Sara Annaiah in Black Saree : ಇವ್ರನ್ನ ನೋಡಿನೇ ಸೀರೆಲಿ ಹುಡುಗೀರ ನೋಡಲೇಬಾರದು ಅಂತ ಹೇಳಿರೋದಾ?

ಅಮೃತಧಾರೆ  ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಕಪ್ಪು ಸೀರೆಯುಟ್ಟು ಪೋಸ್ ನೀಡಿದ್ದು, ನಟಿಯ ಅಂದ ಚೆಂದ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

ಸೀರೆಲಿ ಹುಡುಗೀರ ನೋಡಲೆಬಾರದು ನಿಲ್ಲಲ್ಲ ಟೆಂಪ್ರೇಚರೂ… ಎಂದು ಕವಿಗಳು ಹೇಳಿರೋದು ಸುಳ್ಳಲ್ಲ ಅಲ್ವಾ? ಮಾಡರ್ನ್ ಹುಡುಗಿ ಸಾರಾ ಅಣ್ಣಯ್ಯ (Sara Annaiah) ಸೀರೆಯುಟ್ಟು ಫೋಟೊ ಅಪ್ ಲೋಡ್ ಮಾಡ್ತಿದ್ರೆ, ಪ್ರತಿಯೊಬ್ರಿಗೂ ಅನ್ಸೋದು ಇದೆ ಅಲ್ವಾ? 
 

ಅಮೃತಧಾರೆ (Amruthadhare) ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ ಮಿಂಚುತ್ತಿರುವ ನಟಿ ಸಾರಾ ಅಣ್ಣಯ್ಯ. ಸೀರಿಯಲ್ ನಲ್ಲೂ ಸಖತ್ ಸ್ಟೈಲಿಶ್, ಮಾಡರ್ನ್ ಹುಡುಗಿ, ಮಾಡರ್ನ್ ಸೊಸೆ ಕೂಡ ಹೌದು, ನಿಜ ಜೀವನದಲ್ಲೂ ಇವರು ತುಂಬಾನೆ ಸ್ಟೈಲಿಶ್.
 


ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಈ ಬೆಡಗಿ ಹೆಚ್ಚಾಗಿ ತಮ್ಮ ಸ್ಟೈಲಿಶ್, ಬೋಲ್ಡ್ ಫೋಟೋಗಳನ್ನ ಹಂಚಿಕೊಳ್ತಾ ಪಡ್ಡೆಗರ ನಿದ್ದೆ ಕದಿತ್ತಿದ್ದದ್ದು ನಿಜ.  ಜೊತೆಗೆ ಸೀರಿಯಲ್ಲೂ ಸಖತ್ತಾಗಿ ಮಿಂಚ್ತಾರೆ ಈ ನಟಿ. ಇದೀಗ ಮತ್ತೆ ಸೀರೆಯುಟ್ಟ ಫೋಟೊಗಳನ್ನ ಹಾಕಿ ನಟಿ ಸುದ್ದಿಯಲ್ಲಿದ್ದಾರೆ. 
 

ಗೋಲ್ಡನ್ ಬಾರ್ಡರ್ ಇರುವಂತಹ ಕಡು ಕಪ್ಪು ಬಣ್ಣದ ಸೀರೆಯುಟ್ಟಿರುವ ಸಾರಾ, ಅದಕ್ಕೆ ಕಾಂಟ್ರಾಸ್ಟ್ ಆಗಿರುವ ಪೀಚ್ ಬಣ್ಣದ ಬ್ಲೌಸ್ ಧರಿಸಿ, ತುಂಬಾನೆ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ. ಫೋಟೋಗೆ ನಟಿ Give me fresh flowers and an old love! ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 
 

ಸಾರಾ ಅಣ್ಣಯ್ಯ ಲಕ್ಷ್ಮೀ ಗ್ಲಾಮ್ ಅವರ ಸೀರೆ ಮತ್ತು ಜ್ಯುವೆಲ್ಲರಿ ಧರಿಸಿದ್ದು, ರಂಜು ಗೌಡ ಅವರ ಮೇಕಪ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. ವಿಕಾಸ್ ಕಾಕೋಲ್ ಅವರ ಫೋಟೋ ಶೂಟ್ (photo shoot) ಮಾಡಿದ್ದು, ಪ್ರತಿಯೊಂದು ಫೋಟೋವೂ ತುಂಬಾನೆ ಮುದ್ದಾಗಿ ಬಂದಿದೆ. 
 

ಸಾರಾ ಅಣ್ಣಯ್ಯ ಸಾರಿ ಲುಕ್ ಗೆ ಮನಸೋತಿರುವ ಅಭಿಮಾನಿಗಳು ಮನಮೋಹಕ, ಬ್ಯೂಟಿಫುಲ್, ಚಾರ್ಮಿಂಗ್, ಸುಂದರಿ, ಪ್ರೆಟಿ,  ಸೀರೆಲಿ ಬೊಂಬಾಟ್ ಆಗಿ ಕಾಣಿಸ್ತಿದ್ದೀರಿ, ಹೀರೋಯಿನ್ ಆಗಿ ಪ್ರಯತ್ನ ಮಾಡಿ ಮೇಡಂ ಎಂದೆಲ್ಲಾ ಹೇಳಿದ್ದಾರೆ. 
 

ಇನ್ನು ಸೌಂದರ್ಯದಲ್ಲಿ, ಅಂದ ಚೆಂದ, ಸ್ಟೈಲ್ ನಲ್ಲಿ ಎಲ್ಲದರಲ್ಲೂ ಟಾಪಲ್ಲಿರೋ ಸಾರಾ ಅಣ್ಣಯ್ಯನ ನೋಡಿ, ನೀವು ಯಾವುದೇ ಹಾಲಿವುಡ್, ಬಾಲಿವುಡ್ ಅಷ್ಟೇ ಅಲ್ಲ, ಸ್ಯಾಂಡಲ್ ವುಡ್ ಹೀರೋಯಿನ್ ಗೂ ಕಮ್ಮಿ ಇಲ್ಲ ನೀವು. ತುಂಬಾನೆ ಬ್ಯೂಟಿ ಫುಲ್ ಆಗಿದ್ದೀರಿ. ಬೇಗನೆ ಹೀರೋಯಿನ್ ಆಗಿ ಎಂದಿದ್ದಾರೆ.  
 

Latest Videos

click me!