ನಮೃತಾ ಗೌಡ ಸದ್ಯ ಕನ್ನಡ ಕಿರುತೆರೆಯ ಜನಪ್ರಿಯ ನಾಯಕಿ. ಆದರೆ ಇವರು ನೇರವಾಗಿ ನಾಯಕಿಯಾಗಿ ಎಂತ್ರಿ ಕೊಟ್ಟವರು ಅಲ್ಲ. ನಾಯಕಿಯಾಗೋದಕ್ಕೂ ಮುನ್ನ ಒಂದು ಧಾರಾವಾಹಿಯಲ್ಲಿ ಕೆಲಸದವಳಾಗಿ ನಟಿಸಿದ್ದರಂತೆ ನಮೃತಾ ಗೌಡ.
ಸದ್ಯ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಆಗಿ ಮಿಂಚುತ್ತಿರುವ ನಟಿ ನಮೃತಾ ಗೌಡ, ನೇರವಾಗಿ ನಾಯಕಿಯಾಗಿ ಸೀರಿಯಲ್ ಗೆ ಎಂಟ್ರಿ ಕೊಟ್ಟವರು ಅಲ್ಲ. ಬದಲಾಗಿ ಅವರು ಬಾಲ ನಟಿಯಾಗಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ಪೋಷಕ ಪಾತ್ರದಲ್ಲೂ ನಟಿಸಿದ ನಮೃತಾ ‘ಪುಟ್ಟ ಗೌರಿಯ ಮದುವೆ’ಯಲ್ಲಿ ಎರಡನೇ ನಾಯಕಿಯಾಗಿ ಭಡ್ತಿ ಪಡೆದರು.
26
ನಮೃತಾ ಗೌಡ ನಟಿಸಿದ ಧಾರಾವಾಹಿಗಳು
ಇನ್ನು ನಮೃತಾ ಗೌಡ ನಾಯಕಿಯಾಗಿ ನಟಿಸಿದ ಮೊದಲ ಧಾರಾವಾಹಿ ಎಂದರೆ ಅದು ‘ನಾಗಿಣಿ 2’. ಈ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇದೀಗ ಕರ್ಣ ಧಾರಾವಾಹಿಯಲ್ಲಿ ನಮೃತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ ಆರಂಭದಲ್ಲಿ ನಮೃತಾ ಕೆಲಸದವಳ ಪಾತ್ರದಲ್ಲೂ ನಟಿಸಿದ್ದರು ಅನ್ನೋದು ನಿಮಗೆ ಗೊತ್ತಾ? ಈ ಬಗ್ಗೆ ಮೋಜೊ ಕನ್ನಡದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಮೃತಾ ಗೌಡ ಮಾಹಿತಿಯನ್ನು ತಿಳಿಸಿದ್ದಾರೆ.
36
ಬಾಲನಟಿಯಾಗಿ ಜನಪ್ರಿಯತೆ ಪಡೆದಿದ್ದ ನಮ್ಮು
ಬಾಲ ನಟಿಯಾಗಿ ಗುರುತಿಸಿಕೊಂಡಿದ್ದ ನಮೃತ ಗೌಡ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಮಯದಲ್ಲಿ ನಟನೆಯಿಂದ ಬ್ರೇಕ್ ತೆಗೆದುಕೊಂಡು, ಸಂಪೂರ್ಣವಾಗಿ ವಿದ್ಯಾಭ್ಯಾಸದತ್ತ ತೊಡಗಿಸಿಕೊಂಡಿದ್ದರು. ಹತ್ತನೇ ತರಗತಿ ಹಾಗೂ ಪಿಯುಸಿ ಜೀವನದ ಮುಖ್ಯಘಟ್ಟವಾಗಿರುವ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದನ್ನು ತಡೆಯಲು ನಮೃತ ನಟನೆಯಿಂದ ದೂರ ಸರಿದಿದ್ದರು. ಪಿಯುಸಿ ಬಳಿಕ ನಮೃತಾ ಗೌಡಗೆ ಹಲವು ಆಫರ್ ಗಳು ಬರಲು ಶುರುವಾಗಿತ್ತಂತೆ.
