ಇಂಟರ್ನೆಟ್ಟಲ್ಲಿ ಸೌಂಡ್ ಮಾಡ್ತಿದೆ ಭೂಮಿ ಶೆಟ್ಟಿ ರಗಡ್ ಲುಕ್... ಬೆಂಕಿ ಎಂದ ಚಂದನ್ ಶೆಟ್ಟಿ

Published : Aug 21, 2024, 05:43 PM IST

ಇತ್ತೀಚಿನ ದಿನಗಳಲ್ಲಿ ನಟಿ ಭೂಮಿ ಶೆಟ್ಟಿ ತಮ್ಮ ಹೊಸ ಹೊಸ ಸ್ಟೈಲ್, ಲುಕ್ ನಿಂದ ಸಖತ್ ಸೌಂಡ್ ಮಾಡ್ತಿದ್ದಾರೆ. ಇದೀಗ ಮತ್ತೊಂದು ರಗಡ್ ಲುಕ್ ‘ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.   

PREV
17
ಇಂಟರ್ನೆಟ್ಟಲ್ಲಿ ಸೌಂಡ್ ಮಾಡ್ತಿದೆ ಭೂಮಿ ಶೆಟ್ಟಿ ರಗಡ್ ಲುಕ್... ಬೆಂಕಿ ಎಂದ ಚಂದನ್ ಶೆಟ್ಟಿ

ಕಿನ್ನರಿ ಸೀರಿಯಲ್ ನಾಯಕಿ ಮಣಿ ಆಲಿಯಾಸ್ ಭೂಮಿ ಶೆಟ್ಟಿ (Bhoomi Shetty) ಇದಿಗ ಸಂಪೂರ್ಣ ಬದಲಾಗಿದ್ದಾರೆ. ಕನ್ನಡ ತೆಲುಗು ಕಿರುತೆರೆಯಲ್ಲಿ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಭೂಮಿ ಇದೀಗ ರಗಡ್ ಆಗಿ ಬದಲಾಗಿದೆ. 
 

27

ಬಿಗ್ ಬಾಸ್ ಸೀಸನ್ 7 (Bigg Boss season 7) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸೋ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ ಭೂಮಿ, ತಮ್ಮ ಟಾಮ್ ಬಾಯ್ ಬಿಹೇವಿಯರ್, ಯಾರಿಗೂ ಕೇರ್ ಮಾಡದ ಸ್ವಭಾವ, ಬೈಕ್ ರೈಡಿಂಗ್, ಟೀಕೆಗಳಿಗೆ ಕ್ಯಾರೇ ಎನ್ನದ ಗುಣಗಳಿಂದಲೇ ಸದ್ದು ಮಾಡ್ತಿದ್ದ ನಟಿ
 

37

ಇತ್ತೀಚಿನ ದಿನಗಳಲ್ಲಿ ಭೂಮಿ ಶೆಟ್ಟಿಯನ್ನ ಸೋಶಿಯಲ್ ಮೀಡಿಯಾದಲ್ಲಿ(Social Media) ಮಾತ್ರ ನೋಡುವಂತಾಗಿದೆ. ಸದ್ಯಕ್ಕೆ ಸಿನಿಮಾ, ಸಿರೀಯಲ್ ಒಟ್ಟಿನಲ್ಲಿ ನಟನೆಯಿಂದ ದೂರ ಉಳಿದಿರುವ ನಟಿ ಭೂಮಿ, ವಿದೇಶಗಳಲ್ಲಿ ಕಾಡು, ಮೇಡು, ಗ್ರಾಮಗಳಲ್ಲಿ ಸುತ್ತುತ್ತಾ ತಮ್ಮ ಜೀವನ ಎಂಜಾಯ್ ಮಾಡ್ತಿದ್ದಾರೆ. 
 

47

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಭೂಮಿ ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೊಗಳಿಂದ ಸದ್ದು ಮಾಡ್ತಿರ್ತಾರೆ. ಕ್ರಾಪ್ ಟಾಪ್, ಶಾರ್ಟ್ ಡ್ರೆಸ್, ಕ್ಲೀವೇಜ್ ಕಾಣಿಸುವಂತಹ ಟಾಪ್, ಮಿನಿ ಸ್ಕರ್ಟ್ ಧರಿಸೋ ಮೂಲಕ ನೆಟ್ಟಿಗರಿಗೆ ಶಾಖ್ ಆಗುವಂತೆ ಕಾಣಿಸುತ್ತಿದ್ದರೆ. 
 

57

ಇದೀಗ ಮತ್ತೊಂದು ತಮ್ಮ ಹೊಸ ರಗಡ್ ಲುಕ್ ಮೂಲಕ ಇಂಟರ್ನೆಟಲ್ಲಿ ಕಿಚ್ಚು ಹಚ್ಚಿದ್ದಾರೆ ಭೂಮಿ ಶೆಟ್ಟಿ. ಇನ್’ಸ್ಟಾಗ್ರಾಂ ನಲ್ಲಿ ಒಂದಷ್ಟು ಫೋಟೊ ಶೇರ್ ಮಾಡಿರುವ ಭೂಮಿ Main character energy ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. 
 

67

ಕಪ್ಪು ಬಣ್ಣದ ಲೆದರ್ ಪ್ಯಾಂಟ್, ಕಪ್ಪು ಬಣ್ಣದ ಟ್ರಾನ್ಸ್ಪರೆಂಟ್ ಟಾಪ್ ಮತ್ತು ಕಪ್ಪು ಬಣ್ಣದ ಜಾಕೆಟ್ ಧರಿಸಿರುವ ಭೂಮಿ ಶೆಟ್ಟಿ, ಸ್ಟೈಲ್ ಆಗಿ ಗಾಗಾಲ್ಸ್ ಹಾಕಿಕೊಂಡಿದ್ದಾರೆ, ಜೊತೆಗೆ ಬಾಕ್ಸ್ ಬ್ರೈಡ್ಸ್ ಹೇರ್ ಸ್ಟೈಲಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಹೊಸ ಲುಕ್ ಗೆ ಫ್ಯಾನ್ಸ್ ಮನಸೋತಿದ್ದಾರೆ. 
 

77

ಭೂಮಿ ಶೆಟ್ಟಿ ಫೋಟೊಗೆ ಚಂದನ್ ಶೆಟ್ಟಿ (Chandan Shetty) ಮತ್ತು ಸಂಯುಕ್ತಾ ಹೆಗ್ಡೆ ಫೈರ್ ಇಮೋಜಿ ಕಾಮೆಂಟ್ ಮಾಡುತ್ತಾ, ಭೂಮಿ ರಗಡ್ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಗಾಡೆಸ್, ಗ್ಯಾಂಗ್ ಸ್ಟರ್ ಶೆಟ್ಟಿ, ಸೆಕ್ಸಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.  
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories