ನೀನು ನನ್ನನ್ನು ಪ್ರೀತಿಸೋ ರೀತಿ ಬೇರೆ... ಎನ್ನುತ್ತಿರುವ ಬಿಗ್ ಬಾಸ್ ಬೆಂಕಿ ತನಿಷಾ ಕುಪ್ಪಂಡ ಲವ್ವಲ್ಲಿ ಬಿದ್ದಿದ್ದಾರ?

First Published | Sep 4, 2024, 5:42 PM IST

ಬಿಗ್ ಬಾಸ್ ಸೀಸನ್ 10ರಲ್ಲಿ ಭರ್ಜರಿ ಸ್ಪರ್ಧೆ ನೀಡಿ ಬೆಂಕಿ ಅಂತಾನೆ ಹೆಸರು ಪಡೆದಿರೋ ತನಿಷಾ ಕುಪ್ಪಂಡ ಪ್ರೀತಿ ಬಗ್ಗೆ ಸಾಲು ಸಾಲು ಬರೆದಿರೋದನ್ನ ನೋಡಿದ್ರೆ ಲವ್ ಆಗಿದೆ ಅನ್ಸುತ್ತೆ. 
 

ಬಿಗ್ ಬಾಸ್ ಸೀಸನ್ 10ರ (Bigg Boss Season 10) ಮೂಲಕ ಜನಪ್ರಿಯತೆ ಪಡೆದ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರ್ತಾರೆ. ತಮ್ಮ ರೀಲ್ಸ್, ವಿಡಿಯೋ, ಪ್ರಮೋಷನ್ ಮೂಲಕವೇ ಸದ್ದು ಮಾಡ್ತಿರ್ತಾರೆ ಚೆಲುವೆ. 
 

ಇದೀಗ ಹೊಸದಾಗಿ ತನಿಷಾ (Tanisha Kuppanda) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದನ್ನ ನೋಡಿದ್ರೆ ತನಿಷಾಗೆ ಲವ್ ಆಗಿದ್ಯಾ ಅಂತ ಅನಿಸುತ್ತೆ. ಯಾಕಂದ್ರೆ ಅವರು ಬರೆದಿರುವಂತಹ ಪ್ರೀತಿಯ ಸಾಲುಗಳು ಹಾಗಿವೆ.
 

Tap to resize

ಕೆಂಪು ಬಣ್ಣದ ಸಲ್ವಾರ್ ಕಮೀಸ್ ಧರಿಸಿರುವ ತನಿಷಾ ಕುಪ್ಪಂಡ, ಮುಚ್ಚಿರುವ ಕಣ್ಣಿನಲ್ಲೂ ಮೂಡಿರುವ ಬಣ್ಣ ನೀನು ಎನ್ನುವ ಹಾಡಿಗೆ ಲೈಟ್ ಆಗಿ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಇಂಟ್ರೆಸ್ಟಿಂಗ್ ಆಗಿರುವ ಸಾಲುಗಳನ್ನು ಬರೆದಿದ್ದಾರೆ. 
 

ತನಿಷಾ ಕ್ಯಾಪ್ಶನ್ ಈ ರೀತಿ ಇದೆ. ನಾನು ಪ್ರೀತಿ ಹೇಳುವ ವಿಧಾನ ಬೇರೆ, ನೀನು ನನ್ನನ್ನು ಪ್ರೀತಿಸುವ ತರಹ ಬೇರೆ, ನಮ್ಮ ಸ್ನೇಹ ಸಂಬಂಧ ಸದಾ ಹೀಗೇ ಹೆಮ್ಮರವಾಗಿ ಬೆಳೆಯುತ್ತಾ ಇರಲಿ ಎಂದು ಬರೆದಿದ್ದಾರೆ. ಇದನ್ನ ನೋಡಿದ್ರೆ ತನಿಷಾಗೆ ಖಂಡಿತವಾಗಿಯೂ ಯಾರ್ ಮೇಲೋ ಲವ್ ಆಗಿದೆ ಅಂತಾನೆ ಅನಿಸತ್ತೆ. 

ನಿಜವಾಗಿಯೂ ತನಿಷಾ ಹೇಳಿರುವ ಪ್ರತಿ ಸಾಲುಗಳು ಅವರು ಧರಿಸಿರುವ ಆಭರಣಗಳನ್ನ ತೋರಿಸಿ. ಅವರು ತಮ್ಮ ಪ್ರೀತಿ ಅಂತ ಹೇಳಿದ್ದೆ, ತಾವು ಧರಿಸಿರುವ ಆಭರಣಗಳನ್ನು. ಅದ್ರೆ ಅವರು ಬರೆದಿರೋ ಸಾಲು ನೋಡಿ, ಅಭಿಮಾನಿಗಳು ಯಾರನ್ನ ವರ್ತೂರ್ ಸಂತೋಷ್ (Varthur Santhosh)  ಅವರನ್ನ ನೆನಪಿಸಿಕೊಳ್ತಿದ್ದೀರಾ ಎಂದಿದ್ದಾರೆ. 

ತನಿಷಾ ವಿಡಿಯೋಗೆ ಫ್ಯಾನ್ಸ್ ಖುಷಿಯಾಗಿದ್ದು, ಮುದ್ದಾದ ಈ ಚೆಲುವಿಗೆ ಈ ನಗುವಿಗೆ ಪದೇ ಪದೇ ಸೋಲುತಿಹೇನು ಎಂದಿದ್ದಾರೆ. ಅಲ್ಲದೇ ಈ ಕ್ಯಾಪ್ಶನ್ ಹಾಕಿರೋದೆ ವರ್ತೂರ್ ಸಂತೋಷ್ ಗೆ ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ವರ್ತೂರ್ ಮತ್ತು ನಿಮ್ಮ ಮಧ್ಯೆ ಏನಾದ್ರೂ ಸಮಸ್ಯೆ ಇದೆಯಾ? ಅಂತಾನೂ ಕೇಳ್ತಿದ್ದಾರೆ ಫ್ಯಾನ್ಸ್. 

Latest Videos

click me!