ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘನಾಗೆ ಬೆಳ್ಳಿಪರದೆಯಲ್ಲಿಯೂ ಕಾಣಿಸಿಕೊಳ್ಳುವ ಆಸೆಯಿದೆ. ಆದರೆ, ಮದುವೆಯ ನಂತರ ಅವರ ಆಸೆ ಕನಸಾಗಿಯೇ ಉಳಿಯಲಿದೆಯಾ ಎಂಬ ಅನುಮಾನ ಬರುತ್ತಿದೆ. ಇದಕ್ಕೆ ಕಾರಣ ಅವರ ಉಡುಗೆ ಶೈಲಿ ಎಂದು ಕೆಲವರು ಹೇಳುತ್ತಿದ್ದಾರೆ.
ಮದುವೆಗೂ ಮುನ್ನ ತುಂಡುಡುಗೆಯಲ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಈಗ ಪಕ್ಕಾ ಫ್ಯಾಮಿಲಿ ಹೆಣ್ಣು ಮಗಳಾಗಿ ಮಾರ್ಪಾಡಾಗಿದ್ದಾರೆ. ಮೈತುಂಬಾ ಸೀರೆ ಧರಿಸಿ, ಮಿಂಚಿನ ನೆಕ್ಲೆಸ್ ಧರಿಸಿ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಡ್ರೆಸ್ ಬಿಟ್ಟು ಸೀರೆ ಧರಿಸುತ್ತಿರುವ ಮೇಘನಾ, ಧಾರಾವಾಹಿಯನ್ನೂ ಬಿಟ್ಟು ಬಿಡುತ್ತಾಳಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.