ಇನ್ನೊಂದು ಹೆಜ್ಜೆ ಮುಂದೆ ಹೋದ ಬಿಗ್‌ಬಾಸ್‌, ಈ ಬಾರಿ ಲೆಸ್ಬಿಯನ್‌ ಜೋಡಿ ಎಂಟ್ರಿ!

Published : Sep 16, 2025, 08:46 PM IST

Lesbian Couple in Bigg Boss ಬಿಗ್ ಬಾಸ್ ಮಲಯಾಳಂ 7ನೇ ಸೀಸನ್‌ಗೆ ಲೆಸ್ಬಿಯನ್‌ ಜೋಡಿ ಅಧಿಲಾ ನಸಾರಿನ್ ಮತ್ತು ಫಾತಿಮಾ ನೂರಾ ಪ್ರವೇಶಿಸಿದ್ದಾರೆ. ಸಾಮಾಜಿಕ ವಿರೋಧದ ನಡುವೆ ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ದೊಡ್ಡ ಕಾನೂನು ಹೋರಾಟವನ್ನೇ ಈ ಜೋಡಿ ನಡೆಸಿತ್ತು.

PREV
110

ಈಗಾಗಲೇ ಬಿಗ್‌ಬಾಸ್ ವಿವಿಧ ಭಾಷೆಗಳಲ್ಲಿ ಪ್ರಸಾರ ಆರಂಭಿಸಿದೆ. ಇದರಲ್ಲಿ ಅತ್ಯಂತ ವಿಶೇಷವಾಗಿ ಕಂಡಿರುವುದು ಹಿಂದಿ ಆವೃತ್ತಿಯ ಬಿಗ್‌ಬಾಸ್‌ ಹಾಗೂ ಮಲಯಾಳಂ ಆವೃತ್ತಿಯ ಬಿಗ್‌ ಬಾಸ್‌. ಹಿಂದಿಯಲ್ಲಿ ಈ ಬಾರಿಯ ಬಿಗ್‌ಬಾಸ್‌ ದೊಡ್ಡ ಯಶಸ್ಸು ಕಾಣುವ ಲಕ್ಷಣ ಕಂಡಿದ್ದರೆ, ಮಲಯಾಳಂ ಭಾಷೆಯ ಬಿಗ್‌ಬಾಸ್‌ನಲ್ಲಿ ಲೆಸ್ಬಿಯನ್‌ ಜೋಡಿ ಎಂಟ್ರಿ ಕೊಡುವ ಮೂಲಕ ಬಿಗ್‌ಬಾಸ್‌ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

210

ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಅಧಿಲಾ ನಸಾರಿನ್ ಮತ್ತು ಫಾತಿಮಾ ನೂರಾ ಬಿಗ್ ಬಾಸ್ ಮಲಯಾಳಂ 7 ಮನೆಗೆ ಹೆಜ್ಜೆಹಾಕಿದ್ದಾರೆ. ಮ್ಮ ನಡುವಿನ ಪ್ರೀತಿ ಹಾಗೂ ಧೈರ್ಯದ ಕಥೆಗಳನ್ನು ಅವರು ಎಲ್ಲರಿಗೂ ಹೇಳುತ್ತಿದ್ದಾರೆ.

310

ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುವ ಮೊದಲೇ ದಂಪತಿಗಳು, ತಮ್ಮ ರಿಲೇಷನ್‌ಷಿಪ್‌ಅನ್ನು ಉಳಿಸಿಕೊಳ್ಳಲು ದೊಡ್ಡ ಮಟ್ಟದ ಕಾನೂನು ಹೋರಾಟ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದು ದೇಶದಾದ್ಯಂತ ಅನೇಕ ಹೃದಯಗಳನ್ನು ಮುಟ್ಟಿದ ಪ್ರಕರಣವಾಗಿತ್ತು.

410

ಅಧಿಲಾ ಮತ್ತು ನೂರಾ ಮೊದಲು ಸೌದಿ ಅರೇಬಿಯಾದಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದಾಗ ಭೇಟಿಯಾದರು. ಆಪ್ತ ಸ್ನೇಹವಾಗಿ ಪ್ರಾರಂಭವಾದದ್ದು ನಿಧಾನವಾಗಿ ಪ್ರಣಯ ಸಂಬಂಧವಾಗಿ ಅರಳಿತು. ಅವರ ಕುಟುಂಬಗಳು ಸಹ ಸ್ನೇಹಿತರಾಗಿದ್ದರು ಮತ್ತು ಆರಂಭದಲ್ಲಿ ಇಬ್ಬರೂ ಹುಡುಗಿಯರನ್ನು ಉನ್ನತ ವ್ಯಾಸಂಗಕ್ಕಾಗಿ ಕೋಝಿಕೋಡ್‌ನಲ್ಲಿರುವ ಒಂದೇ ಕಾಲೇಜಿಗೆ ಕಳುಹಿಸಲು ಯೋಜಿಸಿದ್ದರು. ತಮ್ಮ ಜೀವನವನ್ನು ಒಟ್ಟಿಗೆ ಕಳೆಯುವ ಸಾಮಾನ್ಯ ಕನಸಿನೊಂದಿಗೆ, ಅಧಿಲಾ ಮತ್ತು ನೂರಾ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ತಮ್ಮ ಕುಟುಂಬದಿಂದ ಹೊರಬರಬೇಕು ಎಂದು ಆಸೆ ಪಟ್ಟಿದ್ದರು.

510

ಅವರ ಸಂಬಂಧ ಬೆಳಕಿಗೆ ಬಂದಾಗ, ಎರಡೂ ಕುಟುಂಬಗಳು ಅದನ್ನು ತೀವ್ರವಾಗಿ ವಿರೋಧಿಸಿ, ಧಾರ್ಮಿಕ ಆಧಾರದ ಮೇಲೆ ಅವರ ಪ್ರೀತಿಯನ್ನು "ಅಸ್ವಾಭಾವಿಕ" ಎಂದು ಕರೆದವು. ತಮ್ಮ ಹಿಂದಿನ ನಿರ್ಧಾರದಿಂದ ಹಿಂದೆ ಸರಿದ ಕುಟುಂಬಗಳು, ಹುಡುಗಿಯರು ಅದೇ ಕಾಲೇಜಿಗೆ ಸೇರೋದಕ್ಕೆ ವಿರೋಧ ವ್ಯಕ್ತಪಡಿಸಿದವು. ತಮ್ಮ ಮನೆಗಳಿಂದ ಭಾರೀ ವಿರೋಧ ಬಂದ ಬಳಿಕ ಇಬ್ಬರೂ ಕೂಡ ಮನೆ ಬಿಟ್ಟು ಹೋಗಿ, ಕೋಝಿಕ್ಕೋಡ್‌ನಲ್ಲಿರುವ ಆಶ್ರಯ ಕೇಂದ್ರದಲ್ಲಿ ವಾಸ ಮಾಡಿದ್ದರು.

610

ಈ ಹಂತದಲ್ಲಿ ಆಧಿಲಾಳ ಕುಟುಂಬ ಆಗಮಿಸಿ, ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಬೆಂಬಲ ನೀಡುವ ಸುಳ್ಳು ಭರವಸೆಯ ಮೇಲೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ, ನೂರಾಳ ಕುಟುಂಬವು ಅಧಿಲಾಳ ಮೇಲೆ ತಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿತು.

710

ಬೇರ್ಪಟ್ಟು ಸಂಕಷ್ಟದಲ್ಲಿ ಸಿಲುಕಿದ ಅಧಿಲಾ, ನೂರಾಳನ್ನು ನನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ಮಾಡಲಾಗಿದೆ ಮತ್ತು "ಪರಿವರ್ತನೆ ಚಿಕಿತ್ಸೆ"ಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸುವ ಮೂಲಕ ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಅಧಿಲಾ ಅವರ ದುಃಸ್ಥಿತಿಯ ಬಗ್ಗೆ ಸಾರ್ವಜನಿಕ ಗಮನ ಸೆಳೆಯಲು ಸೋಶಿಯಲ್‌ ಮೀಡಿಯಾದಲ್ಲಿ ಲೈವ್‌ ಕೂಡ ಮಾಡಿದ್ದರು.

810

ಮಹತ್ವದ ತೀರ್ಪಿನಲ್ಲಿ, ಕೇರಳ ಹೈಕೋರ್ಟ್ ಇಬ್ಬರೂ ಮಹಿಳೆಯರೊಂದಿಗೆ ಖಾಸಗಿ ಸಂಭಾಷಣೆಗಳನ್ನು ನಡೆಸಿದ ನಂತರ ಅವರ ಪರವಾಗಿ ತೀರ್ಪು ನೀಡಿತು. ನ್ಯಾಯಾಲಯವು ಅವರ ಒಟ್ಟಿಗೆ ವಾಸಿಸುವ ಹಕ್ಕನ್ನು ಎತ್ತಿಹಿಡಿದಿದೆ, ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ತಿಳುವಳಿಕೆಯುಳ್ಳ ಆಯ್ಕೆಯ ವಿಷಯವೆಂದು ಗುರುತಿಸಿದೆ. ಈ ತೀರ್ಪನ್ನು ಭಾರತದಲ್ಲಿ LGBTQ+ ಹಕ್ಕುಗಳಿಗೆ ಪ್ರಗತಿಪರ ಮೈಲಿಗಲ್ಲು ಎಂದೇ ಗುರುತಿಸಲಾಗಿದೆ.

910

ತೀರ್ಪಿನ ನಂತರ, ದಂಪತಿಗಳು ಬಹಿರಂಗವಾಗಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು ಮತ್ತು ಸಲಿಂಗ ವಿವಾಹದ ಫೋಟೋಶೂಟ್ ಮೂಲಕ ಮತ್ತೆ ಗಮನ ಸೆಳೆದರು. ಇದು ಭಾರ ಪ್ರಮಾಣದಲ್ಲಿ ವೈರಲ್ ಆಯಿತು. ಪ್ರೀತಿ ಮತ್ತು ಆಚರಣೆಯಿಂದ ತುಂಬಿದ್ದ ಈ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು.

1010

ಸೈಬರ್ ಬೆದರಿಕೆ ಮತ್ತು ಪ್ರತಿಕ್ರಿಯೆಗಳ ಹೊರತಾಗಿಯೂ, ಅಧಿಲಾ ಮತ್ತು ನೂರಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಕಂಟೆಂಟ್‌ ಕ್ರಿಯೇಟರ್‌ ಆಗಿ ಜೀವನ ಕಂಡುಕೊಂಡಿದ್ದಾರೆ. ಅಡುಗೆ ವೀಡಿಯೊಗಳು, ದೈನಂದಿನ ವ್ಲಾಗ್‌ಗಳು ಮತ್ತು ಜೀವನಶೈಲಿ ಸಹಯೋಗಗಳನ್ನು ಹಂಚಿಕೊಂಡಿದ್ದಾರೆ, ಅದು ಅವರ ಪ್ರಯಾಣ ಮತ್ತು ಪ್ರೇಮಕಥೆಯನ್ನು ಪ್ರತಿಬಿಂಬಿಸುತ್ತದೆ.

Read more Photos on
click me!

Recommended Stories