ಬಿಗ್ ಬಾಸ್ ಹೊಸ ಹೋಸ್ಟ್ ಯಾರು? 'ಹಳೇ ಹೆಂಡತಿ ಪಾದವೇ ಗತಿ' ಎಂದಂಗಾಯ್ತು ಚಾನೆಲ್ ಕಥೆ!

Published : Mar 20, 2025, 11:55 AM ISTUpdated : Mar 20, 2025, 11:59 AM IST

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗಾಗಲೇ ಹೊಸ ಹೋಸ್ಟ್ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದೀಗ ಬಿಗ್ ಬಾಸ್ ಪ್ರಸಾರ ಮಾಡುತ್ತಿದ್ದ ಚಾನೆಲ್‌ಗೆ ಹಳೆಹೆಂಡತಿ ಪಾದವೇ ಗತಿ ಎಂಬಂತೆ ಹಳಬರನ್ನು ಮನವೊಲಿಕೆ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 

PREV
16
ಬಿಗ್ ಬಾಸ್ ಹೊಸ ಹೋಸ್ಟ್ ಯಾರು? 'ಹಳೇ ಹೆಂಡತಿ ಪಾದವೇ ಗತಿ' ಎಂದಂಗಾಯ್ತು ಚಾನೆಲ್ ಕಥೆ!

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗಾಗಲೇ ಹೊಸ ಹೋಸ್ಟ್ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕನ್ನಡ ಬಿಗ್ ಬಾಸ್ ಹೋಸ್ಟ್ ಮಾಡಿದ ಕಿಚ್ಚ ಸುದೀಪ್ ಈಗಾಗಲೇ ಮುಂದಿನ ಸೀಸನ್ ಹೋಸ್ಟ್ ಮಾಡೊಲ್ಲ ಎಂದಿದ್ದಾರೆ. ಇನ್ನು ತೆಲುಗು ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದ ನಾಗಾರ್ಜುನ ಅವರನ್ನೂ ಹೊರಗೆ ಹಾಕಿ ಹೊಸಬರನ್ನು ಕರೆತರುವ ಪ್ರಯತ್ನ ನಡೆದಿತ್ತು. ಆದರೆ, ಇದೀಗ ಬಿಗ್ ಬಾಸ್ ಪ್ರಸಾರ ಮಾಡುತ್ತಿದ್ದ ಚಾನೆಲ್‌ಗೆ ಹಳೆಹೆಂಡತಿ ಪಾದವೇ ಗತಿ ಎಂಬಂತೆ ಹಳಬರನ್ನು ಮನವೊಲಿಕೆ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

26

ಕನ್ನಡ ಬಿಗ್ ಬಾಸ್‌ ಸೀಸನ್ 12ಕ್ಕಿಂತ ಹೆಚ್ಚಾಗಿ ತೆಲುಗಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿವೆ. ಅದರಲ್ಲಿ ನಾಗಾರ್ಜುನ ಅವರನ್ನು ಹೋಸ್ಟ್ ಸ್ಥಾನದಿಂದ ಹೊರಗಿಟ್ಟು ಬೇರೊಬ್ಬ ಹೋಸ್ಟ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಈ ಬಾರಿ ತೆಲುಗು ಬಿಗ್ ಬಾಸ್ ಕಾರ್ಯಕ್ರಮ ಅತಿ ಬೇಗನೇ ಆರಂಭಿಸುವ ಮುನ್ಸೂಚನೆಯೂ ಲಭ್ಯವಾಗಿದೆ.

36

ಕಳೆದ ಡಿಸೆಂಬರ್‌ನಲ್ಲಿ ತೆಲುಗು ಬಿಗ್ ಬಾಸ್ ಸೀಸನ್ 8 ಮುಗಿದಿದ್ದು, ಈ ವರ್ಷ ಮೇ ತಿಂಗಳಲ್ಲಿಯೇ ಬಿಗ್ ಬಾಸ್ ಸೀಸನ್ 9 ಆರಂಭ ಮಾಡಲಾಗುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಟಿವಿ ಚಾನೆಲ್‌ನಿಂದ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ.

46

ಆದರೆ, ಬಿಗ್ ಬಾಸ್ ಸೀಸನ್ 9ಕ್ಕೆ ವಿಜಯ್ ದೇವರಕೊಂಡ ಅವರನ್ನು ಹೊಸ ಹೋಸ್ಟ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಇದರ ಜೊತೆಗೆ ನಾನಿ ಹೆಸರೂ ಕೇಳಿಬಂದಿತ್ತು. ಆದರೆ, ಈ ಬಗ್ಗೆ ಚಾನೆಲ್‌ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

56

ಆದರೆ, ಬಿಗ್ ಬಾಸ್ ಸೀಸನ್ 9ಕ್ಕೆ ಯಾವುದೇ ಹೊಸ ಹೋಸ್ಟ್‌ಗಳು ಸೆಟ್ ಆಗಿಲ್ಲ. ಯಾರನ್ನೂ ಅಪ್ರೋಚ್ ಕೂಡ ಮಾಡಲು ಮುಂದಾಗಿಲ್ಲ. ಹೀಗಾಗಿ, ಹಳೆ ಹೆಂಡತಿ ಪಾದವೇ ಗತಿ ಎಂಬಂತೆ ನಾಗಾರ್ಜುನ ಅವರನ್ನೇ ತೆಲುಗು ಬಿಗ್ ಬಾಸ್ ಹೋಸ್ಟ್ ಆಗಿ ಮುಂದುವರೆಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ.

66

ಇನ್ನು ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಇದೀಗ ಅವರ ಸ್ಥಾನಕ್ಕೆ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್ ಹೆಸರು ಕೇಳಿಬಂದಿದೆ. ಇದರ ಜೊತೆಗೆ, ಕಿಚ್ಚ ಸುದೀಪ ಅವರನ್ನು ಮತ್ತೊಮ್ಮೆ ಮನವೊಲಿಸುವ ಕಾರ್ಯ ಮಾಲಡಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

Read more Photos on
click me!

Recommended Stories