ಕುಟುಂಬದ ಜೊತೆ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ ಹಿಟ್ಲರ್ ಕಲ್ಯಾಣ ನಟಿ

Published : Jul 11, 2024, 05:20 PM IST

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರಾ ಆಗಿ ಜನಮನ ಗೆದ್ದ ನಟಿ ರಜಿನಿ ಇದೀಗ ತಮ್ಮ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಬಂದಿದ್ದಾರೆ.   

PREV
17
ಕುಟುಂಬದ ಜೊತೆ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ ಹಿಟ್ಲರ್ ಕಲ್ಯಾಣ ನಟಿ

ಅಮೃತ ವರ್ಷಿಣಿ ಧಾರಾವಾಹಿ ಮೂಲಕ ಕರ್ನಾಟಕದಾದ್ಯಂತ ಅಮೃತ ಆಗಿ ಮಿಂಚಿದ ನಟಿ ರಜಿನಿ (Rajini). ಆ ಸೀರಿಯಲ್ ಮುಗಿದು 12 ವರ್ಷಗಳಾದರೂ ಇಂದಿಗೂ ಜನರು ರಜಿನಿಯವರನ್ನು ಅಮೃತ ಎಂದೇ ಗುರುತಿಸುತ್ತಾರೆ ಅಂದ್ರೆ, ಅವರ ಅಭಿನಯ ಜನರಿಗೆ ಎಷ್ಟು ಇಷ್ಟವಾಗಿತ್ತು ಅನ್ನೋದು ಗೊತ್ತಾಗುತ್ತೆ. 

27

ಸೀರಿಯಲ್ ಬಳಿಕ ಸಿನಿಮಾದಲ್ಲಿ ನಟಿಸಿದ್ದರು ನಟಿ ಆದ ಸಿನಿಮಾ ಅಷ್ಟಾಗಿ ಇವರಿಗೆ ಅದೃಷ್ತ ತಂದು ಕೊಡಲಿಲ್ಲ. ಹಾಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ನಟಿಸಿದರು. ಮತ್ತೆ ಇವರಿಗೆ ಹೆಸರು ತಂದುಕೊಟ್ಟಿದ್ದು ಅಂದ್ರೆ ಝೀ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಅಂತರ ಪಾತ್ರ. ನೆಗೆಟೀವ್ ಶೇಡ್ ನಲ್ಲಿ ನಟಿ ಅದ್ಭುತವಾಗಿ ನಟಿಸಿದ್ದರು. 
 

37

ಇವರು  'ಸ್ಟಾರ್ ಸಿಂಗರ್', 'ಡ್ಯಾನ್ಸಿಂಗ್ ಸ್ಟಾರ್ಸ್', 'ಮಜಾ ಟಾಕೀಸ್', 'ಕುಕ್ಕರಿ ಶೋ'ಗಳಲ್ಲಿ ಮೊದಲಾದ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು, ಜೊತೆಗೆ ಕುಕ್ಕರಿ ಶೋ ಒಂದನ್ನು ಹೋಸ್ಟ್ ಕೂಡ ಮಾಡಿದ್ದರು. 
 

47

ತುಮಕೂರು ಮೂಲದ ರಜಿನಿ ನಟಿ ಮಾತ್ರ ಅಲ್ಲ ಇವರು ಭರತನಾಟ್ಯ ಹಾಗೂ ವೆಸ್ಟರ್ನ್ ಡ್ಯಾನ್ಸ್ ಕೂಡ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಹೆಚ್ಚಾಗಿ ಹಾಡುಗಳಿಗೆ ಡ್ಯಾನ್ಸ್ ಮಾಡ್ತಾ, ರೀಲ್ಸ್ ಶೇರ್ ಮಾಡುತ್ತಲಿರುತ್ತಾರೆ. ಜೊತೆಗೆ ತಮ್ಮ ಫಿಟ್ನೆಸ್ ವಿಡಿಯೋ, ಕಾಮಿಡಿ ವಿಡಿಯೋಗಳನ್ನು ಹಂಚುತ್ತಿರುತ್ತಾರೆ. 
 

57

ಸಿನಿಮಾ, ಸೀರಿಯಲ್ ಗಳಲಿ ಬ್ಯುಸಿಯಾಗಿರುವ ನಟಿ ಸದ್ಯ ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟು ತಮ್ಮ ಫ್ಯಾಮಿಲಿ ಜೊತೆಗೆ ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ಬಂದಿದ್ದಾರೆ. 
 

67

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಜೊತೆಗೆ ದೇಗುಲಗಳ ಮುಂದೆ ನಿಂತಿರುವ, ಅನ್ನಪ್ರಸಾದ ಹಾಗೂ ಪ್ರಕೃತಿ ಸೌಂದರ್ಯದ ಫೋಟೊ, ವಿಡಿಯೋ ಹಂಚಿಕೊಂಡಿರುವ ನಟಿ ರಜಿನಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗು ಕುಕ್ಕೆ ಶ್ರೀ ಸುಬ್ರಮಣ್ಯ (Kukke Subramanya) ಸ್ವಾಮಿ ಎಲ್ಲರಿಗೂ ಒಳ್ಳೇದನ್ನ ಮಾಡಲಿ ಶುಭ ದಿನ ಎಂದು ಬರೆದು ಕೊಂಡಿದ್ದಾರೆ. 
 

77

ನಟಿಯ ಪೋಸ್ಟ್ ನೋಡಿ, ಮಂಜುನಾಥ ಸ್ವಾಮಿ ನಿಮಗೆ ಒಳ್ಳೆಯದನ್ನೆ ಮಾಡ್ಲಿ ಎಂದು ಹಾರೈಸಿದ್ದಾರೆ. ಸದ್ಯ ನಟಿ ಕಿರುತೆರೆಯಲ್ಲಿ ಭೂಮಿಗೆ ಬಂದ ಭಗವಂತ ಧಾರಾವಾಗಿಯಲ್ಲಿ ದೇವಿಯಾಗಿ ನಟಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories