ರೌಡಿ ಬೇಬಿಯ ಸಿಂಪಲ್, ಆದ್ರೆ ಸ್ಟೈಲಿಶ್ ಲುಕ್ ಗೆ ನೆಟ್ಟಿಗರು ಫಿದಾ… ಕನ್ನಡಕ್ಕೆ ಮತ್ತೆ ಬನ್ನಿ ಅಂತಿದ್ದಾರೆ

Published : May 24, 2024, 04:37 PM IST

ಗಟ್ಟಿಮೇಳ ಸೀರಿಯಲ್ ನಲ್ಲಿ ರೌಡಿ ಬೇಬಿ ಅಮೂಲ್ಯ ಆಗಿ ಮಿಂಚಿದ್ದ ನಿಶಾ ರವಿಕೃಷ್ಣನ್ ಸೋಶಿಯಲ್ ಮೀಡಿಯಾದಲ್ಲಿ ಸಿಂಪಲ್ ಆದ್ರೆ, ಸ್ಟೈಲಿಶ್ ಆಗಿರೋ ಫೋಟೊ ಶೇರ್ ಮಾಡಿಕೊಂಡಿದ್ದಾರೆ.   

PREV
17
ರೌಡಿ ಬೇಬಿಯ ಸಿಂಪಲ್, ಆದ್ರೆ ಸ್ಟೈಲಿಶ್ ಲುಕ್ ಗೆ ನೆಟ್ಟಿಗರು ಫಿದಾ… ಕನ್ನಡಕ್ಕೆ ಮತ್ತೆ ಬನ್ನಿ ಅಂತಿದ್ದಾರೆ

ಈ ಹಿಂದೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ರೌಡಿ ಬೇಬಿ ಅಮೂಲ್ಯ ಆಗಿ ಕನ್ನಡಿಗರ ಮನೆಮನ ಗೆದ್ದಿದ್ದ ಚೆಲುವೆ ನಿಶಾ ರವಿಕೃಷ್ಣನ್ (Nisha Ravikrishnan) ಸದ್ಯ ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. 
 

27

ತೆಲುಗಿನ ಅಮ್ಮಾಯಿಗಾರು ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಿಶಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋಗಳು, ರೀಲ್ಸ್, ಫ್ಯಾಮಿಲಿ ಜೊತೆಗಿನ ಫೋಟೋ ಶೇರ್ ಮಾಡುತ್ತಿರುತ್ತಾರೆ. 
 

37

ಇತ್ತೀಚೆಗೆ ನಿಶಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ಶೇರ್ ಮಾಡಿರುವ ಸ್ಲೀವ್ ಲೆಸ್ ಟೀಶರ್ಟ್ ಮತ್ತು ಕಪ್ಪು ಜಾಗರ್ ಧರಿಸಿರುವ ಫೋಟೋ ತುಂಬಾ ವೈರಲ್ ಆಗುತ್ತಿದೆ. ರೌಡಿ ಬೇಬಿಯ ಸಿಂಪಲ್, ಆದರೂ ಸ್ಟೈಲಿಶ್ ಆಗಿರೋ ಲುಕ್ ಗೆ (Stylish look) ನೆಟ್ಟಿಗರು ಫಿದಾ ಆಗಿದ್ದಾರೆ. 
 

47

ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಸೂಪರ್, ತುಂಬಾ ಹಾಟ್ ಆಗಿ ಕಾಣಿಸ್ತೀರಿ, ತುಂಬಾ ಮುದ್ದಾಗಿ ಕಾಣಿಸ್ತಿದ್ದೀರಿ, ಪ್ರೆಟಿ ಲೇಡಿ, ಸಖತ್ತಾಗಿದೆ, ನಮ್ಮ ರೌಡಿ ಬೇಬಿ ಯಾವಾಗಲೂ ಸೂಪರ್, ಎಂದು ಕಾಮೆಂಟ್ ಗಳ ಮಾಹಾಪೂರವೇ ಹರಿದು ಬಂದಿದೆ. 
 

57

ಇನ್ನು ಕೆಲವರು ಮೇಡಂ ಕನ್ನಡಕ್ಕೆ ಯಾವಾಗ ಬರ್ತೀರಿ? ಬೇಗ ಕನ್ನಡ ಸೀರಿಯಲ್ ಸಿನಿಮಾದಲ್ಲಿ ನಟಿಸಿ, ನೀವೆ ಕನ್ನಡ ಚಿತ್ರರಂಗದ ಮುಂದಿನ ಹೀರೋಯಿನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಜನರು ಮತ್ತೆ ರೌಡಿ ಬೇಬಿಯನ್ನು ತೆರೆ ಮೇಲೆ ನೋಡಲು ಕಾಯ್ತಿದ್ದಾರೆ..
 

67

ನಿಶಾ ರವಿಕೃಷ್ಣನ್ ಕೆಲವೊಂದು ಶಾರ್ಟ್ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇವರು ನಟಿಸಿರುವ ಅಂಶು ಎನ್ನುವ ಸಿನಿಮಾದ ಹಾಡುಗಳು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಕನ್ನಡ ಕಿರುತೆರೆಯಲ್ಲಿ ರೌಡಿ ಬೇಬಿಯಾಗಿ ಗುರುತಿಸಿಕೊಂಡಿರುವ ನಿಶಾ, ತಮ್ಮ ಹಾಡುಗಳ ಮೂಲಕವೂ ಜನಪ್ರಿಯತೆ ಪಡೆದಿದ್ದರು. 
 

77

ಇನ್ನು ನಿಶಾ ಮತ್ತು ಅನ್ವಿತಾ ಸಾಗರ್  (Anvitha Sagar) ಅವರ ಜೋಡಿ ಅಂದ್ರೆ ಫ್ಯಾನ್ಸ್ ಗೆ ಬಲು ಇಷ್ಟ. ಇಬ್ಬರು ಜೊತೆಯಾಗಿ ರೀಲ್ಸ್ ಮಾಡಬೇಕೆಂದು ಜನ ಬೇಡಿಕೆ ಇಡುತ್ತಿರುತ್ತಾರೆ. ಅದಕ್ಕೆಂದೆ ನಿಶಾ ಮತ್ತು ಅನ್ವಿತಾ ಹೆಚ್ಚಾಗಿ ಜೊತೆ ರೀಲ್ಸ್ ಮಾಡುತ್ತಾ, ಜೊತೆಯಾಗಿ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಿರುತ್ತಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories