ಈ ಧಾರಾವಾಹಿಗೆ ಹೀರೋ ಅಗತ್ಯಾನೆ ಇಲ್ಲಾಯ್ತು… ಲಕ್ಷ್ಮೀ ಬಾರಮ್ಮ ವೈಷ್ಣವ್ ಪಾತ್ರದ ವಿರುದ್ಧ ವೀಕ್ಷಕರು ಕಿಡಿ

Published : Mar 14, 2025, 12:32 PM ISTUpdated : Mar 14, 2025, 01:03 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿನ ವೈಷ್ಣವ್ ಪಾತ್ರದ ವಿರುದ್ಧ ವೀಕ್ಷಕರು ಕಿಡಿಕಾರಿದ್ದು, ಈ ಧಾರಾವಾಹಿಗೆ ಹೀರೋ ಇರದೇ ಇದ್ದರೇನೆ ಚೆನ್ನಾಗಿರ್ತಿತ್ತು ಎಂದಿದ್ದಾರೆ.   

PREV
18
ಈ ಧಾರಾವಾಹಿಗೆ ಹೀರೋ ಅಗತ್ಯಾನೆ ಇಲ್ಲಾಯ್ತು… ಲಕ್ಷ್ಮೀ ಬಾರಮ್ಮ ವೈಷ್ಣವ್ ಪಾತ್ರದ ವಿರುದ್ಧ ವೀಕ್ಷಕರು ಕಿಡಿ

ಕಲರ್ಸ್ ಕನ್ನಡದಲ್ಲಿ  (Colors Kannada) ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಥೆ ಹಳ್ಳ ಹಿಡಿದಿದೆ ಎಂದು ವೀಕ್ಷಕರು ಎಂದೋ ಹೇಳೋದಕ್ಕೆ ಶುರು ಮಾಡಿದ್ದಾರೆ. ಯಾವಾಗ ಕೀರ್ತಿಯನ್ನು ಕಾವೇರಿ ಬೆಟ್ಟದಿಂದ ನೂಕಿ ಕೊಲೆ ಮಾಡೋ ಪ್ರಯತ್ನ ಮಾಡಿದ್ದಳೋ, ಅಂದೇ ಕಥೆ ಅರ್ಥವನ್ನು ಕಳೆದುಕೊಂಡಿತ್ತು, ಈಗಂತೂ ಕಥೆಯನ್ನು ಎಳೆದುಕೊಂಡು ಹೋಗುತ್ತಿದ್ದಾರೆ ಅಷ್ಟೇ. 
 

28

ವೀಕ್ಷಕರು ಹೇಳುವಂತೆ ಧಾರಾವಾಹಿ ಹೆಸರು ಮಾತ್ರ ಲಕ್ಷ್ಮೀ ಬಾರಮ್ಮ (Lakshmi Baramma) ಆದರೆ, ಇಲ್ಲಿ ಕಾವೇರಿಯೇ ನಾಯಕಿ. ಕಾವೇರಿ ಹೇಳಿದಂತೆಯೇ ಎಲ್ಲವೂ ನಡೆಯುತ್ತಿದೆ. ಮಗ ವೈಷ್ಣವ್ ಗೆ ಸ್ವಂತವಾಗಿ ಯೋಚನೆ ಮಾಡುವ ಶಕ್ತಿಯೇ ಇಲ್ಲ. ಅಮ್ಮ ಹೇಳಿದ್ದನ್ನೆಲ್ಲಾ ನಂಬಿಕೊಂಡು ಅದನ್ನೇ ನಿಜ ಎಂದು ಕೊಂಡಿದ್ದಾನೆ. ಈಗ ಅಮ್ಮ ಲಕ್ಷ್ಮೀಯ ನೆನಪುಗಳನ್ನು ದೂರ ಮಾಡು ಎಂದಿದ್ದಕ್ಕೆ, ಆಕೆಯ ಫೋಟೊಗಳನ್ನೆಲ್ಲಾ ಮನೆಯಿಂದ ಹೊರ ಹಾಕಿದ್ದಾನೆ. 

