ಲವ್‌ ಬ್ರೇಕಪ್‌ ಆಗಿ ವಿವಾದದಲ್ಲಿದ್ದ ವರುಣ್‌ ಬೃಂದಾವನ ಹೊಸ ಹೀರೋ, ಕಮೆಂಟ್‌ ಆಫ್‌ ಮಾಡಿದ ಕಲರ್ಸ್ ಕನ್ನಡ!

First Published | Nov 19, 2023, 12:00 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್‌ ನಲ್ಲಿ ಹೀರೋ ಬದಲಾವಣೆ ಮಾಡಲಾಗಿದ್ದು, ಹೊಸ ಹೀರೋವನ್ನು ಒಪ್ಪಿಕೊಳ್ಳಲು ಕಷ್ಟವೆಂದು ವೀಕ್ಷಕರು ಹೇಳಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವಾಹಿನಿಯು ಕಮೆಂಟ್‌ ಆಫ್‌ ಮಾಡಿ ಪ್ರೋಮೋ ರಿಲೀಸ್‌ ಮಾಡಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ  ದಸರಾ ಸಮಯದಲ್ಲಿ ಆರಂಭವಾದ  ಬೃಂದಾವನ ಸೀರಿಯಲ್ ಜನರ ಮನಗೆದ್ದಿದೆ. ಧಾರಾವಾಹಿ ಇನ್ನು 25 ಎಪಿಸೋಡ್​ಗಳನ್ನು ತಲುಪುತ್ತಿದ್ದಂತೆಯೇ ಸೀರಿಯಲ್ ನಾಯಕನ ಬದಲಾವಣೆ ಮಾಡಲಾಗಿದೆ.

36 ಮಂದಿ ಇರುವ ಬೃಂದಾವನ ಸೀರಿಯಲ್ ನಲ್ಲಿ ಮುದ್ದು ಮನೆಮಗನಾಗಿ ಕಾಣಿಸಿಕೊಂಡಿದ್ದ ಆಕಾಶ್ ಪಾತ್ರಧಾರಿಯನ್ನು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಮಾಜಿ ಬಿಗ್‌ಬಾಸ್‌ ಸ್ಪರ್ಧಿ, ಗಾಯಕ ವಿಶ್ವನಾಥ್ ಹಾವೇರಿ ಅವರು ನಿರ್ವಹಿಸುತ್ತಿದ್ದ ಪಾತ್ರವನ್ನು ಬದಲಾವಣೆ ಮಾಡಲಾಗಿದೆ.


ಸೀರಿಯಲ್‌ ನಲ್ಲಿ ಈಗ ಪುಷ್ಪಾ ಮತ್ತು ಆಕಾಶ್ ಮದುವೆ ಸಂಭ್ರಮ ನಡೆಯುತ್ತಿದ್ದು, ಆಕಾಶ್ ಪಾತ್ರಕ್ಕೆ ವರುಣ್‌ ಆರಾಧ್ಯ ಎಂಬ ಯುವಕನನ್ನು ಹೀರೋ ಆಗಿ ಆಯ್ಕೆ ಮಾಡಲಾಗಿದೆ. ಇದರ ಪ್ರೋಮೋ ಬಿಡುತ್ತಿದ್ದಂತೆ ವೀಕ್ಷಕರು ತರಹೇವಾರಿ ಕಮೆಂಟ್‌ ಹಾಕಿದ್ದು, ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್‌ ಆಫ್ ಮಾಡಿದೆ.

ಇನ್‌ಸ್ಟಾಗ್ರಾಂ ರೀಲ್ಸ್‌ ನೋಡುವ ಪ್ರತಿಯೊಬ್ಬರಿಗೂ ಈ ಹುಡುಗನ ಬಗ್ಗೆ ಗೊತ್ತೇ ಇರುತ್ತೆ. ಹೆಸರು ವರುಣ್ ಆರಾಧ್ಯ. ಈ ಹಿಂದೆ ಲವ್‌ ಬ್ರೇಕಪ್ ಮಾಡಿಕೊಂಡು ಸುದ್ದಿಯಾಗಿದ್ದ ಹುಡುಗ ಈಗ ಸೀರಿಯಲ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ. 
 

ಇತ್ತೀಚೆಗೆ ವರುಣ್‌ ಆರಾಧ್ಯ ಮತ್ತು ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಹುಡುಗಿ ಪರಸ್ಪರ ಬ್ರೇಕ್ ಅಪ್‌ ಮಾಡಿಕೊಂಡು ಸುದ್ದಿಯಾಗಿದ್ದರು. ಒಬ್ಬರು ಇನ್ನೊಬ್ಬರ ಮೇಲೆ ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದರು. 

