ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಧಾರಾವಾಹಿಗಳು ತನ್ನ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ. ಒಂದೊಂದು ಸೀರಿಯಲ್ ಗಳು ಒಂದೊಂದು ರೀತಿಯ ಕಥೆಗಳನ್ನು ಹೇಳುವ ಮೂಲಕ, ಟಿಆರ್ ಪಿಯಲ್ಲೂ ಮೊದಲ ಸ್ಥಾನಗಳಲ್ಲಿದ್ದದ್ದು ಸುಳ್ಳಲ್ಲ. ಅಂದು ಈ ಹಿಂದೆಯೂ ಇರಬಹುದು, ಇಂದಿಗೂ ಅಷ್ಟೇ ಕಥೆಗಳಲ್ಲಿ ಹಲವು ಟ್ವಿಸ್ಟ್ ಟರ್ನ್ ನೀಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟಿದೆ.
ಆದರೆ ನೀವು ಗಮನಿಸಿದ್ದೀರಾ? ಹೆಚ್ಚಿನ ಸೀರಿಯಲ್ ಗಳಲ್ಲಿ ನಾಯಕಿಯರಿಗೂ ಅಥವಾ ಇನ್ನೊಂದು ಮುಖ್ಯ ಪಾತ್ರ ಗರ್ಭಿಣಿಯಾಗಿರೋದನ್ನ ಹೆಚ್ಚಾಗಿ ಎಲ್ಲದರಲ್ಲೂ ತೋರಿಸ್ತಾರೆ. ಕೆಲವು ಸೀರಿಯಲ್ ಗಳಲ್ಲಿ ಅದ್ಧೂರಿಯಾಗಿ ಸೀಮಂತ ಮಾಡೋದನ್ನು ತೋರಿಸಿದ್ದಾರೆ. ಆದರೆ ಅದರಲ್ಲಿ ಎಷ್ಟು ಜನಕ್ಕೆ ಮಕ್ಕಳಾಗಿದೆ ನೀವೇ ಹೇಳಿ.
ಗರ್ಭಿಣಿಯರಾಗಿ ಸಂಭ್ರಮಿಸಿ, ಅದ್ಧೂರಿಯಾಗಿ ಸೀಮಂತ ಕಾರ್ಯಗಳನ್ನು ಮಾಡಿದ್ರೂ, ಅದರಲ್ಲಿ ಆರಾಮವಾಗಿ ಮಗುವಿಗೆ ಜನ್ಮ ನೀಡಿದವರ ಸಂಖ್ಯೆ ಕಡಿಮೆಯೇ. ಹೆಚ್ಚಿನ ಸೀರಿಯಲ್ ಗಳಲ್ಲಿ ನಾಯಕಿಗೆ, ನಟಿಗೆ ಅಬಾರ್ಶನ್ (abortion)ಆಗಿದ್ದೇ ಹೆಚ್ಚು, ಅದೇ ಕೊರಗಲ್ಲಿ ಅವರು ಜೀವನ ದೂಡಿದ್ದೂ ಹೆಚ್ಚು. ಅದರಲ್ಲೂ ಕೆಲವರಿಗಂತೂ ಎರಡೆರಡುಸಲ ಅಬಾರ್ಶನ್ ಆಗಿದೆ.
ಅದು ಗಟ್ಟಿಮೇಳ ಇರಬಹುದು, ಪಾರು, ಶ್ರೀರಸ್ತು ಶುಭಮಸ್ತು, ಅಮೃತಧಾರೆ ಹೀಗೆ ಹೆಚ್ಚಿನ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರಧಾರಿಯನ್ನು ಗರ್ಭಿಣಿಯನ್ನಾಗಿಸೋದು, ಎಲ್ಲರೂ ಸಂಭ್ರಮಿಸೋದು, ಮಗುವಿನ ಬಗ್ಗೆ ಕನಸು ಕಾಣೋದು ಇನ್ನೇನು ಮಗು ಆಗುತ್ತೆ ಎನ್ನುವಾಗ ಆಕ್ಸಿಡೆಂಟ್ ಆಗಿ ಮಗುವನ್ನ ಅಬಾರ್ಟ್ ಮಾಡೋದು ಎಲ್ಲಾ ಸೀರಿಯಲ್ ಗಳಲ್ಲಿ ಈಗ ಕಾಮನ್ ಆಗಿದೆ.
ಜನಮನ ಗೆದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳ (Gattimela) ನಿಮಗೆ ನೆನಪಿದೇ ಅಲ್ವಾ? ಈ ಧಾರಾವಾಹಿಯಲ್ಲಿ ವೇದಾಂತ್ ತಂಗಿ ಆಧ್ಯಾ ಎರಡು ಬಾರಿ ಗರ್ಭಿಣಿಯಾಗಿದ್ದಳು. ಅದ್ಧೂರಿಯಾಗಿ ಸೀಮಂತ ಕೂಡ ಮಾಡಿದ್ದರು. ಆದರೆ ಎರಡು ಬಾರಿಯೂ ಕುತಂತ್ರಿಗಳ ಮೋಸದಿಂದ ಅಬಾರ್ಶನ್ ಆಗುವಂತೆ ಮಾಡಲಾಗಿತ್ತು.
