ಮಹಾನಟಿ ಜೊತೆ ಸಿದ್ದೇಗೌಡ್ರ ಫಸ್ಟ್ ನೈಟ್... ಭಾವನಾಗೆ ಪ್ರೀತಿ ಹೇಳೊದ ಬಿಟ್ಟು ಇದೇನ್ ಗೌಡ್ರ ಆಟ?

First Published | May 24, 2024, 4:43 PM IST

ಲಕ್ಷ್ಮೀ ನಿವಾಸ ಖ್ಯಾತಿಯ ಸಿದ್ಧೇಗೌಡ್ರು ಆಲಿಯಾಸ್ ಧನಂಜಯ್ ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಸ್ಪೆಷಲ್ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಭಾವನಾ ಮತ್ತು ಸಿದ್ಧೇಗೌಡ್ರ ಜೋಡಿ ತುಂಬಾ ಫೇಮಸ್. ಹೆಚ್ಚಿನ ಜನರು ಸೀರಿಯಲ್ ನೋಡುವುದೇ ಇವರಿಬ್ಬರಿಗಾಗಿ ಎಂದು ಸೋಶಿಯಲ್ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ.
 

ವಿಷ್ಯ ಏನಪ್ಪಾ ಅಂದ್ರೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ (Mahanati) ರಿಯಾಲಿಟಿ ಶೋದಲ್ಲಿ ಕಂಟೆಸ್ಟಂಟ್ ಜೊತೆ ನಟಿಸೋದಕ್ಕೆ ಸ್ಪೆಷಲ್ ಎಂಟ್ರಿಯಾಗಿ ಈ ವಾರ ಸಿದ್ಧೇಗೌಡರು ಆಲಿಯಾಸ್ ಧನಂಜಯ್ ನಟಿಸುತ್ತಿದ್ದಾರೆ. ಮಹಾನಟಿಯ ಅದ್ಭುತ ಕಲಾವಿದೆಯಾಗಿರುವ ಗಗನ ಭಾರಿ ಜೊತೆ ಸಿದ್ಧೇಗೌಡ್ರು ನಟಿಸುತ್ತಿದ್ದಾರೆ. 

Latest Videos

click me!