ಕಲರ್ಸ್ ಕನ್ನಡ ಈ ಬಾರಿಯ ಸೀರಿಯಲ್ ಹಬ್ಬವಾದ ಅನುಬಂಧ ಪ್ರಶಸ್ತಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡುತ್ತಿದ್ದೆ ಅಷ್ಟೇ, ಅಷ್ಟರಲ್ಲಿ ವೀಕ್ಷಕರು ಈ ಬಾರಿ ಅನುಬಂಧ ಜನಮೆಚ್ಚಿದ ನಾಯಕಿ ಯಾರು ಅನ್ನೋದನ್ನು ಸೂಚಿಸಿದ್ದಾರೆ. ಈ ನಟಿಗೆ ಬೆಸ್ಟ್ ನಾಯಕಿ ಅವಾರ್ಡ್ ಖಂಡಿತಾ ಅಂತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯು ವಿಭಿನ್ನವಾದ ಧಾರಾವಾಹಿಗಳನ್ನು ನೀಡುವಲ್ಲಿ ಯಾವಾಗಲೂ ಮುಂದಿರುತ್ತೆ. ನಾಯಕಿಯ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಈ ವಾಹಿನಿಯು ಇದೀಗ ವರ್ಷದ ಹಬ್ಬ ಅನುಬಂಧ ಪ್ರಶಸ್ತಿ ಸಮಾರಂಭಕ್ಕೆ ಎಲ್ಲಾ ತಯಾರಿ ನಡೆಸುತ್ತಿದೆ.
27
ಜನಮೆಚ್ಚಿದ ನಾಯಕಿ ಘೋಷಿಸಿದ ವೀಕ್ಷಕರು
ಅನುಬಂಧ ಪ್ರಶಸ್ತಿ ಸಮಾರಂಭಕ್ಕೆ ಇನ್ನು ಬೇಕಾದಷ್ಟು ದಿನಗಳು ಇರುವಾಗಲೇ ಇದೀಗ ವೀಕ್ಷಕರು ಯಾವ ನಟಿಗೆ ಜನಮೆಚ್ಚಿನ ನಟಿ ಬರಲಿದೆ ಅನ್ನೋದನ್ನು ಘೋಷಿಸಿದ್ದಾರೆ. ಅವರ ನಟನೆ, ಸುಳ್ಳಿನ ವಿರುದ್ಧ ಸಿಡಿದೇಳುವ ಅವರ ಧೈರ್ಯ ನೋಡಿ, ಈ ಬಾರಿ ಪ್ರಶಸ್ತಿ ಅವರಿಗೆ ಎಂದಿದ್ದಾರೆ.
37
ಯಾರಿಗೇ ಆ ಪ್ರಶಸ್ತಿ?
ಕಲರ್ಸ್ ಕನ್ನದ ವಾಹಿನಿಯ ಸೀರಿಯಲ್ ವೀಕ್ಷಿಸುವ ವೀಕ್ಷಕರ ಪ್ರಕಾರ, ಈ ವರ್ಷ ಜನಮೆಚ್ಚಿದ ನಾಯಕಿ ಪ್ರಶಸ್ತಿ ಪಡೆಯೋದು ಭಾರ್ಗವಿಯಂತೆ. ಅಂದಹಾಗೆ ಭಾರ್ಗವಿ ಪಾತ್ರದಲ್ಲಿ ನಟಿ ರಾಧಾ ಭಗವತಿಯವರು ಪವರ್ ಫುಲ್ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ.
ಭಾರ್ಗವಿ LLB ಧಾರಾವಾಹಿ ಅದ್ಭುತವಾಗಿ ಪ್ರಸಾರವಾಗುತ್ತಿದೆ. ಯಾವಾಗಲೂ ಕಣ್ಣೀರಿಡುವ ನಾಯಕಿಯರ ಮುಂದೆ, ತನಗೆ ಏನೇ ಸವಾಲು ಬಂದರೂ ಅದನ್ನು ಎದುರಿಸುವ ಸಾಹಸಿಯಾಗಿ ಭಾರ್ಗವಿಯನ್ನು ಜನರು ಇಷ್ಟಪಟ್ಟಿದ್ದಾರೆ .
57
ಕಥೆಯಲ್ಲಿ ಏನಾಗುತ್ತಿದೆ?
ಭಾರ್ಗವಿ LLBಯಲ್ಲಿ ಇಷ್ಟು ದಿನ ಎಲ್ಲರ ಮುಂದೆ ತಾನು ಲಾ ಪ್ರಾಕ್ಟೀಸ್ ಬಿಟ್ಟಿದ್ದೀನಿ ಎಂದಿದ್ದ ಭಾರ್ಗವಿ, ಯಾರಿಗೂ ಗೊತ್ತಾಗದಂತೆ ಹಿಂದಿನಿಂದ ಸಂಧ್ಯಾ ಸಾವಿನ ಬಗ್ಗೆ ಎಲ್ಲಾ ಮಾಹಿತಿಯನ್ನು ಕಲೆಹಾಕುತ್ತಿದ್ದಳು. ಇದೀಗ ವಿಕ್ರಮ್ ನೇ ನಿಜವಾದ ಅಪರಾಧಿ ಎಂದು ಎಲ್ಲರೆದುರು ಹೇಳಿದ್ದಾಳೆ.
67
ಮಾವನಿಗೆ ಸವಾಲು ಹಾಕಿದ ಸೊಸೆ
ಪೊಲೀಸರೊಂದಿಗೆ ಮದುವೆ ಮಂಟಪಕ್ಕೆ ಬಂದು, ವಿಕ್ರಮ್ ನ ನೀಚತನವನ್ನು ಹೊರಹಾಕಿದ ಭಾರ್ಗವಿಯ ಮುಂದೆ ಜೆಪಿ ಪಾಟೀಲ್ ನೀನು ಲಾ ಪ್ರಾಕ್ಟಿಸ್ ಮಾಡಲ್ಲ ಅಂತ ಮಾತು ಕೊಟ್ಟಿದ್ದೆ ಎಂದಾಗ ಭಾರ್ಗವಿ ನಾನು ಲಾ ಪ್ರಾಕ್ಟೀಸ್ ಬಿಡಬೇಕು ಅಂತ ನೀವು ಅಲ್ಲ, ನಿಮ್ಮಪ್ಪ ಅಲ್ಲ ನನ್, ಅಪ್ಪ ಬಂದು ಹೇಳಿದ್ರೂ ನಾನು ಬಿಡೋದಿಲ್ಲ ಎಂದಿದ್ದಾಳೆ.
77
ಭಾರ್ಗವಿಯನ್ನು ಮೆಚ್ಚಿಕೊಂಡ ಜನ
ಭಾರ್ಗವಿಯ ದಿಟ್ಟ, ನೇರವಾದ ಮಾತು, ನುಡಿ, ಆಕ್ಷನ್, ಸವಾಲನ್ನು ಗೆಲ್ಲುವ ಪಣವನ್ನು ನೋಡಿ ವೀಕ್ಷಕರು ಆಕೆಯನ್ನು ಮೆಚ್ಚಿಕೊಂಡಿದ್ದು, ಭಾರ್ಗವಿ ಸೂಪರ್, ಈ ಸಲ ಅನುಬಂಧ ಅವಾರ್ಡ್ ಜನ ಮೆಚ್ಚಿದ ನಾಯಕಿ ಭಾರ್ಗವಿ ಎಂದಿದ್ದಾರೆ.