ಜೊತೆಯಾಗಿ ಕಾಣಿಸಿಕೊಂಡ ಅಮೂಲ್ಯ -ವೈಷ್ಣವಿ… ಇವರದ್ದು ನೆವರ್ ಎಂಡಿಂಗ್ ಫ್ರೆಂಡ್’ಶಿಪ್

Published : Aug 21, 2024, 06:34 PM IST

ಸೀತಾ ರಾಮ ಖ್ಯಾತಿಯ ನಟಿ ವೈಷ್ಣವಿ ಗೌಡ ಮತ್ತು ಸ್ಯಾಂಡಲ್ ವುಡ್ ನಟಿ ಅಮೂಲ್ಯ ಇಬ್ಬರು ಹಲವಾರು ವರ್ಷಗಳಿಂದ ಸ್ನೇಹಿತರು ಅನ್ನೋದು ಗೊತ್ತೇ ಇದೆ. ಇದೀಗ ಇಬ್ಬರು ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.   

PREV
17
ಜೊತೆಯಾಗಿ ಕಾಣಿಸಿಕೊಂಡ ಅಮೂಲ್ಯ -ವೈಷ್ಣವಿ… ಇವರದ್ದು ನೆವರ್ ಎಂಡಿಂಗ್ ಫ್ರೆಂಡ್’ಶಿಪ್

ಇಬ್ಬರು ನಟಿಯರು ಬೆಸ್ಟ್ ಫ್ರೆಂಡ್ ಆಗೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋದನ್ನ ನಾವು ಕೇಳುತ್ತಲೇ ಬಂದಿದ್ದೇವೆ. ಇದನ್ನ ಸುಳ್ಳು ಅಂತಾನೂ ಹೇಳೋದಕ್ಕೆ ಸಾಧ್ಯವಿಲ್ಲ, ಯಾಕಂದ್ರೆ ಹೆಚ್ಚಿನ ನಟಿಯರು ಒಂದೆರಡು ವರ್ಷ ಸ್ನೇಹಿತರಾಗಿದ್ರೆ ಅದೇ ಹೆಚ್ಚು. ಆದ್ರೆ ಕನ್ನಡದ ಈ ನಟಿಯರದ್ದು ಮಾತ್ರ ದಶಕಗಳ ಪ್ರೆಂಡ್ ಶಿಪ್ (friendship). 
 

27

ಹೌದು ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ (Vaishnavi Gowda) ಮತ್ತು ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಇನ್ನೂ ಇಬ್ಬರು, ಪಿಯುಸಿ ಕಲಿಯುತ್ತಿರುವಾಗಲೇ ಫ್ರೆಂಡ್ಸ್. ಇಂದಿಗೂ ಇವರ ಸ್ನೇಹ ಮುಂದುವರೆದುಕೊಂಡು ಬಂದಿದೆ. 
 

37

ವೈಷ್ಣವಿ ಗೌಡ ಮತ್ತು ಅಮೂಲ್ಯ (Amulya) ಹಾಗೂ ಮತ್ತಿಬ್ಬರು ಕಳೆದ 14 ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್. ಕಾಲೇಜಿನಿಂದ ಆರಂಭವಾದ ಇವರ ಫ್ರೆಂಡ್‌ಶಿಪ್ ಇಂದಿಗೂ ಮುಂದುವರೆದಿದ್ದು,  ಈ ನಾಲ್ವರು ಜನ ಫ್ರೀ ಟೈಮ್ ಸಿಕ್ಕಾಗಲೆಲ್ಲಾ ಟ್ರಾವೆಲ್ ಮಾಡ್ತಾ, ಫ್ಯಾಮಿಲಿ ಮೀಟ್ ಅಪ್ ಮಡ್ತಾ ಹೆಚ್ಚಾಗಿ ಜೊತೆಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. 
 

47

ಇದೀಗ ವೈಷ್ಣವಿ ಮತ್ತು ಅಮೂಲ್ಯ ತಮ್ಮ ಸ್ನೇಹಿತರ ಜೊತೆ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದು, ಜೊತೆಯಾಗಿರುವ ಫೋಟೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ವೈಷ್ಣವಿ Female friendship is so underrated, only when you uplift each other the world will be a better place to live ಎಂದು ಬರೆದುಕೊಂಡಿದ್ದಾರೆ. 
 

57

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಈ ನಟಿಯರ ಸ್ನೇಹ ಇಷ್ಟು ವರ್ಷಗಳಿಂದ ಗಾಢವಾಗಿ ಬೆಳೆಯುತ್ತಲೇ ಸಾಗಿದೆ. ಅಮೂಲ್ಯ ಹಾಗೂ ಇನ್ನಿಬ್ಬರು ಸ್ನೇಹಿತೆಯರು ಮದುವೆಯಾಗಿದ್ರೂ ಸಹ, ಎಲ್ಲರೂ ಜೊತೆ ಸೇರೋದನ್ನ ಮಾತ್ರ ಮರೆಯೋದಿಲ್ಲ ಇವರು. 
 

67

ಕೆಲ ಸಮಯದ ಹಿಂದೆ ಈ ನಾಲ್ಕು ಜನರ ಗ್ಯಾಂಗ್ ತಮ್ಮ ಫ್ಯಾಮಿಲಿ ಜೊತೆ ಚಿಕ್ಕಮಗಳೂರು ಪ್ರವಾಸ ಮಾಡಿ ಬಂದಿದ್ದರು. ಎಲ್ಲರೂ ತಮ್ಮ ತಮ್ಮ ಗಂಡನ ಜೊತೆ ಇದ್ದು, ವೈಷ್ಣವ್ ಸಿಂಗಲ್ ಆಗಿರೋದನ್ನ ನೋಡಿ ಅಭಿಮಾನಿಗಳು ಮದ್ವೆ ಯಾವಾಗ ಅಂತ ಪ್ರಶ್ನೆ ಮಾಡಿದ್ದೂ ಇದೆ. 
 

77

ಮದುವೆಯಾಗಿ, ಮಕ್ಕಳಾದ ಮೇಲೆ ಅಮೂಲ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ವೈಷ್ಣವಿ ಸೀತಾ ರಾಮ (Sita Rama) ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ದಶಕಗಳಿಂದ ಗಟ್ಟಿಯಾಗಿರುವ ಇವರ ಸ್ನೇಹ ಯಾವಾಗ್ಲೂ ಹೀಗೆ ಇರಲಿ, ಬೆಸ್ಟ್ ಫ್ರೆಂಡ್ಸ್ ಫಾರ್ ಲೈಫ್ ಟೈಮ್ ಆಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. 
 

Read more Photos on
click me!

Recommended Stories