ದೀಪಾ ಜೊತೆ ಕೃಷ್ಣನ ಮದ್ವೆಯಾದ್ರು ನಡೆಯುತ್ತೆ ಅಂದ್ರೆ… ಕಿಟ್ಟಿನ ಹುಡ್ಕೊಂಡು ಬಂದೇ ಬಿಟ್ಲು ಸುಂದ್ರಿ ರುಕ್ಮಿಣಿ !

First Published | Sep 26, 2024, 5:29 PM IST

ರಾಮಾಚಾರಿ ಧಾರಾವಾಹಿಯಲ್ಲಿ ಇದೀಗ ಹೊಸ ಪಾತ್ರದ ಎಂಟ್ರಿಯಾಗಿದ್ದು, ರಾಮಾಚಾರಿಗೆ ಚಾರು ಇದ್ದಂತೆ, ಕಿಟ್ಟಿಗೊಬ್ಬ ರುಕ್ಮಿಣಿ ಬಂದೆ ಬಿಟ್ಲು. ಕಥೆಯಲ್ಲಿ ಏನಿದು ಟ್ವಿಸ್ಟ್? 
 

ಕಲರ್ಸ್ ಕನ್ನಡದ ಅನುಬಂಧ ಕಾರ್ಯಕ್ರಮದಲ್ಲೆ ಅತಿ ಹೆಚ್ಚು ಪ್ರಶಸ್ತಿಗಳನ್ನ ಪಡೆದದ್ದೆ ಪಡೆದದ್ದು, ಇದೀಗ ರಾಮಾಚಾರಿ (Ramachari) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಕೊಟ್ಟು ವೀಕ್ಷಕರಿಗೆ ಅಚ್ಚರಿಯನ್ನುಂಟು ಮಾಡುತ್ತಿದೆ. 
 

ಈಗಷ್ಟೇ ವೈಶಾಖ ಬಾಯಿಂದ ದೊಡ್ಡದೊಂದು ಗುಟ್ಟು ರಟ್ಟಾಗಿದೆ. ನಾರಾಯಣಾಚಾರ್ಯರಿಗೆ ಈಗಾಗಲೇ ಇನ್ನೊಂದು ಮದ್ವೆಯಾಗಿದ್ದು, ಒಬ್ಬಳು ಮಗಳು ಇದ್ದಾಳೆ ಎನ್ನುವ ಸತ್ಯ ಎಲ್ಲರ ಮುಂದೆ ಭರ ಸಿಡಿಲಿನಂತೆ ಬಯಲಾಗಿದೆ. ಈ ಟ್ವಿಸ್ಟ್ ನಿಂದ ಜನರು ಸುಧಾರಿಸುತ್ತಿರುವಾಗಲೇ ಧಾರಾವಾಹಿಯಲ್ಲಿ ಇನ್ನೊಬ್ಬ ನಾಯಕಿಯ ಎಂಟ್ರಿಯಾಗಿದೆ. 
 

Tap to resize

ಹೌದು ರಾಮಾಚಾರಿಗೆ ಚಾರು ನಾಯಕಿಯಾಗಿದ್ದಾಳೆ ಅಂದ್ರೆ, ಕೃಷ್ಣನಿಗೆ ಬೇಡ್ವ ಹಾಗಾಗಿಯೇ ಕೃಷ್ಣನಿಗೆ ನಾಯಕಿಯಾಗಿ ರುಕ್ಮಿಣಿಯ (Rukmini) ಎಂಟ್ರಿಯಾಗಿದೆ. ಕೃಷ್ಣನ ದೇವಸ್ಥಾನಕ್ಕೆ ಸ್ನೇಹಿತೆ ಜೊತೆ ಬಂದಿರೋ ರುಕ್ಮಿಣಿ, ಸ್ನೇಹಿತೆಯ ಮಾತಿಗೆ ಉತ್ತರಿಸುತ್ತಾ, ಕೃಷ್ಣ ಅಂದ್ರೆ ನಂಗೆ ಬರಿ ಹೆಸರಲ್ಲ, ದೇವರಲ್ಲ, ಕೃಷ್ಣಾನೆ ನನಗೆ ಸರ್ವಸ್ವ ಅಂತಾಳೆ. 
 

ಕೃಷ್ಣ ನನ್ನನ್ನು ಇದೇ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ, ಕೃಷ್ಣ ನನ್ನನ್ನು ಮದುವೆ ಮಂಟಪದಿಂದ ಕರೆದುಕೊಂಡು ಬಂದಾಗ ನನಗೆ ಅವರು ಯಾರೋ, ಆದರೆ ಈಗ ನನಗೆ ಎಲ್ಲಾನೂ ಅವನೇ. ವಿನಯಮ್ಮನಿಗೆ ಕೃಷ್ಣ ಸಿಕ್ಕಿದ್ದು ಇಲ್ಲಿಯೇ ಅಲ್ವಾ ಎನ್ನುತ್ತಾ ಕೃಷ್ಣನಿಗೂ ಈ ರುಕ್ಮಿಣಿಗೂ ಹೇಗೆ ಪರಿಚಯ ಅನ್ನೋದನ್ನ ಪುಟ್ಟದಾಗಿ ಸ್ಪಷ್ಟವಾಗಿ ಹೇಳಿದ್ಲು ರುಕ್ಮಿಣಿ. 
 

ಇಡೀ ಜಗತ್ತೆ ಕೃಷ್ಣನ ಅವತಾರಕ್ಕಾಗಿ ಕಾಯ್ತಿರೋ ಹಾಗೆ, ನಾನು ನನ್ನ ಕೃಷ್ಣನಿಗಾಗಿ ಕಾಯ್ತಿದ್ದೀನಿ ಎನ್ನುವಾಗಲೇ ಅಲ್ಲೇ ಇದ್ದ ರಾಮಾಚಾರಿ ರುಕ್ಮಿಣಿಯ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ರಾಮಾಚಾರಿಯನ್ನೇ ಕೃಷ್ಣ ಎಂದು ಅಂದುಕೊಳ್ಳುವ ರುಕ್ಕು ಅವನ ಜೊತೆ ಮಾತನಾಡಲು ಓಡಿ ಹೋಗ್ತಾಳೆ, ಆದರೆ ಅಷ್ಟರಲ್ಲೇ ಅವನ ಬಳಿ ಬರೋ ಚಾರುವನ್ನು ಅವನು ಹೆಂಡ್ತಿ ಎನ್ನುತ್ತಾ ಕೈ ಕೈ ಹಿಡಿದು ಹೋಗೋದನ್ನು ನೋಡಿ ಶಾಖ್ ಆಗ್ತಾಳೆ ರುಕ್ಮಿಣಿ. 
 

ಕೃಷ್ಣ ಬಂದೇ ಬರ್ತಾನೆ, ಅವನು ನನಗಾಗಿಯೇ ಎಂದು ದೊಡ್ಡ ಕನಸನ್ನ ಕಂಡಿರುವ ರುಕ್ಮಿಣಿ ಕಣ್ಣೆದುರು ಕಾಣೋದನ್ನೆ ನಿಜಾ ಅಂತ ನಂಬಿದ್ದಾಳೆ, ಮುಂದೆ ಆಕೆಗೆ ನಿಜಾ ಗೊತ್ತಾಗೋದು ಯಾವಾಗ, ನಾರಾಯಣಾಚಾರಿ ಮನೆಗೆ ರುಕ್ಮಿಣಿ ಸೇರ್ತಾಳ ಕಾದು ನೋಡಬೇಕು. ಇನ್ನು ರಾಮಾಚಾರಿಯನ್ನು ಕಳೆದುಕೊಂಡು ಬೇಜಾರಲ್ಲಿದ್ದ ದೀಪಾಳನ್ನು ಕೃಷ್ಣನಿಗಾದ್ರೂ ಮದ್ವೆ ಮಾಡಿಸ್ತಾರೆ, ಎಂದು ಕಾದಿದ್ದವರಿಗೂ ಇದು ಶಾಕ್ ನೀಡಿದೆ. 
 

ಇನ್ನು ರುಕ್ಮಿಯ ಪಾತ್ರದಲ್ಲಿ ನಟಿಸುತ್ತಿರೋ ನಟಿಯನ್ನು ವೀಕ್ಷಕರು ಮೊದಲ ನೋಟದಲ್ಲಿ ಇಷ್ಟಪಟ್ಟಾಗಿದೆ. ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಇದಾರೆ ಕೃಷ್ಣ ನಾ ಮನಸು ಗೆದ್ದ ರುಕ್ಮಿಣಿ. ರುಕ್ಮಿಣಿ ತುಂಬಾನೆ ಮುದ್ದಾಗಿದ್ದಾರೆ. ಆದಷ್ಟು ಬೇಗನೆ ಕೃಷ್ಣ ಮತ್ತು ರುಕ್ಮಿಣಿ ಒಂದಾಗಲಿ ಎಂದು ಹಾರೈಸಿದ್ದಾರೆ ಜನ. 
 

Latest Videos

click me!