‘ನಂದಗೋಕುಲ’ ಸೀರಿಯಲ್ ನಂದ ಪಾತ್ರದ ಬಗ್ಗೆ ವೀಕ್ಷಕರು ಕಿಡಿ… ಅಪ್ಪನಿಂದಲೇ ಮನೆ ನರಕ ಆಗುತ್ತಾ?

Published : Apr 18, 2026, 11:49 AM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಂದಗೋಕುಲ’ ಧಾರಾವಾಹಿಯಲ್ಲಿ ನಂದನ ಪಾತ್ರವನ್ನು ಜನ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದರು. ಆದರೆ ಈಗ ನಂದ ಮಾಡುತ್ತಿರುವ ಅವಾಂತರ ನೋಡಿ, ನಂದಗೋಕುಲವಾಗಬೇಕಾಗಿದ್ದ ಮನೆ, ನಂದನಿಂದಲೇ ನರಕ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ. 

PREV
16
ನಂದಗೋಕುಲ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ನಂದಗೋಕುಲ’. ತುಂಬು ಸಂಸಾರದ ಕಥೆಯನ್ನು ಹೊಂದಿರುವ ಈ ಧಾರಾವಾಹಿಯಲ್ಲಿ, ನಂದ ಹಾಗೂ ಪತ್ನಿ ಗಿರಿಜಾ ಹಾಗೂ ಮಕ್ಕಳ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವ ಕಥೆಯನ್ನು ಇದು ಹೊಂದಿದೆ.

26
ಬೆಸ್ಟ್ ಅಪ್ಪ ಆಗಿದ್ದ ನಂದ

ನಂದಗೋಕುಲ ಕುಟುಂಬದ ಆಧಾರ ಸ್ಥಂಭವಾಗಿದ್ದ ನಂದ, ಆರಂಭದಲ್ಲಿ ಬೆಸ್ಟ್ ಅಪ್ಪ ಎನಿಸಿಕೊಂಡಿದ್ದರು. ತುಂಬಾನೆ ಸ್ಟ್ರಿಕ್ಟ್ ಆದರೂ ಮಕ್ಕಳ ಒಳ್ಳೆಯದನ್ನೇ ಬಯಸುವ, ಮಕ್ಕಳನ್ನು ಸರಿ ದಾರಿಯಲ್ಲಿ ಸಾಗಿಸಲು, ಯಾರ ಮುಂದೆಯೂ ತಲೆತಗ್ಗಿಸಬಾರದು ಅನ್ನೋದು ನಂದನ ಆಸೆ.

36
ನಂದಕುಮಾರ್ ವಿರುದ್ಧ ವೀಕ್ಷಕರ ಕಿಡಿ

ಆದರೆ ಇದೀಗ ನಂದ ಕುಮಾರ್ ಮಾಡುತ್ತಿರುವ ಕೆಲಸ, ಅವರು ತೆಗೆದುಕೊಳ್ಳುವ ನಿರ್ಧಾರ, ಕೇಶವ ಮತ್ತು ವಲ್ಲಭನಿಗೆ ಎಲ್ಲಾದಕ್ಕೂ ಗದರಿಸುವ ರೀತಿ ನೋಡಿ, ಇದೀಗ ವೀಕ್ಷಕರು ನಂದ ಕುಮಾರ್ ವಿರುದ್ಧ ಕಿರಿ ಕಾರಿದ್ದಾರೆ. ಹೀಗೆ ಹೋದರೆ ಮನೆ ನರಕ ಆಗೋದು ಗ್ಯಾರಂಟಿ ಎಂದಿದ್ದಾರೆ.

46
ಅಷ್ಟಕ್ಕೂ ಧಾರಾವಾಹಿಯಲ್ಲಿ ಆಗುತ್ತಿರೋದು ಏನು?

ಒಂದು ಕಡೆ ಕೇಶವ ಅಪ್ಪ ಹೇಳಿದ ಕೆಲಸವನ್ನು ಎಲ್ಲಾ ಮಾಡಿಕೊಂಡು ಬರುತ್ತಿದ್ದರೂ, ಆತ ಪದೇ ಪದೇ ಕೆಲವು ಕೆಲಸಗಳನ್ನು ಮರೆಯುತ್ತಿರುವುದರಿಂದಾಗಿ, ನಿನ್ನನ್ನು ನಂಬಿ ಕೆಲಸ ಮಾಡಿದ್ರೆ, ಬೀದಿಯಲ್ಲಿ ನಿಲ್ಲಬೇಕಾಗಿ ಬರಬಹುದು ಎಂದು ಹೇಳಿದ್ದು, ಕೇಶವನ ಮನಸ್ಸಿಗೆ ನೋವಾಗಿತ್ತು.

56
ಅಮ್ಮು ಟ್ಯೂಶನ್ ಪ್ಲ್ಯಾನ್ ಗೂ ಫುಲ್ ಸ್ಟಾಪ್

ಈಗಾಗಲೇ ಅಮ್ಮು ಟ್ಯೂಷನ್ ಕೊಡುವ ಹಾಗಿಲ್ಲ ಎಂದು ನಂದಕುಮಾರ್ ಹೇಳಿದ್ದರು, ಇದೀಗ ಮತ್ತೆ ಬೇರೆ ಮನೆಗಳಿಗೆ ಹೋಗಿ ಅಮೂಲ್ಯ ಟ್ಯೂಷನ್ ಕೊಡುತ್ತಿದ್ದಾರೆ ಅನ್ನೋದನ್ನು ಪ್ರಿಯಾ ಹೇಳಿದ ಮೇಲೆ ಮತ್ತೆ ಅಮೂಲ್ಯ ಮತ್ತು ಪ್ರಿಯಾ ಮೇಲೆ ಕಿಡಿ ಕಾರಿದ್ದಾರೆ ನಂದಕುಮಾರ್.

66
ಹೀಗೆ ಆದ್ರೆ ಮನೆ ಉದ್ದಾರ ಎಂದ ಜನ

ಇದೀಗ ನಂದನ ಮನೆಯ ಅವಾಂತರ, ನಂದ ಕುಮಾರ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಇವನೊಬ್ಬ ತಲೆ ಕೆಟ್ಟ ಮಾವ, ಮನೆ ಹಾಳು ಸೊಸೆ ಮಾತು ಕೇಳಿ ಕೂಗಾಡ್ತಾನೆ. ನಂದನ ಕನಸು ನಂದಗೋಕುಲ . ಆದರೆ ಇಲ್ಲಿ ಎಲ್ಲಾ ಅವನೇ ಹಾಳ್ ಮಾಡ್ಕೊತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories