಜೊತೆಗೆ ಈ ಧಾರಾವಾಹಿಯಲ್ಲೂ ಸಹ ನಟಿಸಬೇಕಿತ್ತು. ಫಸ್ಟ್ ಇದ್ದ ಮಲ್ಲಿ ವಾಯ್ಸ್ ಚೆನ್ನಾಗಿತ್ತು.... ಮಲ್ಲಿ ಅಕೋರೆ ಅನೋ ಸ್ವೀಟ್ ವಾಯ್ಸ್ ಮಿಸ್ ಮಾಡ್ಕೊಂತೀವಿ, ಆಕ್ಟಿಂಗ್ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

78

ಇನ್ನೂ ಕೆಲವರು ನಮ್ ಗಟ್ಟಿಮೇಳ ಆದ್ಯ ಅಕ್ಕಾ ಮಲ್ಲಿ ಆಗಿ ಮತ್ತೆ ವಾಪಸ್ ಬಂದಿದ್ದು ಖುಷಿಯಾಗಿದೆ ಎಂದಿದ್ದಾರೆ. ಅಲ್ಲದೇ ಆದ್ಯ.. ಒಳ್ಳೇ ನಟನೆ ಮಾಡ್ತಾರೆ.. ಆದರೆ ಮಲ್ಲಿಗೆ ಮಲ್ಲಿನೆ ಸರಿ.. ಆದ್ಯ ಗೆ ನಮ್ ದಕ್ಷಿಣ ಕನ್ನಡದ ಭಾಷೆ ಮ್ಯಾಚ್ ಆಗುತ್ತೆ. ಆದ್ರೂ ಆದ್ಯಾ ವೆಲ್ ಕಂ ಬ್ಯಾಕ್ ಎಂದಿದ್ದಾರೆ. 
 

88

ಇನ್ನೂ ಒಬ್ಬರು ಏನು ಕರ್ಮ ಗುರು... ತವರು ಮನೆಗೆ ಹೋದವರು ಬದಲಾಗಿ ಬಂದವರೇ, ಇನ್ನ ಮುಂದೆ ಇದೆ ತರ ಒಳ್ಳೆ ಒಳ್ಳೆ ಪಾತ್ರ ಮಾಡಿಕೊಂಡು ಬರ್ತಾ ಇರೋರನ್ನ ಬದಲಾಯಿಸಿಕೊಂಡು ಬನ್ನಿ. ಅವಾಗ ಯಾರು ಈ ಧಾರಾವಾಹಿ ನೋಡೋದೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ..
 

Read more Photos on
click me!

Recommended Stories