ಬಾಲನಟಿಯಾಗಿ ನಟಿಸಿದ್ದ ಕಾರಣ ನಮೃತಾ ಬಗ್ಗೆ ತಿಳಿದಿರುವವರೇ ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಲು ಆಫರ್ ನೀಡಿದ್ದರಂತೆ .ಪಿಯುಸಿ ಬಳಿಕ ಮೊದಲ ಬಾರಿ ನಮೃತಾ ಗೌಡ ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಂಡದ್ದು ಕೆಲಸದವಳ ಪಾತ್ರದಲ್ಲಿ. ಹೌದು ಧಾರವಾಹಿಯೊಂದರಲ್ಲಿ ಸಣ್ಣ ಪಾತ್ರದಲ್ಲಿ ಅಂದರೆ ಕೆಲಸದವಳ ಪಾತ್ರದ ಮೂಲಕ ತಮ್ಮ ಸೀರಿಯಲ್ ಕರಿಯರ್ ಮತ್ತೆ ಆರಂಭಿಸಿದ್ದರು ನಮೃತಾ. ಇದರ ಜೊತೆಗೆ ಮತ್ತೊಂದು ದಾರವಾಹಿಯಲ್ಲಿ ತಂಗಿಯ ಪಾತ್ರದಲ್ಲೂ ನಟಿಸಿದ್ದರು. ಒಂದೇ ಬಾರಿ ಮೂರು ಧಾರವಾಹಿಗಳಲ್ಲಿ ನಟಿಸಿದ್ದರಂತೆ. ಎಲ್ಲವೂ ಸೈಡ್ ಪಾತ್ರಗಳು ಆಗಿದ್ದವು.
56
ಕಬ್ಬಿಣದ ಕಡಲೆಯದ ಇಂಜಿನಿಯರಿಂಗ್
ಇನ್ನು ಪಿಯುಸಿ ಬಳಿಕ ನಮೃತಾ ಬಿಇ ಆರ್ಕಿಟೆಕ್ಟ್ ಕೋರ್ಸ್ ತೆಗೆದುಕೊಂಡಿದ್ದರು. ಆರ್ಕಿಟೆಕ್ಚರ್ ತುಂಬಾನೇ ಸುಲಭವಾಗಿರುತ್ತದೆ.ಫ್ಯಾಷನ್ ಡಿಸೈನಿಂಗ್ ನಷ್ಟೇ ಸುಲಭವಾಗಿ ಕಲಿಯಬಹುದು ಎಂದು ಅಂದುಕೊಂಡಿದ್ದ ನಮೃತಾ ಗೌಡಗೆ, ಕೋರ್ಸ್ ಐದು ವರ್ಷ ಇದೆ. ಇದಕ್ಕೆ ಮ್ಯಾತ್ಸ್ , ಫಿಜಿಕ್ಸ್ ಎಲ್ಲವನ್ನು ಕಲಿಯಬೇಕು ಎಂದು ಗೊತ್ತಾದಾಗ ಶಾಕ್ ಆಗಿತ್ತಂತೆ . ಬಳಿಕ ನಮೃತಾ ಕಷ್ಟಪಟ್ಟು ಕಲಿತು ಜಸ್ಟ್ ಪಾಸ್ ಆಗಿದ್ದು ಇದೆ, ಕೆಲವು ಪರೀಕ್ಷೆಗಳಲ್ಲಿ ಫೇಲಾಗಿ ನಂತರ ಪರೀಕ್ಷೆ ಬರೆದು ಪಾಸಾಗಿದ್ದು ಇದೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಗಣಿತವನ್ನೇ ಇಷ್ಟಪಡದ ನಮೃತಾ ಗೌಡಗೆ ಆರ್ಕಿಟೆಕ್ಚರ್ ಕೋರ್ಸ್ ಕಬ್ಬಿಣದ ಕಡಲೆಯಂತಾಗಿತ್ತು. ಆದರೆ ಅಪ್ಪ-ಅಮ್ಮನಿಗೋಸ್ಕರ ಕಷ್ಟಪಟ್ಟು ಓದಿ ಪಾಸ್ ಆಗಿದ್ದರಂತೆ ನಮ್ಮು.
66
ವಿದ್ಯಾರ್ಥಿಗಳಿಗೆ ನಮೃತಾ ಗೌಡ ಸಲಹೆ
ಕಷ್ಟ ಪಟ್ಟು ಇಂಜಿನಿಯರಿಂಗ್ ಮಾಡಿದ ನಮೃತಾ ಅವತ್ತೆ ನಾನು ಏನೇ ಆದ್ರೂ ಆರ್ಕಿಟೆಕ್ಟ್ ಆಗೋದಿಲ್ಲ, 9-5 ಕೆಲಸ ಮಾಡೋದಿಲ್ಲ ಎಂದು ನಿರ್ಧರಿಸಿದ್ದಂತೆ. ಅದೇ ರೀತಿ ಆರ್ಕಿಟೆಕ್ಟ್ ಮಾಡುವವರಿಗೆ ನಟಿ, ನೀವು ಆರ್ಕಿಟೆಕ್ಟ್ ಮೇಲೆ ಗಮನ ಹರಿಸುವುದಾದರೆ ಮಾತ್ರ ಆ ಕೋರ್ಸ್ ತೆಗೆದುಕೊಳ್ಳಿ, ಇಲ್ಲವಾದರೆ ಕೋರ್ಸ್ ಮಾಡಬೇಡಿ ಎಂದಿದ್ದಾರೆ. ಹಾಗಾಗಿಯೇ ನಂತರದ ದಿನಗಳಲ್ಲಿ ನಮ್ರತಾ ಗೌಡ ಪೂರ್ತಿಯಾಗಿ ನಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.