ಒಮ್ಮೆ ಅತೀ ಬುದ್ಧಿವಂತೆ, ಮತ್ತೊಮ್ಮೆ ಈ ಭಾಗ್ಯ ಪೆದ್ದು ಪೆದ್ದಾಗಿ ಆಡುವುದೇಕೆ? ರೋಸಿ ಹೋದ ವೀಕ್ಷಕರು

First Published May 24, 2024, 4:59 PM IST

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಸದ್ಯ ಭಾಗ್ಯ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ, ಆದರೆ ಅವರ ಪೆದ್ದುತನ ನೋಡಿ ಜನರು ಬೈತಿದ್ದಾರೆ. 
 

ಕಲರ್ಸ್ ಕನ್ನಡವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಬಗ್ಗೆ ಇದೀಗ ವೀಕ್ಷಕರು ಕೋಪ ಹೊರ ಹಾಕಿದ್ದಾರೆ. ಕಾರಣ ಒಮ್ಮೊಮ್ಮೆ ಅತಿ ಬುದ್ದಿವಂತೆಯಾಗಿ ಸಮಸ್ಯೆಯನ್ನು ನಿಭಾಯಿಸುವ ಭಾಗ್ಯ, ಈಗ ಪೆದ್ದು ಪೆದ್ದಾಗಿ ಆಡೋದು ಯಾಕೆ ಅನ್ನೋದೇ ವೀಕ್ಷಕರ ಪ್ರಶ್ನೆ. 
 

ಶ್ರೇಷ್ಠಾಳ ಎರಡು ಲಕ್ಷ ತೀರಿಸೋಕೆ, ಭಾಗ್ಯ ಕೆಲಸ ಹುಡುಕಿಕೊಂಡು ಹೋಗಿ, ಇದೀಗ ಫೈವ್ ಸ್ಟಾರ್ ಹೊಟೇಲ್ ನಲ್ಲಿ (five star hotel) ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ ಅಲ್ಲಿನ ರೀತಿ, ನೀತಿ ನಡವಳಿಕೆ ಭಾಗ್ಯಳಿಕೆ ದೊಡ್ಡ ಕಗ್ಗಂಟಾಗಿದೆ. ಅದೇ ಕಾರಣಕ್ಕೆ ಆಕೆ ಏನು ಮಾಡಲು ತೋಚದೆ, ಸರಿಯಾಗಿ ಇಂಗ್ಲೀಷ್ ಕೂಡ ಬಾರದೆ ಪೆದ್ದು ಪೆದ್ದಾಗಿ ವರ್ತಿಸುತ್ತಿದ್ದಾಳೆ. 
 

Latest Videos


ಫೈವ್ ಸ್ಟಾರ್ ಹೊಟೇಲಲ್ಲಿ ಅಡುಗೆ ಕೆಲಸಕ್ಕೆಂದು ಸೇರಿಕೊಂಡ ಭಾಗ್ಯ ಈಗ ವೈಟ್ರೆಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಹೆಸರುಗಳು, ಫುಡ್ ಮೆನುಗಳನ್ನು ನೆನಪಿಟ್ಟುಕೊಳ್ಳುವ ಜಾಣ್ಮೆ ಇಲ್ಲದೇ ಎಲ್ಲರ ಕೈಯಿಂದ ಬೈಸಿಕೊಳ್ಳುತ್ತಿದ್ದಾಳೆ ಭಾಗ್ಯ. ಅತ್ತೆಯ ಅತಿಯಾದ ಮಾತು, ಭಾಗ್ಯಳ ಅತಿಯಾದ ಪೆದ್ದುತನ ನೋಡಿ ವೀಕ್ಷಕರು ತಲೆ ಚಚ್ಚಿಕೊಳ್ಳುತ್ತಿದ್ದಾರೆ. 
 

ಕೆಲಸ ಮಾಡೋಕೆ ಫೈವ್ ಸ್ಟಾರ್ ಹೋಟೆಲ್ ಬೇಕಿತ್ತಾ? ಬೇರೆ ಕೆಲಸ ಮಾಡಿಸಬಹುದಿತ್ತು. ಎಲ್ಲಾ ಸೀರಿಯಲ್ ಟೈಟಲ್ ಲೇಡೀಸ್ ದು. ಎಲ್ಲಾ ಲೇಡೀಸ್ ಪೆದ್ದುಗಳೇ. ಏನು ಸಾಧನೆ ಇಲ್ಲ ಎಂದು ಒಬ್ಬರು ಹೇಳಿದ್ರೆ, ಭಾಗ್ಯ ಯಾಕೆ ಇಷ್ಟು ಪೆದ್ದು ಪೆದ್ದಾಗಿ ಆಡ್ತಾಳೆ ಎಂದು ಇನ್ನೊಬ್ಬರು, ಅತ್ತೆ ಸೊಸೆಯ ಅವತಾರನ ನೋಡೋಕೆ ಆಗ್ತಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. 
 

ಮಗದೊಬ್ಬರು  ಪೆದ್ದುತನದ ಪರಮಾವಧಿ ಇದು, ಯಾಕೆ ಒಮ್ಮೆ ಅತೀ ಬುದ್ಧಿವಂತೆ, ಮತ್ತೊಮ್ಮೆ ಈ ಭಾಗ್ಯ ಪೆದ್ದು ಪೆದ್ದಾಗಿ ಆಡುವುದೇಕೆ?ಈ ಅತ್ತೆ ಸೊಸೆ ದೊಡ್ಡ ಇರಿಟೇಷನ್, ಅತ್ತೆ ಸೊಸೆ ಹೀಗೆ ಬೇರೆ ಬೇರೆ ಕಡೆ ಅಡುಗೆ ಮಾಡೋದರ ಬದಲು ಒಂದು ಫಾಸ್ಟ್ ಫುಡ್ ಸೆಂಟರ್ ಓಪನ್ ಮಾಡಿದ್ರೆ ಸಾಕಿತ್ತು ಅಂದಿದ್ದಾರೆ ಮತ್ತೊಬ್ಬರು. 
 

ಮತ್ತೊಬ್ಬರು ಏನೂ ಇಲ್ಲ ಇನ್ನು ಸ್ವಲ್ಪ ದಿನದಲ್ಲಿ ಭಾಗ್ಯ ಎಲ್ಲವನ್ನು ಚಾಲೆಂಜ್ ಆಗಿ ತೆಗೆದುಕೊಂಡು ಇಂಗ್ಲಿಷ್ ಕಲಿತು ಮಾತಾಡ್ತಾಳೆ ಅಷ್ಟೇ. ಕೊನೆಗೆ ಭಾಗ್ಯಳಿಗೆ ಗೆಲುವು ಎಂದಿದ್ದಾರೆ. ಮತ್ತೊಬ್ಬರು ಭಾಗ್ಯ ಇದನ್ನೆಲ್ಲಾ ಕಲಿಲೇ ಬೇಕು. ಸ್ವಲ್ಪ ಪೆದ್ದು ಪೆದ್ದಾಗಿ ವರ್ತಿಸೋದು ಕಮ್ಮಿ ಆಗ್ಲಿ, ಕೆಲಸಕ್ಕೆ ಸೇರಿದ್ದಾಳೆ ಅದನ್ನು ನಿಭಾಯಿಸಲಿ, ಭಾಗ್ಯಳಿಗೆ ಸ್ವಲ್ಪ ಪ್ರೌಢತೆ ಬರಲಿ ಎಂದಿದ್ದಾರೆ. 
 

ಇನ್ನೂ ಒಬ್ಬರು ಭಾಗ್ಯ ಪರದಾಟ, ಅಪಾಯದ ಬಾಯಿಗೆ ಕೈ ಹಾಕಿದ ರಾಮಾಚಾರಿ, ಅಮಲಾ ಬಲೆಗೆ ಆರಾಧನಾ, ಸಾಧನಾ ತಂತ್ರಕ್ಕೆ ಮೋಸ ಹೋದ ಸುಮನಾ, ಚುಕ್ಕಿಗೆ ಮರ್ಮಘಾತ, ಮಿತಿ ಇಲ್ಲದ ಕೀರ್ತಿ ಹುಚ್ಚಾಟ, ಕರ್ಣನ ಮನೇಲಿ ಬಿರುಕು, ಮಂಗಳಮ್ಮನ ಕಣ್ಣೀರು ಇದೆ ಕಲರ್ಸ್ ಕನ್ನಡ ದ ಕಥೆ… ಯಾಕೆ ಹೀಗೆ ಅಂತ ಕೇಳ್ತಿದ್ದಾರೆ. 
 

click me!