38

ಅಮ್ಮ ಹಾಗೂ ಲಕ್ಷ್ಮೀ ಫೋಟೊ ಮುಂದೆ ನಿಂತು ಮಾತನಾಡುವ ವೈಷ್ಣವ್, ನನ್ನ ಮುಂದೆ ನಡೆಯುತ್ತಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ, ಇನ್ಣೇನೋ ನಡೆದು ಕೇವಲ ಗೊಂದಲವಷ್ಟೇ ಉಳಿದುಕೊಳ್ಳುತ್ತೆ. `ಅದಕ್ಕೆಲ್ಲಾ ಕಾರಣ ಅಮ್ಮ ಮತ್ತು ಲಕ್ಷ್ಮೀ ಎನ್ನುತ್ತಾನೆ ವೈಷ್ಣವ್ . 
 

48

ಅಷ್ಟೇ ಅಲ್ಲ ಮಹಾಲಕ್ಷ್ಮೀ ಹೇಳ್ತಾರೆ, ನಿಮ್ಮ ಅಮ್ಮ ಇರೋದೇ ಬೇರೆ ತೋರಿಸಿಕೊಳ್ಳೋದೆ ಬೇರೆ, ಅವರ ಕಂಟ್ರೋಲ್ ಮೀರಿ ಹೋದೋರನ್ನ ದೂರ ಸರಿಸೋಕೆ ಪ್ರಯತ್ನಿಸ್ತಾರೆ. ಎಲ್ಲರನ್ನೂ ತನ್ನ ಕಂಟ್ರೋಲ್ ನಲ್ಲಿ ಇಡೋದಕ್ಕೆ ಪ್ರಯತ್ನಿಸ್ತಾರೆ ಅಂತ. ಆದರೆ ನಮ್ಮಮ್ಮ ದೇವತೆ, ಒಬ್ಬ ಹತ್ತನೇ ಕ್ಲಾಸ್ ಫೈಲ್ ಆದವನನ್ನು, ದೊಡ್ಡ ಸಿಂಗರ್ ಮಾಡಿ, ವೈಷ್ಣವ್ ಕಾವೇರಿ ಕಷ್ಯಪ್ ಮಾಡಿದ ದೇವತೆ ನಮ್ಮಮ್ಮ ಎನ್ನುತ್ತಾನೆ ವೈಷ್ಣವ್. 
 

58

ಇನ್ನು ಅಮ್ಮ ಹೇಳುವಂತೆ ಲಕ್ಷ್ಮೀ ನಮ್ಮ ಮನೆಯ ನೆಮ್ಮದಿಯನ್ನು ಹಾಳು ಮಾಡೋದಕ್ಕೆ ಬಂದಿರೋದು, ಅವಳಿಂದಲೇ ಈ ಮನೆಯಲ್ಲಿ ಸಮಸ್ಯೆಗಳು ಆಗುತ್ತಿರೋದು ಎನ್ನುತ್ತಾರೆ. ಇದೆಲ್ಲಾ ನಿಜನಾ? ನಾನು ಯಾರನ್ನು ನಂಬಲಿ? ಎಂದು ತನಗೆ ತಾನೇ ಪ್ರಶ್ನೆ ಕೇಳುತ್ತಾನೆ ವೈಷ್ಣವ್. 
 

68

ಇದನ್ನೆಲ್ಲಾ ನೋಡಿ ನೋಡಿ ವೀಕ್ಷಕರು ಕಿಡಿ ಕಾರಿದ್ದು, ಈ ಧಾರಾವಾಹಿಗೆ ಹೀರೋ ಅಗತ್ಯಾನೆ ಇಲ್ಲಾಯ್ತು ಈ ಧಾರಾವಾಹಿಯ ನಾಯಕಿಯೇ ಕಾವೇರಿ, ಬರಿ ಮೋಸಕ್ಕೆ ಇಲ್ಲಿ ಜಯ ಸಿಗುತ್ತೆ ಎಂದು ಕಿಡಿ ಕಾರಿದ್ದಾರೆ. ವೀಕ್ಷಕರು ಏನೇನು ಕಾಮೆಂಟ್ ಮಾಡಿ ತಮ್ಮ ಕೋಪ ಹೊರ ಹಾಕಿದ್ದಾರೆ ಅನ್ನೋದನ್ನು ನೀವೇ ನೋಡಿ. 
 

78

ಡೈರೆಕ್ಟರ್ ಅವ್ರೆ ವೈಷ್ಣವ ಸ್ವಲ್ಪ ಸ್ಟ್ರಾಂಗ್ ಕ್ಯಾರೆಕ್ಟರ್ ಕೊಡಿ , ಯಾಕೆ ಡಮ್ಮಿ ಕ್ಯಾರೆಕ್ಟರ್ ಕೊಡ್ತೀರಾ? ಈ ಧಾರಾವಾಹಿಯಲ್ಲಿ ಕಾವೇರಿನೇ ಹೀರೋ, ಕಾವೇರಿನೇ ವಿಲ್ಲನ್, ಕಾವೇರಿನೆ ನಾಯಕಿ, ಎಲ್ಲವೂ ಕಾವೇರಿ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು 100 ಹುಡುಗಿ ಜೊತೆಗೆ ಬೇಕಿದ್ರೂ ಮದುವೆ ಆಗ್ತಾನೆ ಈ ವೈಷ್ನವ್ ಅಮ್ಮನ ಮಾತು ಕೇಳಿಕೊಂಡು ಎಂದಿದ್ದಾರೆ.  ಲಕ್ಷ್ಮಿ ಬಾರಮ್ಮ ಅಂಥ ಇಡೋಕಿಂತ ಕಾವೇರಿ ಬಾರಮ್ಮಾ ಅಂಥ ಇಡಬೇಕಿತ್ತು, ಲಕ್ಷ್ಮಿ ದು ಏನು ಇಲ್ಲ ಎಂದು ಕೂಡ ದೂರಿದ್ದಾರೆ. 
 

88

ಅಷ್ಟು ಮಾತ್ರ ಅಲ್ಲ, ಈ ಧಾರಾವಾಹಿ ಗೆ ವೈಶ್ ಅವಶ್ಯಕತೆ ಇಲ್ಲಾ , ಒಂದು ಮನೆ, ಮನಸ್ಸು ಕೆಡೋದಕ್ಕೆ ನಿನ್ನಂತಹ ಮಗ, ಗಂಡನೇ ಇರಬೇಕು. ಮೊದಲಿಗೆ ಈ ವೈಷ್ಣವ್ ಕ್ಯಾರೆಕ್ಟರ್ ಬದಲಾಯಿಸಿ, ನೋಡೀ ನೋಡಿ ನಮಗೆ ಸಾಕಾಗಿದೆ. ಕಥೆ ಮುಂದೆ ಹೋಗಲ್ಲ, ಕಾವೇರಿ ಮೋಸದಾಟ ಬಯಲಾಗಲ್ಲ, ಲಕ್ಷ್ಮೀಗೆ ಗೆಲುವು ಸಿಗೋದಿಲ್ಲ, ಅಂಥಾದ್ರಲ್ಲಿ ಸೀರಿಯಲ್ ಗೆ ಲಕ್ಷ್ಮೀ ಬಾರಮ್ಮ ಹೆಸರಾದ್ರೂ ಯಾಕೆ ಬೇಕು? ಈ ಧಾರಾವಾಹಿಗೆ ನಾಯಕ ಆದ್ರೂ ಯಾಕೆ ಬೇಕು ಎಂದು ಕೇಳಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories