ಲಕ್ಷ್ಮೀ ನಿವಾಸದ ಹಿರಿಯಜ್ಜಿ ಲಕ್ಷ್ಮೀ ದೇವಿಯವರ ಮೊಮ್ಮಗಳೂ ನಟಿಯೇ?

First Published | Jul 11, 2024, 5:34 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯ ಹಿರಿಯಜ್ಜಿಯಾಗಿ ನಟಿಸುತ್ತಿರುವ ಲಕ್ಷ್ಮೀ ದೇವಿಯವರ ಮೊಮ್ಮಗಳು ಕೂಡ ನಟಿ ಅನ್ನೋದು ನಿಮಗೆ ಗೊತ್ತಾ? 
 

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಮನೆಯ ಹಿರಿಯ ಅಜ್ಜಿಯಗಾಗಿ, ಶ್ರೀನಿವಾಸರ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟಿ ಲಕ್ಷ್ಮೀದೇವಿ ಯಾರಿಗೆ ತಾನೆ ಗೊತ್ತಿಲ್ಲ. 
 

ಮೈಸೂರು ನರಸಿಂಹಾಚಾರ್ ಲಕ್ಷ್ಮೀ ದೇವಿ ಅವರು ಎಂ ಎನ್ ಲಕ್ಷ್ಮೀ ದೇವಿ  (M N Lakshmi Devi) ಎಂದೇ ಪರಿಚಿತರು. ಬರೋಬ್ಬರಿ 7 ದಶಕಗಳಿಂದ ಚಿತ್ರರಂಗದಲ್ಲಿರುವ ಇವರು ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಾಸಿಟಿವ್, ನೆಗೆಟೀವ್ ಶೇಡ್ ಗಳಲ್ಲಿ ನಟಿಸಿ ಅದ್ಭುತ ನಟಿ ಎನಿಸಿಕೊಂಡಿದ್ದಾರೆ.
 

Tap to resize

ಕನ್ನಡ ಚಿತ್ರರಂಗದಲ್ಲಿ 72 ವರ್ಷಗಳ ಕಾಲ ನಟಿಸಿರುವ ಏಕೈಕ ನಟಿ ಎಂದರೆ ಅದು ಎಂ ಎನ್ ಲಕ್ಷ್ಮೀದೇವಿ. ಈಗ ಅವರು 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಯಸ್ಸು 90 ದಾಟಿದರೂ ಇಂದಿಗೂ ಲವಲವಿಕೆಯಿಂದ ಅದ್ಭುತವಾಗಿ ನಟಿಸುತ್ತಾ ಬಂದಿದ್ದಾರೆ .
 

ಲಕ್ಷ್ಮೀ ದೇವಿಯವರ ಮೊಮ್ಮಗಳು ಸಹ ಕನ್ನಡ ಕಿರುತೆರೆಯಲ್ಲಿ ದಶಕಗಳಿಂದ ನಟಿಸಿಕೊಂಡು ಬಂದಿರುವ ಜನಪ್ರಿಯ ನಟಿ ಅನ್ನೋದು ನಿಮಗೆ ಗೊತ್ತಾ? ಇವರ ಮೊಮ್ಮಗಳು ಬೇರಾರು ಅಲ್ಲ ದೀಪಿಕಾ ಶರಣ್ (Deepika Sharan). 
 

ಗೌರಿ ಪುರದ ಗಯ್ಯಾಳಿಗಳು, ನೇತ್ರಾವತಿ, ಯಾರೇ ನೀ ಮೋಹಿನಿ ಸೇರಿ ಹತ್ತು ಹಲವು ಸೀರಿಯಲ್ ಗಳಲ್ಲಿ ದೀಪಿಕಾ ನಟಿಸಿದ್ದಾರೆ. ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಪುರದ ಗಯ್ಯಾಳಿಗಳು ಸೀರಿಯಲ್ ನಲ್ಲಿ ಮೂರು ವರ್ಷಗಳಿಂದ ನಟಿಸುತ್ತಿದ್ದಾರೆ. 

ಭಾರತೀಯ ಸೇನೆ (Indian Army) ಸೇರಬೇಕು ಎಂದುಕೊಂಡಿದ್ದ ದೀಪಿಕಾ ಶರಣ್ ಅವರು ಡಿಗ್ರಿ ಮುಗಿದ ನಂತರದಲ್ಲಿ ಅಜ್ಜಿಯಂತೆ ನಟನೆಯಲ್ಲಿ ತೊಡಗಿಸಿಕೊಂಡರು. ಅಜ್ಜಿಯಿಂದ ನಟನೆ, ತಾಂತ್ರಿಕ ವಿಷಯಗಳನ್ನು ಕಲಿತ ದೀಪಿಕಾ ಅವರು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ಪಾಸಿಟಿವ್, ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
 

ಕಳೆದ ವರ್ಷ ಹೃದಯಾಘತದಿಂದ ಇವರ ಪತಿ ಶರಣ್ ನಿಧನರಾಗಿದ್ದರು. ಇವರಿಗೊಬ್ಬ ಮುದ್ದಾದ ಮಗ ಇದ್ದಾನೆ. ಸದ್ಯ ಸಿಂಗಲ್ ಪೇರೆಂಟ್ (Single Parent) ಆಗಿದ್ದುಕೊಂಡು ಮಗನನ್ನು ನೋಡಿಕೊಳ್ಳುತ್ತಿದ್ದಾರೆ, ಜೊತೆಗೆ ಅಜ್ಜಿ ಲಕ್ಷ್ಮೀ ದೇವಿಯನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. 
 

Latest Videos

click me!