ಕನ್ನಡ ಕಿರುತೆರೆಯಲ್ಲಿ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ರೈ ಬದಲಾಗಿದ್ದು, ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೀರೆ ಧರಿಸಿ ಅಪ್ಪಟ್ಟ ಗೃಹಿಣಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿದ್ದ ಜ್ಯೋತಿ ರೈ ಮಾಡರ್ನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಭಿಮಾನಿಗಳು ಜ್ಯೋತಿ ರೈ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಾಗಿ ಕಾಯುತ್ತಿರುತ್ತಾರೆ. ಇಷ್ಟು ದಿನ ಮಾಡರ್ನ್ ಡ್ರೆಸ್‌ನಲ್ಲಿ ಬಳಕುವ ಬಳ್ಳಿಯಾಗಿ ಕಾಣುತ್ತಿದ್ದ ಜ್ಯೋತಿ ರೈ ಅವರ ಹೊಸ ಸೀರೆ ಲುಕ್ ವೈರಲ್ ಆಗುತ್ತಿದೆ.
ಇಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರೆ ಧರಿಸಿ, ವೈಯ್ಯಾರದಿಂದ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಜ್ಯೋತಿ ರೈ ಹಂಚಿಕೊಂಡಿದ್ದರು. ಜ್ಯೋತಿ ರೈ ಅವರ ವೈಯ್ಯಾರ ಕಂಡ ಪಡ್ಡೆ ಹುಡುಗರು ಇವತ್ತಿನ ರಾತ್ರಿಯ ನಿದ್ದೆಗೆ ಕೊಳ್ಳಿ ಬಿತ್ತು ಎಂದು ಪದೇ ಪದೇ ಫೋಟೋವನ್ನು ನೋಡುತ್ತಿದ್ದಾರೆ.
ಜ್ಯೋತಿ ರೈ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸೀರೆಯಲ್ಲಿಯೂ ನಿಮ್ಮ ಮಾದಕತೆ ಎಲ್ಲರನ್ನು ಆಕರ್ಷಿಸುತ್ತಿದೆ. ನೈಸ್, ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕರು, ರೆಡ್ ಹಾರ್ಟ್, ಫೈಯರ್ ಎಮೋಜಿ ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸೀರಿಯಲ್‌ನಿಂದ ದೂರವಾಗಿರುವ ಜ್ಯೋತಿ ರೈ, ‘Kill R’ ಹಾಗೂ ʼಮಾಸ್ಟರ್ ಪೀಸ್ʼ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜೊತೆಯಲ್ಲಿ ವೆಬ್ ಸಿರೀಸ್‌ಗಳಲ್ಲಿಯೂ ಜ್ಯೋತಿ ರೈ ಬ್ಯುಸಿಯಾಗಿದ್ದಾರೆ.