ಜನಮೆಚ್ಚಿದ ಜೋಡಿ ಲಿಸ್ಟ್’ನಲ್ಲಿ ಭಾಗ್ಯ -ತಾಂಡವ್…. ನಮ್ಮ ಹೆಸರು ಈ ಲಿಸ್ಟಲ್ಲಿ ಯಾಕಿದೆ? ಎಂದ ಸುದರ್ಶನ್ ರಂಗಪ್ರಸಾದ್

First Published | Aug 21, 2024, 4:47 PM IST

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿ ಜೋರಾಗಿಯೇ ನಡೆಯುತ್ತಿದೆ. ಜನಮೆಚ್ಚಿದ ಜೋಡಿ ಲಿಸ್ಟ್ ನಲ್ಲಿ ಭಾಗ್ಯ ಮತ್ತು ತಾಂಡವ್ ಹೆಸರಿದ್ದು, ಇದಕ್ಕೆ ತಾಂಡವ್ ಪಾತ್ರಧಾರೆ ಸುದರ್ಶನ್ ರಂಗಪ್ರಸಾದ್ ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇದೀಗ ಸಂಭ್ರಮವೋ ಸಂಭ್ರಮ. ಯಾಕಂದ್ರೆ ಕಲರ್ಸ್ ನಲ್ಲಿ ಅನುಬಂಧ ಅವಾರ್ಡ್ ಸಮಾರಂಭಕ್ಕೆ ಅದ್ಧೂರಿಯಾಗಿ ತಯಾರಿ ನಡೆಯುತ್ತಿದೆ. ಎಲ್ಲೆಲ್ಲೂ ಕಲರ್ಸ್ ಕಲರವ ಶುರುವಾಗಿದೆ. 
 

ಅನುಬಂಧ ಅವಾರ್ಡ್ಸ್ ಗಾಗಿ  (Anubandha Awards) ನಟ ನಟಿಯರು ಈಗಾಗಲೇ ಡ್ಯಾನ್ಸ್ ಪ್ರಾಕ್ಟೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನುಬಂಧ ಅವಾರ್ಡ್ಸ್ ಪ್ರೊಮೋಶನ್ ಹಾಡು ಸಹ ಈಗಾಗಲೇ ಬಿಡುಗಡೆಯಾಗಿ ಜನಮನ ಗೆಲ್ಲುತ್ತಿದೆ. ಶೀಘ್ರದಲ್ಲಿ ಅನುಬಂಧ ಕಾರ್ಯಕ್ರಮವೂ ಬರಲಿದೆ. ವೀಕ್ಷಕರೂ ಕೂಡ ಅದಕ್ಕಾಗಿ ಕಾಯ್ತಾನೆ ಇದ್ದಾರೆ. 
 

Tap to resize

ಪ್ರತಿಯೊಂದು ಕ್ಯಾಟಗರಿಯಲ್ಲಿ ನಟ ನಟಿಯರಿಗೆ ಅವಾರ್ಡ್ ಕೂಡ ಕೊಡ್ತಿದ್ದಾರೆ. ಈಗಾಗಲೇ ನೆಚ್ಚಿನ ನಟ ನಟಿಯರ ಆಯ್ಕೆ ಮಾಡೋದಕ್ಕೆ ವೋಟಿಂಗ್ ಕೂಡ ಆರಂಭವಾಗಿದೆ. ಜನಮೆಚ್ಚಿನ ಜೋಡಿಯ ಲಿಸ್ಟ್ ಕೂಡ ಹೊರ ಬಿದ್ದಿದ್ದು, ಯಾರಾಗಲಿದ್ದಾರೆ ಜನ ಮೆಚ್ಚಿನ ಜೋಡಿ (Jana Mecchida Jodi)ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. 
 

ಜನಮೆಚ್ಚಿನ ಜೋಡಿ ಲಿಸ್ಟ್ ನಲ್ಲಿ ಲಕ್ಷ್ಮೀ ಬಾರಮ್ಮದ ಜೋಡಿಗಳಾದ ಲಕ್ಷ್ಮೀ -ವೈಷ್ಣವ್, ನಿನಗಾಗಿಯ ರಚನಾ- ಜೀವಾ, ಶ್ರೀಗೌರಿಯಿಂದ ಶ್ರೀಗೌರಿ ಮತ್ತು ಅಪ್ಪು, ರಾಮಾಚಾರಿಯಿಂದ ಚಾರು ಮತ್ತು ಚಾರಿ, ಕರಿಮಣಿಯಿಂದ ಸಾಹಿತ್ಯ ಮತ್ತು ಕರ್ಣ, ಅಂತರಪಟದಿಂದ ಆರಾಧನಾ ಮತ್ತು ಸುಶಾಂತ್, ಕೆಂಡಸಂಪಿಗೆಯಿಂದ ಸುಮನಾ ಮತ್ತು ತೀರ್ಥ ಜೋಡಿಗಳ ಜೊತೆಗೆ ಮತ್ತೊಂದು ಅಚ್ಚರಿಯ ಜೋಡಿಗಳ ಹೆಸರು ಸೇರಿಕೊಂಡಿದೆ. 
 

ಹೌದು ಜನಮೆಚ್ಚಿದ ಜೋಡಿ ಲಿಸ್ಟ್ ನಲ್ಲಿ ಸೀರಿಯಲ್ ಆರಂಭವಾದಾಗಿನಿಂದ ಹಾವು ಮುಂಗುಸಿಯಂತಿರುವ ಭಾಗ್ಯ ಲಕ್ಷ್ಮೀ (Bhagya Lakshmi) ಧಾರಾವಾಹಿಯ ಭಾಗ್ಯ ಮತ್ತು ತಾಂಡವ್ ಹೆಸರು ಕೂಡ ಸೇರಿರೋದು ಅಚ್ಚರಿಗೆ ಕಾರಣವಾಗಿದೆ. ಇದು ಕೇವಲ ವೀಕ್ಷಕರಿಗೆ ಮಾತ್ರವಲ್ಲ ಭಾಗ್ಯ ಮತ್ತು ತಾಂಡವ್ ಪಾತ್ರಧಾರಿಗಳಾದ ಸುದರ್ಶನ್ ರಂಗಪ್ರಸಾದ್ ಮತ್ತು ಸುಷ್ಮಾ ರಾವ್ ಗೂ ಅಚ್ಚರಿ ಮೂಡಿಸಿದೆ. 
 

ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಕುರಿತು ಹಾಸ್ಯಾಸ್ಪದವಾಗಿ ಬರೆದಿರುವ ಸುದರ್ಶನ್, ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್ ಅವರನ್ನು ಟ್ಯಾಗ್ ಮಾಡಿ, ನಾವ್ಯಾಕೆ ಜನಮೆಚ್ಚಿದ ಜೋಡಿ ಲಿಸ್ಟ್ ನಲ್ಲಿದ್ದೇವೆ ಅನ್ನೋದೆ ಗೊತ್ತಾಗ್ತಿಲ್ಲ ಎಂದು ಬರೆದುಕೊಂಡಿದ್ದಾರೆ. 
 

ಅಷ್ಟೇ ಅಲ್ಲ ನೀವು ಮಾನಸಿಕವಾಗಿ ಸ್ಥಿರವಾಗಿದ್ರೆ ನಮಗೆ ವೋಟ್ ಮಾಡಿ ಎಂದು ಫನ್ನಿಯಾಗಿ ವೀಕ್ಷಕರನ್ನ ಕೇಳಿಕೊಂಡಿದ್ದಾರೆ. ಇದಕ್ಕೆ ಸುಷ್ಮಾ ರಾವ್ ನಗುವಿನ ಇಮೋಜಿ ಹಾಕಿ, ತಮ್ಮ ಪೇಜ್ ನಲ್ಲಿ ರೀಪೋಸ್ಟ್ ಮಾಡಿದ್ದಾರೆ. 
 

ಇನ್ನು ಜನಮೆಚ್ಚಿದ ಜೋಡಿ ಲಿಸ್ಟ್ ನಲ್ಲಿ ರಾಮಾಚಾರಿ ಮತ್ತು ಚಾರು ಹಾಗೂ ಲಕ್ಷ್ಮೀ ಮತ್ತು ವೈಷ್ಣವ್ ಜೋಡಿಗೆ ಹೆಚ್ಚಿನ ಜನರು ವೋಟ್ ಮಾಡಿದ್ದಾರೆ. ಈ ಬಾರಿ ಚಾರು -ಚಾರಿನೇ ವಿನ್ ಆಗ್ಬೇಕು ಅಂತಾ ಬೇಡಿಕೊಂಡೋರು ಇದ್ದಾರೆ. ಯಾರಾಗಲಿದ್ದಾರೆ ಜನಮೆಚ್ಚಿದ ಜೋಡಿ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!