ಗೋವಾದಲ್ಲಿ ಟ್ಯಾಟೂ ಹಾಕಿಸಿದ ಸೋನು ಶ್ರೀನಿವಾಸ್ ಗೌಡ; ಅಮಾಯಕನ ಮುಂದೆ ಕಾಲು ಎತ್ತಬೇಡ ಎಂದ ನೆಟ್ಟಿಗರು!

ಗೋವಾದಲ್ಲಿ ಜಾಲಿ ಮಾಡುತ್ತಿರುವ ಸೋನು ಶ್ರೀನಿವಾಸ್ ಗೌಡ. ಟ್ಯಾಟೂ ಹುಡುಗನ ಮುಂದೆ ಕಾಲು ಎತ್ತಬೇಡ ಎಂದ ನೆಟ್ಟಿಗರು....
 

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಕೆಲವು ದಿನಗಳಿಂದ ಗೋವಾದಲ್ಲಿ ಸಖತ್ ಜಾಲಿ ಮಾಡುತ್ತಿದ್ದಾರೆ. 

ಗೋವಾಗೆ ಬಟ್ಟೆ ಪ್ಯಾಕ್ ಮಾಡುವುದರಿಂದ ಹಿಡಿದು ಪ್ರತಿಯೊಂದರ ಅಪ್‌ಡೇಟ್ ನೀಡುತ್ತಿರುವ ಈ ಸುಂದರಿ ಕಾಲಿಗೆ ಟ್ಯಾಟೈ ಹಾಕಿಸಿದ್ದಾರೆ. 


ಬೆಂಗಳೂರಿನಲ್ಲಿ ನೂರಾರು ಟ್ಯಾಟೂ ಹಾಕುವವರು ಸಿಗುತ್ತಾರೆ ಆದರೆ ಗೋವಾ ಟ್ರಿಪ್‌ ನೆನಪಿನಲ್ಲಿ ಉಳಿಯಬೇಕು ಎಂದು ಸೋನು ಟ್ಯಾಟೂ ಹಾಕಿಸಿದ್ದಾರೆ. 

ಟ್ಯಾಟೂ ಅಂಗಡಿಗೆ ಹೋಗಿ ಕಷ್ಟ ಪಟ್ಟು ಹಿಂದಿ ಮಾತನಾಡಿ ಸ್ಟಾರ್ ಟ್ಯಾಟೂ ಆಯ್ಕೆ ಮಾಡಿಕೊಂಡಿದ್ದಾರೆ. ಟ್ಯಾಟೂ ಹಾಕುವುದನ್ನು ತೋರಿಸಿದ್ದಾರೆ.

ಟೇಬಲ್ ಮೇಲೆ ಕುಳಿತುಕೊಂಡು ಸೋನು ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವುದು ಹೇಗೆ ಎಂದು ಗೊತ್ತಿರದ ವ್ಯಕ್ತಿಗಳು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ.

ಸರಿಯಾಗಿ ಕುಳಿತುಕೊಳ್ಳುವುದನ್ನು ಹೇಳಿ ಕೊಡಬೇಕಾ? ಕಷ್ಟ ಪಟ್ಟು ದುಡಿದು ಜೀವನ ಮಾಡುವ ಆ ಅಮಾಯಕನ ಮುಂದೆ ಕಾಲು ಎತ್ಕೊಂಡು ಕೂತ್ಕೋಬೇಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Latest Videos

click me!