ಡ್ಯಾನ್ಸ್ ಶೋ ಆಗಿ ಬದಲಾದ ರಾಜಾ ರಾಣಿ ಕಾರ್ಯಕ್ರಮದ ವಿರುದ್ಧ ವೀಕ್ಷಕರು ಗರಂ… ಹೆಸ್ರು ಬದ್ಲಾಯಿಸಿ ಅಂತಿದ್ದಾರೆ ಜನ

Published : Aug 13, 2024, 05:57 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಕಾರ್ಯಕ್ರಮದ ವಿರುದ್ಧ ವೀಕ್ಷಕರು ಗರಂ ಆಗಿದ್ದು, ಇದು ರಾಜಾ ರಾಣಿನ ಅಥವಾ ಡ್ಯಾನ್ಸಿಂಗ್ ಶೋನ ಎಂದು ಪ್ರಶ್ನಿಸಿದ್ದಾರೆ.   

PREV
17
ಡ್ಯಾನ್ಸ್ ಶೋ ಆಗಿ ಬದಲಾದ ರಾಜಾ ರಾಣಿ ಕಾರ್ಯಕ್ರಮದ ವಿರುದ್ಧ ವೀಕ್ಷಕರು ಗರಂ… ಹೆಸ್ರು ಬದ್ಲಾಯಿಸಿ ಅಂತಿದ್ದಾರೆ ಜನ

ಕಲರ್ಸ್ ಕನ್ನಡ ವಾಹಿನಿ ಮನರಂಜನೆ ಕೊಡೋದ್ರಲ್ಲಿ ಯಾವಾಗ್ಲೂ ಮುಂದಿರುತ್ತೆ. ಅದು ಧಾರಾವಾಹಿ ಆಗಿರಲಿ ಅಥವಾ ರಿಯಾಲಿಟಿ ಶೋಗಳೇ (reality show) ಆಗಿರಲಿ ಯಾವಾಗ್ಲೂ ಒಂದು ಹೆಜ್ಜೆ ಮುಂದೇನೆ ಇರುತ್ತೆ. ಹಾಗಾಗಿಯೇ ವೀಕ್ಷಕರಿಗೆ ಈ ಬಾರಿಯ ರಾಜಾ ರಾಣಿ ಕಾರ್ಯಕ್ರಮದ ಮೇಲೆ ಭಾರಿ ನೀರಿಕ್ಷೆ ಇಟ್ಟುಕೊಂಡಿದ್ದರು. 
 

27

ಸೃಜನ್ ಲೋಕೇಶ್ ಸಾರಥ್ಯದಲ್ಲಿ ಬರುತ್ತಿರುವ ರಾಜಾ ರಾಣಿ(Raja Rani) ರಿಯಾಲಿಟಿ ಶೋ ರೀಲೋಡೆಡ್ ಕಾರ್ಯಕ್ರಮ ದಂಪತಿಗಳ ಕಾರ್ಯಕ್ರಮವಾಗಿದ್ದು, ಹಲವಾರು ರೀತಿಯ ಸ್ಪರ್ಧೆಗಳನ್ನ ನಡೆಸಿ, ಯಾರು ಬೆಸ್ಟ್ ಜೋಡಿ ಆಗ್ತಾರೆ ಅನ್ನೋದನ್ನ ಆಯ್ಕೆ ಮಾಡೋದೆ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. 
 

37

ಸೃಜನ್ ಲೋಕೇಶ್ (Srujan Lokesh), ಹಿರಿಯ ನಟಿ ತಾರಾ ಮತ್ತು ಅದಿತಿ ಪ್ರಭುದೇವ ತೀರ್ಪುಗಾರರಾಗಿ ಹಾಗೂ ಅನುಪಮಾ ಗೌಡ ನಿರೂಪಣೆಯಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರ್ತಿದೆ ನಿಜಾ. ಆದರೆ ರಾಜಾ ರಾಣಿ ಜೋಡಿಗಳ ನಡುವಿನ ಹೊಂದಾಣಿಕೆ ನೋಡೋ ಬದಲು ಡ್ಯಾನ್ಸಿಂಗ್ ಕಾರ್ಯಕ್ರಮವಾಗಿ ಬದಲಾಗ್ತಿರೋದು ಜನರಿಗೆ ಕೋಪ ತರಿಸಿದೆ. 
 

