ಪ್ರಮೋದ್ ಶೆಟ್ಟಿ ಬರ್ತ್ ಡೇ ಪಾರ್ಟಿಯಲ್ಲಿ ‘ಅಣ್ಣಯ್ಯ’ ಸೀರಿಯಲ್ ತಂಡದ ಮೋಜು ಮಸ್ತಿ

Published : Sep 04, 2024, 02:44 PM ISTUpdated : Sep 04, 2024, 03:38 PM IST

ಸ್ಯಾಂಡಲ್ ವುಡ್ ನಟ, ಲಾಫಿಂಗ್ ಬುದ್ಧ ಖ್ಯಾತಿಯ ಪ್ರಮೋದ್ ಶೆಟ್ಟಿ ಬರ್ತ್ ಡೇ ಪಾರ್ಟಿಯಲ್ಲಿ ಅಣ್ಣಯ್ಯ ಧಾರಾವಾಹಿ ತಂಡ ಸೇರಿ ಸಂಭ್ರಮಿಸಿದ್ದಾರೆ.   

PREV
17
ಪ್ರಮೋದ್ ಶೆಟ್ಟಿ ಬರ್ತ್ ಡೇ ಪಾರ್ಟಿಯಲ್ಲಿ  ‘ಅಣ್ಣಯ್ಯ’ ಸೀರಿಯಲ್ ತಂಡದ ಮೋಜು ಮಸ್ತಿ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ (Annayya Serial) ಅದ್ಭುತವಾಗಿ ಮೂಡಿ ಬರುತ್ತಿದ್ದು,  ಸೀರಿಯಲ್ ಪ್ರಿಯರು ಸೀರಿಯಲ್ ಮೆಚ್ಚಿಕೊಂಡಿದ್ದಾರೆ. ಇದೀಗ ಅಣ್ಣಯ್ಯ ಟೀಮ್ ಮತ್ತು ಲಾಫಿಂಗ್ ಬುಧ್ದ ಖ್ಯಾತಿಯ ಪ್ರಮೋದ್ ಶೆಟ್ಟಿ ಜೊತೆಯಾಗಿದ್ದಾರೆ. 
 

27

ಹೌದು, ಸ್ಯಾಂಡಲ್ ವುಡ್ ನಟ ಹಾಗೂ ನಿರ್ಮಾಪಕರಾಗಿರುವ ಪ್ರಮೋದ್ ಶೆಟ್ಟಿ (Pramod Shetty) ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬರ್ತ್ ಡೇ ಸಂಭ್ರಮದಲ್ಲಿ ಲಾಫಿಂಗ್ ಬುದ್ಧ ಟೀಮ್ ಮತ್ತು ಅಣ್ಣಯ್ಯ ಸೀರಿಯಲ್ ಟೀಮ್ ಜೊತೆಯಾಗಿದೆ. 
 

37

ಸ್ಯಾಂಡಲ್ ವುಡ್ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿರುತೆರೆಯ ಅಣ್ಣಯ್ಯ ಧಾರಾವಾಹಿಯ ತಾರೆಯರು ಪಾಲ್ಗೊಳ್ಳೋದಕ್ಕೆ ಕಾರಣ ಏನಂದ್ರೆ, ಈ ಧಾರಾವಾಹಿ ನಿರ್ಮಾಣ ಮಾಡ್ತಿರೋದೆ ಪ್ರಮೋದ್ ಶೆಟ್ಟಿ (producer Pramod Shetty). 
 

47

ಇದೇ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿರುವ ಪ್ರಮೋದ್ ಶೆಟ್ಟಿ, ತಮ್ಮ ಮೊದಲ ಪ್ರಯತ್ನದಲ್ಲಿ ಅಣ್ಣಯ್ಯ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ. ಅಣ್ಣಯ್ಯ ಧಾರಾವಾಹಿಗೆ ಉತ್ತಮ ಟಿಆರ್ಪಿ ಸಿಕ್ಕಿದ್ದು, ಅದರ ಸಂಭ್ರಮ ಒಂದೆಡೆಯಾದ್ರೆ, ನಾಯಕವಾಗಿ ನಟಿಸಿರುವ ಲಾಫಿಂಗ್ ಬುದ್ಧ ಸಿನಿಮಾ ಕೂಡ ಸಿನಿ ರಸಿಕರ ಮನಸ್ಸು ಗೆದ್ದಿದೆ. 
 

57

ಹುಟ್ಟು ಹಬ್ಬ ಸಮಾರಂಭದಲ್ಲಿ ಅಣ್ಣಯ್ಯ ಸೀರಿಯಲ್ ನಟರಾದ ನಿಶಾ ರವಿಕೃಷ್ಣನ್ (Nisha Ravikrishnan), ವಿಕಾಸ್ ಉತ್ತಯ್ಯ, ಮಧುಮತಿ, ಪ್ರತೀಕ್ಷ ಶ್ರೀನಾಥ್, ನಾಗಶ್ರೀ ಬೇಗಾರ್, ಸುಷ್ಮಿತಾ ಜೈನ್, ಚಿರಂಜಿವಿ ಮೊದಲಾದ ನಟರು ಭಾಗವಹಿಸಿದ್ದರು.
 

67

ನಟಿ ನಿಶಾ ರವಿಕೃಷ್ಣನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೆ ಸೆಲೆಬ್ರೇಶನ್ (birthday celebration) ಫೋಟೊಗಳನ್ನು ಹಂಚಿಕೊಂಡಿದ್ದು, ಸೀರಿಯಲ್ ತಂಡದೊಂದಿಗೆ ಸಖತ್ತಾಗಿ ಎಂಜಾಯ್ ಮಾಡಿದ್ದಾರೆ.
 

77

ನಾಲ್ವರು ತಂಗಿಯರನ್ನು ಕಾಯುವ ಅಣ್ಣಯ್ಯ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ನಿಶಾ ರವಿಕೃಷ್ಣನ್ ಮತ್ತು ವಿಕಾಸ್ ಉತ್ತಯ್ಯ, (Vikas Uttaiah) ಧಾರಾವಾಹಿಯ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ನಾಗೇಂದ್ರ ಶಾ ಪಾರ್ವತಿ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದು, ಖಡಕ್ ವಿಲನ್ ಆಗಿ ನಟಿಸುತ್ತಿದ್ದಾರೆ. 
 

Read more Photos on
click me!

Recommended Stories