ಸಿರಿ ಮದುವೆ ಪಾರ್ಟೀಲಿ ಮಿಂಚಿದ ಬಿಗ್ ಬಾಸ್ ಸ್ಪರ್ಧಿಗಳು, ಡ್ರೋನ್ ಪ್ರತಾಪ್, ಸಂಗೀತಾ ಮಿಸ್ ಆಗಿದ್ಯಾಕೆ?

First Published | Jul 11, 2024, 4:29 PM IST

ಬಿಗ್ ಬಾಸ್ ಸ್ಪರ್ಧಿ ಸಿರಿ ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ತಮ್ಮ ಸ್ನೇಹಿತರಿಗೆ ಪಾರ್ಟಿ ನೀಡಿದ್ದು, ಬಿಗ್ ಬಾಸ್ ನ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

ಬಿಗ್ ಬಾಸ್ ಕನ್ನಡ ಸೀಸನ್ 10 ರ (Bigg Boss season 10) ಕಂಟೆಸ್ಟಂಟ್ ಹಾಗೂ ಜನಪ್ರಿಯ ಕಿರುತೆರೆ ನಟಿಯಾಗಿರುವ ಸಿರಿಜಾ ಅವರು ಕಳೆದ ತಿಂಗಳಷ್ಟೇ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
 

ಸಿರಿ ಬ್ಯುಸಿನೆಸ್ ಮೆನ್ ಮತ್ತು ನಟನಾಗಿದ್ದ ಪ್ರಭಾಕರ್ ಜೊತೆ ಜೂನ್ 15 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಗ್ಗೆ ಸುಳಿವೇ ನೀಡದೇ ಸಡನ್ ಆಗಿ ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದರು ನಟಿ. 
 

Tap to resize

ಸಿರಿ -ಪ್ರಭಾಕರ್ ಮದುವೆಯ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುವವರೆಗೆ ಅವರು ಮದುವೆಯಾಗುತ್ತಿರುವ ಸುದ್ದಿ ಗೊತ್ತೆ ಇರಲಿಲ್ಲ. ಬಳಿಕ ನಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿವಾಹದ ಸುದ್ದಿಯನ್ನು ಅಧಿಕೃತಗೊಳಿಸಿದರು.
 

ಸರಳವಾಗಿ ದೇವಸ್ಥಾನದಲ್ಲಿ ಮನೆಮಂದಿ ಮುಂದೆ ಮದುವೆಯಾಗಿದ್ದ ಸಿರಿಗೆ ಅಭಿಮಾನಿಗಳು, ಸ್ನೇಹಿತರು ವೈವಾಹಿಕ ಜೀವನದ ಶುಭ ಕೋರಿದ್ದರು. ಇದೀಗ ಮದುವೆಯಾಗಿ ತಿಂಗಳ ಬಳಿಕ ನಟಿ ತಮ್ಮ ಸ್ನೇಹಿತರಿಗೆ ಮದುವೆಯ ಪಾರ್ಟಿ ನೀಡಿದ್ದಾರೆ. 
 

ಸಿರಿ (Sirija) ನೀಡಿದ ಪಾರ್ಟಿಗೆ ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ ಆಗಮಿಸಿ ವಧು ವರರ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದ್ದರು. ಎಲ್ಲರೂ ಜೊತೆಯಾಗಿ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದರು. 
 

ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್ (Karthik Mahesh), ನಮ್ರತಾ ಗೌಡ, ವಿನಯ್ ಗೌಡ, ಪವಿ ಪೂವಪ್ಪ, ನೀತು ವನಜಾಕ್ಷಿ, ಮೈಕಲ್ ಅಜಯ್, ತನಿಷಾ ಕುಪ್ಪಂಡ, ಇಶಾನಿ ಅಲ್ಲದೇ ಸಂಗೀತಾ ಶೃಂಗೇರಿಯ ಅಣ್ಣ-ಅತ್ತಿಗೆ ಕೂಡ ಭಾಗಿಯಾಗಿದ್ದರು. 
 

ಜೊತೆಯಾಗಿ ಫೋಟೋ ತೆಗೆಸುವ ವೇಳೆ ಕಾರ್ತಿಕ್ ಮತ್ತು ಸಂಗೀತಾ ಸಹೋದರ ಜೊತೆಯಾಗಿ ಭುಜಕ್ಕೆ ಕೈ ಹಾಕಿ ಪೋಸ್ ನೀಡಿದ್ದು, ಸಂಗೀತಾ ಅಭಿಮಾನಿಗಳು ಇದನ್ನ ನೋಡಿ ಖುಷಿಯಾಗಿದ್ದಾರೆ. ಆದರೆ ಸಂಗೀತಾ ಯಾಕೆ ಮಿಸ್ಸಿಂಗ್ ಎಂದು ಪ್ರಶ್ನಿಸಿದ್ದಾರೆ. ಸಂಗೀತಾ ಅಲ್ಲದೇ ಡ್ರೋನ್ ಪ್ರತಾಪ್, ಸ್ನೇಹಿತ್ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಕೂಡ ಮಿಸ್ ಆಗಿದ್ದಾರೆ. 
 

ಇನ್ನು ಹಲವು ಕಲಾವುದರು ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದು, ಈ ವೇಳೆ ಸಿರಿ ಅವರು ಪತಿ ಪ್ರಭಾಕರ್ ಜೊತೆಗೆ ರಾ ರಾ ರುಕಮ್ಮ ಹಾಕಿಗೆ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಸಿರಿ ಮತ್ತು ಪ್ರಭಾಕರ್ ‘ಬದುಕು’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು, ತುಂಬಾ ವರ್ಷದ ಸ್ನೇಹ ಇವರದ್ದು, ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ. 
 

Latest Videos

click me!