ವಿಲನ್ ಕಾವೇರಿಯನ್ನ ಹೀರೋಯಿನ್ ಮಾಡಿದ ಸೀರಿಯಲ್…ನಮ್ಮ ತಾಳ್ಮೆಗೂ ಒಂದು ಇತಿ ಮಿತಿ ಇದೆ ಎಂದು ಕಿಡಿಕಾರಿದ ಜನ!

First Published | Nov 27, 2024, 4:52 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದು, ಕೊಲೆಗಾರ್ತಿ ಕಾವೇರಿಯನ್ನು ಹೀರೋಯಿನ್ ಮಾಡುತ್ತಿರುವ ಸೀರಿಯಲ್ ಗೆ ಧಿಕ್ಕಾರ ಕೂಗುತ್ತಿದ್ದಾರೆ ಜನ. 
 

ಕಲರ್ಸ್ ಕನ್ನಡದಲ್ಲಿ (Colors Kannada)ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ, ದಿನಕ್ಕೊಂದು ತಿರುವು ಸಿಗುತ್ತಿದೆ. ಆದರೂ ಜನ ಸೀರಿಯಲ್ ವಿರುದ್ಧ ತಿರುಗಿ ಬಿದ್ಧಿದ್ದಾರೆ. ಯಾಕಂದ್ರೆ, ಎಷ್ಟೇ ತಿರುವು ಸಿಕ್ಕಿದ್ರೂ ಕೂಡ ಕಥೆಯಲ್ಲಿ ಏನೂ ಬದಲಾವಣೇನೆ ಇಲ್ಲ ಕಾವೇರಿ ಆಟ ನಿಲ್ಲಲ್ಲ, ವೈಷ್ಣವ್ ಬದಲಾಗಲ್ಲ. 
 

ಸೀರಿಯಲ್ ಆರಂಭವಾದಾಗಿನಿಂದ ಕಾವೇರಿ ಒಂದಲ್ಲ ಒಂದು ವಿಷ್ಯದಲ್ಲಿ ಮನೆಯವರೆದುದು ನಾಟಕವಾಡುತ್ತಾ ಬಂದಿದ್ದಾಳೆ. ಆದರೆ ಇಲ್ಲಿವರೆಗೂ ಸಿಕ್ಕಿ ಬಿದ್ದೇ ಇಲ್ಲ. ಮೊಸದ ಮೇಲೆ ಮೋಸ, ಕೊಲೆ ಮೇಲೆ ಕೊಲೆ ಮಾಡಿದ್ರೂ ಸಹ ಕಾವೇರಿ ಆಟ ಬಯಲಾಗೋ ಚಾನ್ಸೇ ಇಲ್ಲ ಎನ್ನುವಂತೆ, ಕಾವೇರಿಗೆ ಜಯ ಸಿಕ್ಕುತ್ತಾ ಸಾಗಿದೆ. ಇದರಿಂದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. 
 

Tap to resize

ಸದ್ಯ ಬಿಡುಗಡೆಯಾದ ಪ್ರೊಮೋದಲ್ಲಿ ಕಾವೇರಿ ಜೈಲಿನಲ್ಲಿದ್ರೂ ಸಹ ತನ್ನ ತಪ್ಪನ್ನ ಒಪ್ಪಿಕೊಳ್ತಾ ಇಲ್ಲ, ಅಷ್ಟೇ ಯಾಕೆ ವೈಷ್ಣವ್ ತನ್ನ ಮೇಲೆ ಆಣೆ ಹಾಕಿಸಿ, ಸತ್ಯ ಹೇಳುವಂತೆ ಹೇಳಿದ್ರೂ ಸಹ ಕಾವೇರಿ ಯಾವುದೇ ಪಶ್ಚಾತ್ತಾಪ ಇಲ್ಲದೆ ಸುಳ್ಳನ್ನೇ ಹೇಳ್ತಿದ್ದಾಳೆ. ಅಷ್ಟೇ ಅಲ್ಲ ಎಲ್ಲಾ ತಪ್ಪಿಗೂ ಕೀರ್ತಿ ಕಾರಣ ಅಂತಿದ್ದಾಳೆ. ನನ್ನನ್ನು ನಿನ್ನನ್ನು ದೂರ ಮಾಡೋದಕ್ಕೆ ಕೀರ್ತಿ ಈವಾಗ ಬಂದು ಕಥೆ ಹೇಳ್ತಿದ್ದಾಳೆ ಎಂದು ವೈಷ್ಣವ್ ಗೆ ಹೇಳ್ತಿದ್ದಾಳೆ ಕಾವೇರಿ. 
 

ಕಾವೇರಿಯ ಮುದ್ದು ಪೆದ್ದು ಮಗ ವೈಷ್ಣವ್ ಅಮ್ಮ ಹೇಳಿದ್ದನ್ನೆಲ್ಲಾ ನಂಬಿ, ಹೌದು ಇದು ಕೀರ್ತಿಯದ್ದೆ ಆಟ, ನಿನ್ನನ್ನು ಹೇಗಾದ್ರೂ ಮಾಡಿ ನಾನು ಜೈಲಿನಿಂದ ಹೊರಗೆ ತರ್ತೀನಿ ಎನ್ನುತ್ತಾ, ಕೀರ್ತಿ ಮನೆಗೆ ಹೋಗಿ, ಅಲ್ಲಿ ಅವಳನ್ನ ಪ್ರಶ್ನೆ ಮಾಡೋಕ್ಕೆ ನಿಂತಿದ್ದಾನೆ ವೈಷ್ಣವ್. ಇದನ್ನೆಲ್ಲಾ ನೋಡಿ ವೀಕ್ಷಕರು ಇನ್ನು ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಎಲ್ಲಾದಕ್ಕೂ ಇತಿ ಮಿತಿ ಇದೆ ಎಂದಿದ್ದಾರೆ. 
 

ಯಪ್ಪಾ ದೇವರೇ ...ಈ ಸೀರಿಯಲ್ ನೋಡಿದ್ರೆ ಪಕ್ಕ ನಾವೇ ಹುಚ್ಚರು ಆಗ್ತೀವಿ. ಈ ಕಾವೇರಿ ಡ್ರಾಮಾ ಒಂದೊಂದಲ್ಲ...ಪುಟ್ಟ ಪುಟ್ಟ ಅಂದೆ ಅವನ ಲೈಫ್ ಹಾಳ್ ಮಾಡ್ತಿದಾಳೆ ಕರ್ಮ ಎಂದು ಹೇಳ್ತಿದ್ದಾರೆ ಜನ. ಅಷ್ಟೇ ಅಲ್ಲ ಈ ವೈಷ್ಣವ್ ಗೆ ಅಮ್ಮ ಎಷ್ಟೇ ಕುತಂತ್ರ ಮಾಡಿದ್ರೂ ಗೊತ್ತಾಗೋದಿಲ್ಲ, ಎಲ್ಲಾ ಸಾಕ್ಷಿ ಕಣ್ಣೆದುರೇ ಇದ್ದರೂ ಸಹ ಅದನ್ನ ಅರ್ಥ ಮಾಡಿಕೊಳ್ಳೋದೆ ಇಲ್ಲ. ಇವರು ನಾಯಕ ಆಗೋಕೆ ಲಾಯಕ್ಕಿಲ್ಲ ಎಂದಿದ್ದಾರೆ. 
 

ಇನ್ನೋ ಒಬ್ಬರು ಕಾಮೆಂಟ್ ಮಾಡಿ ಈ ಧಾರಾವಾಹಿಯಲ್ಲಿ ಲಾಜಿಕ್, ಸ್ಕ್ರೀನ್ ಪ್ಲೇ ಅಲ್ಲಿ ಮಂಗಳಗೌರಿ ರಾಮ್ ಜಿ ಸೀರಿಯಲ್ ಗಳನ್ನೇ ಮೀರಿಸೋ ಹಾಗೆ ಕಾಣಿಸ್ತಿದೆ. ಬರೀ ಟಿ ಆರ್ ಪಿ ಒಂದೇ ಮುಖ್ಯವಲ್ಲ. ನಿಮ್ಮ ಹುಚ್ಚು ಚಿತ್ರಕತೆಯಿಂದ ಸೀರಿಯಲ್ ಗೆ ಇದ್ದ ಘನತೆ ಹಾಳಾಗುತ್ತಿದೆ, ಎಂದಿದ್ದಾರೆ. 
 

ಮತ್ತೊಬ್ಬರು  ಅತ್ಯಂತ ಕೆಟ್ಟ ಸೀರಿಯಲ್ ಇದೇ ಅನ್ಸತ್ತೆ. ನಿರ್ದೇಶಕರಿಗೆ (director) ಹೊಡಿಬೇಕು. ಕತೆ ಬರೆಯೋಕೆ ಬರಲ್ಲ ಅಂದ್ರೆ ಮುಗಿಸಿ ಹೋಗ್ಬೇಕು.  ಅದನ್ನ ಬಿಟ್ಟು.. ಕಾವೇರಿ ನಾ ಹೀರೋಯಿನ್ ಮಾಡೋಕೆ ಹೊರಟಿದ್ದಾನೆ. ಸುಮ್ಮನೆ ಪ್ರತಿದಿನ ಅರ್ಧ ಗಂಟೆ ಸಮಯ ನಾ ಹಾಳು ಮಾಡ್ತಿದ್ದಾನೆ.  ವೈಷ್ಣವ್ ಮಾತ್ರ ದಂಡ ಪಿಂಡ ಅವನಿಂದ ಏನೂ ಆಗಲ್ಲ ಅಂತ ಕಿಡಿ ಕಾರಿದ್ದಾರೆ. 
 

Latest Videos

click me!