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಿ, ವಿವಾದದಲ್ಲಿ ಸಿಲುಕಿದ್ದ ವರುಣ್ ಈಗ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ನಟನಾಗಬೇಕೆಂಬ ಆಸೆ ಇಟ್ಟುಕೊಂಡಿದ್ದ ವರುಣ್‌ಗೆ ಈಗ ಒಂದೊಳ್ಳೆ ಚಾನ್ಸ್ ಸಿಕ್ಕಿದೆ.

ಬೃಂದಾವನ ಸೀರಿಯಲ್ ನಲ್ಲಿ ಹಿರೋಯಿನ್‌ ಗೆ ಸರಿಯಾದ ಹೀರೋ ಸೆಲೆಕ್ಷನ್‌ ಆಗಿಲ್ಲ ಎಂಬ ಬಗ್ಗೆ ಟೀಕೆಗಳು ವ್ಯಕ್ತವಾಗಿತ್ತು. ವಿಶ್ವನಾಥ್ ಹಾವೇರಿ ತುಂಬಾ ಕ್ಯೂಟ್‌ ಆಗಿದ್ದರು. ಅವರಿಗೆ ಮದುವೆ ಮಾಡುವುದೆಂದರೆ ಬಾಲ್ಯ ವಿವಾಹ ಎಂದೆಲ್ಲ ಕಮೆಂಟ್‌ ವ್ಯಕ್ತವಾಗಿತ್ತು.
 

ಇದೀಗ ವಿಶ್ವನಾಥ್ ಹಾವೇರಿ ಮಾಡುತ್ತಿದ್ದ ಪಾತ್ರಕ್ಕೆ ವರುಣ್ ಆರಾಧ್ಯ ಸೆಲೆಕ್ಟ್‌ ಆಗಿದ್ದು, ವೀಕ್ಷಕರು ನಾವು ಸೀರಿಯಲ್‌ ನೋಡೋದೆ ಇಲ್ಲ. ಇದಕ್ಕಿಂದ ಮೊದಲಿನ ಹಿರೋನೆ ಚೆನ್ನಾಗಿತ್ತು ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ. 

ರಾಮ್‌ಜಿ ಟಾಕೀಸ್‌ ನಿಂದ ಮೂಡಿಬರುತ್ತಿರುವ ಈ ಸೀರಿಯಲ್‌ ಅಕ್ಟೋಬರ್ 23ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಸದ್ಯ ಈ ಸೀರಿಯಲ್‌ನಲ್ಲಿ ಸುಧಾಮೂರ್ತಿ ಮೊಮ್ಮಗ ಆಕಾಶ್ ಮತ್ತು ಪುಷ್ಪಾ ಮದುವೆ ಸಂಭ್ರಮ ನಡೆಯುತ್ತಿದೆ.

ಹಾಡುಗಾರ ವಿಶ್ವನಾಥ್ ಹಾವೇರಿ ಆಕಾಶ್ ಪಾತ್ರದಲ್ಲಿ ಹಿರೋ ಆಗಿ ಕಾಣಿಸಿಕೊಂಡಿದ್ದರು. ಧಾರವಾಹಿ ಆರಂಭವಾದ ದಿನದಿಂದ ಹಿರೋ ವಯಸ್ಸು ತುಂಬಾ ಚಿಕ್ಕದು. ಹೀರೋಯಿನ್‌ ವಯಸ್ಸು ದೊಡ್ಡದು. ಜೋಡಿಗಳು ಮ್ಯಾಚ್‌ ಆಗಲ್ಲ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಿರೋ ಆಕಾಶ್ ಮತ್ತು ಹಿರೋಯಿನ್‌ ಪುಷ್ಪಾ ಅವರ ಮದುವೆ ಬಾಲ್ಯವಿವಾಹ ಥರ ಅನ್ನಿಸುತ್ತೆ. ಹಿರೋ ತುಂಬಾ ಕ್ಯೂಟ್‌ ಇದ್ದಾನೆ. ಆದರೆ ಹಿರೋಯಿನ್‌ ಗೆ ಹೊಂದುತ್ತಿಲ್ಲ ಎಂದು ವೀಕ್ಷಕರು ಕಾಮೆಂಟ್‌ ಮಾಡಿದ್ದರು. ಇದೀಗ ನಾಯಕನ ಬದಲಾವಣೆಯಾಗಿದೆ.

Latest Videos

click me!