ಇನ್ನು ಪಾರು (Paaru) ಸೀರಿಯಲ್ ನೆನಪಿದ್ಯಾ? ಅದರಲ್ಲೂ ಅಷ್ಟೇ ಜನನಿ ಮಗುವಿನ ಬಗ್ಗೆ ಎಷ್ಟೊಂದು ಕನಸು ಕಂಡಿದ್ದಳು, ಮಗು ಆದ್ರೆ ಹಾಗೆ ಮಾಡ್ಬೇಕು ಹೀಗೆ ಮಾಡ್ಬೇಕು ಎಂದೆಲ್ಲಾ ದೊಡ್ಡ ದೊಡ್ಡ ಕನಸುಗಳನ್ನೇ ಕಟ್ಟಿಕೊಂಡಿದ್ದಳು. ಆದರೆ ಕೊನೆ ಆಕೆಯ ಮಗುವನ್ನ ಇಲ್ಲದಂತೆ ಮಾಡಲಾಯ್ತು, ಕೊನೆಗೆ ಪಾರು ತನ್ನ ಮಗುವನ್ನೆ ಜನನಿಗೆ ಕೊಟ್ಟಿರೋದು ಬೇರೆ ಕಥೆ.
ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿ ತನ್ನ ವಿಭಿನ್ನ ಕಥೆಯಿಂದ ಮನ ಸೆಳೆಯುತ್ತಿದೆ ನಿಜಾ, ಆದರೆ ಇದರಲ್ಲೂ ಮಗುವಿಗಾಗಿ ಹಂಬಲಿಸುತ್ತಿರುವ ಪೂರ್ಣಿಗೆ ಒಂದು ಸಲ ಅಲ್ಲ, ಎರಡು ಸಲ ಅಬಾರ್ಶನ್ ಮಾಡಿಸಲಾಯಿತು. ಸೀಮಂತವನ್ನೂ ಮಾಡಿದ್ರೂ, ಎರಡನೇ ಬಾರಿ ಶಾರ್ವರಿಯ ಕುತಂತ್ರಕ್ಕೆ ಮಗುವಿನ ಬಲಿ ಕೊಡಲಾಯ್ತು. ಅಷ್ಟೇ ಅಲ್ಲ ತುಳಸಿ ಗರ್ಭಿಣಿಯಾಗಿದ್ದಾಳೆ ಎಂದೇ ತೋರಿಸಿದ್ದಳು, ಈಗ ಮಗುವಾದ್ರೆ ತುಳಸಿ ಜೀವಕ್ಕೆ ಅಪಾಯ ಅದನ್ನ ತೆಗೆಸಿಬಿಡಿ ಅಂತಿದ್ದಾರೆ.
ಅದೆಲ್ಲಾ ಬಿಡಿ, ಇತ್ತೀಚೆಗೆ ಅಮೃತಧಾರೆ (Amruthadhare) ಸೀರಿಯಲ್ ನಲ್ಲಿ ಏನಾಯ್ತು ಅನ್ನೋದನ್ನ ನೀವೇ ನೋಡಿದ್ರಿ ಅಲ್ವಾ? ಮಲ್ಲಿಗೂ ಅಬಾರ್ಶನ್. ಸೀಮಂತ ಮುಗಿಸಿ ಹೊರಟ ತುಂಬು ಗರ್ಭಿಣಿ ಮಲ್ಲಿಗೆ ಆಕ್ಸಿಡೆಂಟ್ ಆಗಿ, ಮಲ್ಲಿ ಏನೋ ಪ್ರಾಣಾಪಾಯದಿಂದ ಪಾರಾಗಿದ್ದಾಳೆ, ಆದ್ರೆ ಮಗು ಮಾತ್ರ ಇಲ್ಲ. ಅದಕ್ಕೂ ಮುನ್ನ ಮಹಿಮಾ ಬೇಕು ಅಂತಾನೆ ಮಗುವನ್ನ ತೆಗೆಸಿದ್ಲು. ಇದನ್ನೆಲ್ಲಾ ನೋಡಿದ್ರೆ, ಅಯ್ಯೋ ಯಾಕಪ್ಪ ಈ ನಿರ್ದೇಶಕರು ಗರ್ಭಿಣಿಯಾಗಿರೋ ಹೆಣ್ಣು ಮಗುವಿಗೆ ತಾಯ್ತನವನ್ನ ಅನುಭವಿಸೋಕೆ ಬಿಡ್ತಿಲ್ಲಾ ಅಂತ ಅನಿಸೋದಂತೂ ಸುಳ್ಳಲ್ಲ, ಏನಂತೀರಾ?