47

ಸೋಶಿಯಲ್ ಮೀಡಿಯಾದಲ್ಲಿ ರಾಜಾ ರಾಣಿ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಇದು ರಾಜಾ ರಾಣಿನ,  ಡ್ಯಾನ್ಸಿಂಗ್ ಶೋನ? (dancing show) ರಾಜ ರಾಣಿ ಹೆಸರು ತೆಗದು ಡ್ಯಾನ್ಸ್ ಡ್ಯಾನ್ಸ್ ಅಂತ ಇಡಿ ಅದೆ ಒಳ್ಳೆದು ಎಂದಿದ್ದಾರೆ. 
 

57

ಒಬ್ಬರು ಕಾಮೆಂಟ್ ಮಾಡಿ ರಾಜಾ ರಾಣಿ ಶೋ ಹೆಸರಿಗೆ ತಕ್ಕಂತೆ ಏನೂ ತೋರಿಸ್ತಾನೆ ಇಲ್ಲ, ಅದರ ಬದಲಾಗಿ ಈ ಕಾರ್ಯಕ್ರಮಕ್ಕೆ ಡ್ಯಾನ್ಸಿಂಗ್ ರಾಜಾ ರಾಣಿ ಅಂತ ಹೆಸರಿಟ್ರೆ ಒಳ್ಳೆದು. ನೀವು ಡ್ಯಾನ್ಸ್ ಅಲ್ಲದೇ ಬೇರೆನೂ ತೋರಿಸ್ತಾನೆ ಇಲ್ಲ. ನಿಮಗಿಂತ ಬೇರೆ ಚಾನೆಲ್’ನವರೇ ಪರವಾಗಿಲ್ಲ ಎಂದಿದ್ದಾರೆ. 
 

67

ಮತ್ತೊಬ್ರು ಕಾಮೆಂಟ್ ಮಾಡಿ ಅಲ್ಲ ನೀವು ಅಡ್ಡಿಯೇಷನ್ ತಗೋಬೇಕಿದ್ರೆ ಹೇಳ ಬೇಕಿತ್ತು ಇದು ಡ್ಯಾನ್ಸ್ ಶೋ ಅಂಥ. ಪಾಪ ಡ್ಯಾನ್ಸ್ ಬರದವರು ಎಲಿಮಿನೇಟ್ ಆಗ್ತಿದ್ದಾರೆ, ಚೆನ್ನಾಗಿ ಡ್ಯಾನ್ಸ್ ಬರೋರು ಮಾತ್ರ ಇಲ್ಲಿ ಫೈನಲ್ ಗೆ ಹೋಗ್ತಾರೆ. ಕಪಲ್ ಶೋ (couple show) ಬದಲಾಗಿ ಡ್ಯಾನ್ಸ್ ಶೋ ಆದಾಗ, ಒಳ್ಳೆಯ ಜೋಡಿಗಳು ಬೇಗನೆ ಎಲಿಮಿನೇಟ್ ಆಗ್ತಾರೆ ಅಂದಿದ್ದಾರೆ. 
 

77

ರಾಜಾ ರಾಣಿ ಕಾರ್ಯಕ್ರಮದಲ್ಲಿ ರಘು- ರಂಜಿತಾ, ವೈಲ - ಗೋವಿಂದ, ಅರ್ಜುನ್ -ಸಹನಾ,  ಜೀಜೀ -ದಿವ್ಯಾ, ಪ್ರಿಯಾಂಕಾ -ಅಮಿತ್, ಹರ್ಷಿತಾ-ವಿನಯ್, ಲೋಕೇಶ್ -ರಚನಾ, ವಿಠಲ್ -ಶುಭಶ್ರೀ, ಮೇಘ -ಸಂಜಯ್, ರಘು-ರಂಜಿತಾ ಜೋಡಿ ಭಾಗವಹಿಸುತ್ತಿದ್ದು, ವಾರದಿಂದ ವಾರಕ್ಕೆ ವಿಭಿನ್ನ ಡ್ಯಾನ್ಸ್ ಮೂಲಕ ಜನರನ್ನ ರಂಜಿಸ್ತಿದ್ದಾರೆ. 
 

Read more Photos on
click me!

Recommended Stories